Train Ticket: ಕಡಿಮೆ ಬೆಲೆಯಲ್ಲಿ ಆನ್‌ಲೈನ್ ಮೂಲಕ, ರೈಲು ಟಿಕೆಟ್ ನ್ನು ಹೀಗೆ ಬುಕ್ ಮಾಡಿ!
Train Ticket: ಬಹುತೇಕರಿಗೆ ರೈಲು ಪ್ರಯಾಣ ಅಗತ್ಯವಾಗಿರುತ್ತದೆ. ಮೊದಲೆಲ್ಲಾ ರೈಲ್ವೆ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಬೇಕಿತ್ತು. ಆದರೆ, ಈಗ ಟಿಕೆಟ್‌ಗಳನ್ನು ಬುಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ. ಈಗ ಯಾವುದೇ ರೈಲಿನಲ್ಲಿ ಯಾವುದೇ ಸಮಯದಲ್ಲಿ ಎಲ್ಲಿಂದಲಾದರೂ ಮೊಬೈಲ್ ಆಪ್ ಮೂಲಕ ಟಿಕೆಟ್ ಬುಕ್ (Train Ticket) ಮಾಡಬಹುದು. ಮುಖ್ಯವಾಗಿ IRCTC ಒದಗಿಸುವ ಸೌಲಭ್ಯವನ್ನು ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು.
ಸಾಮಾನ್ಯವಾಗಿ ಭಾರತದಲ್ಲಿ ಅನೇಕ ಕಂಪನಿಗಳು ತಮ್ಮ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಒದಗಿಸುತ್ತವೆ. ಈ ಖಾಸಗಿ ಕಂಪನಿಗಳ ಅಪ್ಲಿಕೇಶನ್‌ಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಟಿಕೆಟ್ ಬುಕ್ ಮಾಡುತ್ತಾರೆ. ಖಾಸಗಿ ಅಪ್ಲಿಕೇಶನ್‌ಗಳಲ್ಲಿ ವಿವಿಧ ಶುಲ್ಕಗಳ ಕಾರಣ, ಟಿಕೆಟ್‌ನ ಬೆಲೆ ತುಂಬಾ ದುಬಾರಿಯಾಗುತ್ತದೆ. ಅಂದರೆ ಏಜೆಂಟ್ ಸೇವಾ ಶುಲ್ಕ, ಪಾವತಿ ಗೇಟ್‌ವೇ ಶುಲ್ಕ ಮುಂತಾದ ಹೆಚ್ಚುವರಿ ಶುಲ್ಕಗಳು ವಿಧಿಸಲಾಗುತ್ತದೆ. ಇದರಿಂದ ಟಿಕೆಟ್ ಬೆಲೆಯೊಂದಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಆದರೆ, ಕಡಿಮೆ ಬೆಲೆಯಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಒಂದು ಮಾರ್ಗವಿದೆ.
ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಯಲ್ಲಿ ಬುಕ್ ಮಾಡಬಹುದು. IRCTC ಒದಗಿಸುವ ಈ ಆನ್‌ಲೈನ್ ಸೇವೆಯನ್ನು ಬಳಸಲು ಏಜೆಂಟ್ ಸೇವಾ ಶುಲ್ಕ, ಪಾವತಿ ಗೇಟ್‌ವೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ನೀವು IRCTC ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಬುಕ್ ಮಾಡಬಹುದು. ಇದರಿಂದ ರೂ.100 ಕ್ಕಿಂತ ಹೆಚ್ಚು ಉಳಿಸಬಹುದು. ಪ್ರಯಾಣದ ದೂರ, ಆಯ್ಕೆ ಮಾಡುವ ಕೋಚ್ ಅನ್ನು ಅವಲಂಬಿಸಿ ಉಳಿಸುವ ಮೊತ್ತ ಹೆಚ್ಚು ಅಥವಾ ಕಡಿಮೆ ಇರಬಹುದು.