Electric vehicle: ಹೀಗೂ ಯೂಸ್ ಆಗುತ್ತೆ ನೋಡಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟಿ!

Electric vehicle: ಎಲೆಕ್ಟ್ರಿಕ್ ಸ್ಕೂಟರ್‌ಗಳು (Electric vehicle)ಒಂದಲ್ಲ ಒಂದು ಕಾರಣಕ್ಕೆ ಜನರ ಮನಸು ಗೆಲ್ಲುತ್ತಿದೆ. ಮುಖ್ಯವಾಗಿ ಇಂಧನ ಚಾಲಿತ ಸ್ಕೂಟರ್‌ಗಳಿಗಿಂತ ಹೆಚ್ಚಿನ ಸ್ಟೋರೇಜ್ ಅನ್ನು ಎಲೆಕ್ಟ್ರಿಕ್ ಸ್ಕೂರ್‌ಗಳಲ್ಲಿ ನೀಡುವ ಮೂಲಕ ಹೆಚ್ಚಿನ ಸರಕುಗಳನ್ನು ಸಾಗಿಸಲು ಅನುವು ಮಾಡಿಕೊಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎಥರ್ ರಿಜ್ಟಾ 34 ಲೀಟರ್ ಶೇಖರಣಾ ಸ್ಥಳವನ್ನು ಹೊಂದಿದೆ.

ಕಳೆದ ಏಪ್ರಿಲ್‌ನಲ್ಲಿ ಭಾರತದಲ್ಲಿ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಯಿತು. ಇದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಅಗ್ಗದ ಬೆಲೆಯ ಬೆಸ್ಟ್ ಫ್ಯಾಮಿಲಿ ಸ್ಕೂಟರ್ ಎಂದು ಜನಪ್ರಿಯತೆ ಪಡೆದುಕೊಂಡಿದೆ.

ಹೌದು, ಸಾಮಾನ್ಯ ಸ್ಕೂಟರ್‌ಗಳಿಗೆ ಹೋಲಿಸಿಕೊಂಡರೆ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬರೋಬ್ಬರಿ 56 ಲೀಟರ್ ಸ್ಟೋರೇಜ್ ಸ್ಪೇಸ್ ಹೊಂದಿದೆ. ಇದರಲ್ಲಿ ಸೀಟಿನ ಕೆಳಗೆ 34 ಲೀಟರ್ ಮತ್ತು ಮುಂಭಾಗದ ಫ್ರಂಕ್‌ನಲ್ಲಿ 22 ಲೀಟರ್ ಶೇಖರಣಾ ಸ್ಥಳವಿದೆ. ಆದ್ದರಿಂದ ನೀವು ಲ್ಯಾಪ್ ಟಾಪ್, ದಿನಸಿ, ಹೆಲ್ಮೆಟ್, ತರಕಾರಿಗಳಂತಹ ಬಹಳಷ್ಟು ವಸ್ತುಗಳನ್ನು ಇಟ್ಟುಕೊಳ್ಳಬಹುದು. ಹಾಗಾಗಿಯೇ ಇದನ್ನು ಫ್ಯಾಮಿಲಿ ಸ್ಕೂಟರ್ ಎಂದು ಕರೆಯಲಾಗುತ್ತದೆ.

ಆದರೆ ಇತ್ತೀಚೆಗೆ ಇಂತಹ ಸ್ಕೂಟರ್ ಅನ್ನು ವಿಚಿತ್ರವಾಗಿ ಬಳಕೆ ಮಾಡಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡಾ ಒಂದು ಕ್ಷಣ ಶಾಕ್ ಆಗುತ್ತೀರಿ ಖಂಡಿತಾ.

ಹೌದು, ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ನ ಬೂಟ್ ಭಾಗವನ್ನು ಸಂಪೂರ್ಣ ಬಿಯರ್ ಬಾಟಲಿಗಳನ್ನು ತುಂಬಲಾಗಿದೆ. ಬರೋಬ್ಬರಿ 12 ಬಿಯರ್ ಬಾಟಲಿಗಳನ್ನು ತುಂಬಿದ್ದಾರೆ. ವಿಡಿಯೋದಲ್ಲಿ ನಮಗೆ ಮೇಲ್ನೋಟಕ್ಕೆ ಕಾಣುವುದು ಕೇವಲ 7 ಬಿಯರ್ ಬಾಟಲಿಗಳು ಮಾತ್ರ, ಉಳಿದ ಐದು ಬಿಯರ್ ಬಾಟಲಿಗಳು ಇನ್ನೂ ಕೆಳಗೆ ಇಡಲಾಗಿದೆ. ಅಲ್ಲದೇ ಬಿಯರ್‌ ಬಾಟಲಿಗಳನ್ನು ತಂಪಾಗಿಡಲು ಸಂಪೂರ್ಣ ಐಸ್ ಕ್ಯೂಬ್‌ಗಳೊಂದಿಗೆ ತುಂಬಲಾಗಿದೆ.

ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ರೂ.1.10 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ವಾಸ್ತವವಾಗಿ ಎಥರ್ ರಿಜ್ಟಾ ಹೆಚ್ಚಿನ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಹೆಚ್ಚಿನ ‘ಸ್ಟೋರೇಜ್ ಸ್ಪೇಸ್’ ಅನ್ನು ಹೊಂದಿದೆ. ಒಂದು ರೀತಿಯಲ್ಲಿ ಈ ವಿಡಿಯೋ ಎಥರ್ ಕಂಪನಿಗೆ ಉಚಿತ ಪ್ರಚಾರವಾಗಿದೆ.

Leave A Reply

Your email address will not be published.