Dr G Parameshwar : ‘ದರ್ಶನ್ ಗೆ ಜಾಮೀನು ಕೊಡದಂತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ’ – ಗೃಹ ಸಚಿವ ಪರಮೇಶ್ವರ್ ಶಾಕಿಂಗ್ ಹೇಳಿಕೆ
Dr G Parameshwar: ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನವರಿಗೆ ರಾಜ್ಯ ಸರ್ಕಾರ ಭಿಕ್ಷೆ ಹಾಕಿ ನೀಡಿದೆ. ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಕೋರಿದರೆ ನಾವು ಸುಪ್ರೀಂ ಕೋರ್ಟ್ ಗೆ ಹೋಗಿ ಜಾಮೀನು ನೀಡಿದಂತೆ ಅರ್ಜಿ ಹಾಕುತ್ತೇವೆ ಎಂದು ಹೇಳಿ ಗೃಹ ಸಚಿವ ಡಾ ಜಿ ಪರಮೇಶ್ವರ್(Dr G Parameshwar )ಅವರು ಹೇಳಿದ್ದಾರೆ.
ಹೌದು, ಕೊಲೆ ಕೇಸ್ನ ಆರೋಪಿಯಾಗಿರುವ ನಟ ದರ್ಶನ್ (Actor Darshan) ಸದ್ಯ ಮಧ್ಯಂತರ ಜಾಮೀನು (Interim Bail) ಪಡೆದು ಜೈಲಿಂದ ಹೊರಗೆ ಬಂದಿದ್ದಾರೆ. ಬೆನ್ನು ನೋವಿಂದ ಬಳಲುತ್ತಿರುವ ದರ್ಶನ್, ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈಕೋರ್ಟ್ನಲ್ಲಿ ಇಂದು (ನ.21) ನಡೆದ ದರ್ಶನ್ ಬೇಲ್ ಅರ್ಜಿ ವಿಚಾರಣೆ ಕೂಡ ಮುಂದೂಡಿಕೆ ಆಗಿದೆ. ಇತ್ತ ದರ್ಶನ್ ಕೇಸ್ ಬಗ್ಗೆ ಮಾತಾಡಿದ ಗೃಹ ಸಚಿವ ಪರಮೇಶ್ವರ್, ದರ್ಶನ್ಗೆ ಬೇಲ್ ಕೊಡಬಾರದು ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ದರ್ಶನ್ ಅವರು ಚಿಕಿತ್ಸೆಯ ಸಲುವಾಗಿ ಜಾಮೀನು ಪಡೆದಿದ್ದಾರೆ. ಆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದ್ದಾರೆ. ‘ಜಾಮೀನು ಅವಧಿ ಮುಗಿದ ಬಳಿಕ ದರ್ಶನ್ ಜೈಲಿಗೆ ಹೋಗಬೇಕಾಗುತ್ತದೆ. ಮತ್ತೆ ಅವರು ಜಾಮೀನು ಕೇಳುತ್ತಾರೇನೋ ಗೊತ್ತಿಲ್ಲ. ಅವರಿಗೆ ಜಾಮೀನು ಕೊಡಬಾರದು ಅಂತ ನಾವು ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡುತ್ತೇವೆ. ಆ ಪ್ರಕ್ರಿಯೆ ನಡೆದಿದೆ. ಇನ್ನೂ ಕೆಲವು ಸಾಕ್ಷಿ ಕಲೆ ಹಾಕುವುದು ಬಾಕಿ ಇದೆ. ತನಿಖೆ ಪೂರ್ಣಗೊಂಡ ಬಳಿಕ ಅಡಿಷ್ನಲ್ ಚಾರ್ಜ್ಶೀಟ್ ಸಲ್ಲಿಕೆ ಆಗುತ್ತದೆ’ ಎಂದು ಹೇಳಿದ್ದಾರೆ.