Mangaluru: ಈಜುಕೊಳದಲ್ಲಿ ಮುಳುಗಿ ಪ್ರಾಣಬಿಟ್ಟ ಪ್ರಾಣ ಸ್ನೇಹಿತೆಯರ ಪ್ರಕರಣ: ರೆಸಾರ್ಟ್ ಸೀಲ್ ಡೌನ್; ಇಬ್ಬರ ಬಂಧನ
Mangaluru: ಮೂವರು ಗೆಳತಿಯರ ಮರಣ ಮಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಹೌದು, ಮಂಗಳೂರು (Mangaluru) ಸಮೀಪ ಉಚ್ಚಿಲದ ವಾಸ್ಕೋ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಮೂವರು ಯುವತಿಯರ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ರನ್ನು ಇದೀಗ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ದಿನ ಭಾನುವಾರ ಸಂಜೆ ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಪರಿಶೀಲನೆ ನಡೆಸಿದ್ದು, ಬಳಿಕ ರೆಸಾರ್ಟ್ ಪರವಾನಗಿ ರದ್ದುಗೊಳಿಸುವ ಆದೇಶ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಗೆ ರದ್ದು ಗೊಳಿಸಲು ಮತ್ತು, ರೆಸಾರ್ಟ್ ಸೀಲ್ ಡೌನ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.
ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ ಪೊಲೀಸ್ ಕಮೀಷನರ್ ಅನುಪಮ ಅಗರ್ವಾಲ್ ಮಾಧ್ಯಮಗಳ ಜತೆ ಮಾತನಾಡಿ, “ ಘಟನೆಯಲ್ಲಿ ಖಾಸಗಿ ರೆಸಾರ್ಟ್ ನವರ ವೈಫಲ್ಯ ಎದ್ದು ಕಾಣುತ್ತದೆ. ಸಿ ಸಿ ಟಿವಿ ರೆಕಾರ್ಡ್ ದೊರೆತಿದೆ. ರೆಸಾರ್ಟ್ನಲ್ಲಿ ಲೈಫ್ ಗಾರ್ಡ್ ಯಾರು ಇರಲಿಲ್ಲ. ಆಳದ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಮುಳುಗುತ್ತಿದ್ದ ವೇಳೆ ಆ ಯುವತಿಯರು ಬೊಬ್ಬೆ ಹೊಡೆದು ಕೂಗಾಡಿದರು ಯಾರು ರಕ್ಷಣೆಗೆ ಬರಲಿಲ್ಲ. ಇನ್ನು ಈಜು ಕೊಳದಲ್ಲಿ ಮೃತಪಟ್ಟ ಕೀರ್ತನ, ನಿಶಿತಾ ಹಾಗೂ ಪಾರ್ವತಿ ಅವರ ಪೋಷಕರು ರವಿವಾರ ತಡರಾತ್ರಿ ಆಗಮಿಸಿದ್ದು, ಮೂವರ ಮೃತದೇಹ ವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಪಾರ್ವತಿ, ನಿಶಿತಾ ಮತ್ತು ಕೀರ್ತನಾ ಬಾಲ್ಯದಿಂದಲೂ ಸ್ನೇಹಿತೆಯರು, ಎಲ್ಲರೂ ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಎಸ್ ಎಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದವರು. ವಾರಾಂತ್ಯದ ರಜೆ ಸಿಕ್ಕಿದ್ದರಿಂದ ಎರಡು ದಿನಗಳ ಕಾಲ ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದು, ಮೂವರು ಶುಕ್ರವಾರ ರಾತ್ರಿ ರೈಲಿನಲ್ಲಿ ಪ್ರಯಾಣ ಬೆಳೆಸಿ ಶನಿವಾರ ರಾತ್ರಿ ರೆಸಾರ್ಟ್ನಲ್ಲಿ ಉಳಿದಿದ್ದು ಮಾಹಿತಿ ವರದಿ ಆಗಿದೆ. ಇನ್ನು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿದ ಬಳಿಕ ಪ್ರಾಣ ಉಳಿಸಲು ಹಲವು ನಿಮಿಷಗಳ ಕಾಲ ಹೋರಾಡಿದ್ದರು. ಇದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.