Jamir ahmad: ಸಚಿವ ಜಮೀರ್ ಅಹ್ಮದ್’ಗೆ ‘ಲೋಕಾಯುಕ್ತ ಸಮನ್ಸ್‌’! ಕಾರಣ ಏನು?!

Jamir ahmad: ‘ಸಚಿವ ಜಮೀರ್ ಅಹ್ಮದ್’ಗೆ (Jamir ahmad) ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪದಲ್ಲಿ ‘ಲೋಕಾಯುಕ್ತ ಸಮನ್ಸ್‌’ ಜಾರಿಗೊಳಿಸಲಾಗಿದೆ.

ಹೌದು, ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪದಲ್ಲಿ ಲೋಕಾಯುಕ್ತದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಡಿಸೆಂಬರ್.3, 2024ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.

ಈಗಾಗಲೇ ಐಎಂಎ ಚಿಟ್‌ಫಂಡ್‌ ವಂಚನೆ ಪ್ರಕರಣದ ತನಿಖೆ ವೇಳೆ, ಐಎಂಎ ಮತ್ತು ಜಮೀರ್‌ ಅಹಮದ್‌ ಅವರ ನಡುವೆ ಹಣಕಾಸು ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯವು (ED) ಪತ್ತೆ ಮಾಡಿತ್ತು. ಈ ಬಳಿಕ 2021ರಲ್ಲಿ ಇಡಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.

ಇನ್ನೂ ಚಿಟ್‌ಫಂಡ್‌ ವಂಚನೆಗೆ ಸಂಬಂಧಿಸಿದಂತೆ ದಾಳಿ ಸಂದರ್ಭದಲ್ಲಿ ಯಾವ ದಾಖಲೆಗಳೂ ಪತ್ತೆಯಾಗಿರಲಿಲ್ಲ. ಆದರೆ ಜಮೀರ್ ಅವರು ತಮ್ಮ ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿರುವುದು ಪತ್ತೆಯಾಗಿತ್ತು. ಈ ಸಂಬಂಧ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ಇ.ಡಿ ವಿವರಣಾತ್ಮಕವಾದ ವರದಿಯನ್ನು ನೀಡಿತ್ತು. ಜತೆಗೆ ತನಿಖೆಯ ಅಗತ್ಯವಿದೆ ಎಂದು ಹೇಳಿತ್ತು.

ಇನ್ನು 2022ರ ಸೆಪ್ಟೆಂಬರ್‌ನಲ್ಲಿ ಎಸಿಬಿ ರದ್ದಾದ ಕಾರಣ, ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದವು. ಆನಂತರ ಜಮೀರ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣನೀಯ ಮಟ್ಟದ ತನಿಖೆ ನಡೆದಿರಲಿಲ್ಲ. ಆದರೆ, ಈಗ ಪ್ರಕರಣಕ್ಕೆ ಮರುಜೀವ ನೀಡಿ, ಸಚಿವ ಜಮೀರ್ ಅಹ್ಮದ್ ಗೆ ಬಿಗ್ ಶಾಕ್ ನೀಡಲಾಗಿದೆ.

Leave A Reply

Your email address will not be published.