Kerala: ಆಂಬುಲೆನ್ಸ್ ಗೆ ದಾರಿ ಬಿಡದೆ ದರ್ಪ – ಇನ್ಮುಂದೆ ಆ ವ್ಯಕ್ತಿ ಜೀವನದಲ್ಲೇ ಗಾಡಿ ಓಡಿಸಲು ಸಾಧ್ಯವಿಲ್ಲ ನೋಡಿ !!

Kerala: ಆಂಬ್ಯೂಲೆನ್ಸ್ ಸೈರನ್‌ ಕೇಳಿದಾಗ ಎಂಥವರಿಗೂ ಒಂಥರಾ ಆಗುತ್ತೆ, ಯಾವ ಜೀವ ಆಪತ್ತಿನಲ್ಲಿದೆಯೋ ಎಂದು ಯೋಚಿಸುತ್ತೇವೆ, ಎಂಥದ್ದೇ ಟ್ರಾಫಿಕ್ ಜಾಮ್‌ ಇರಲಿ ಆಂಬ್ಯೂಲೆನ್ಸ್ ಸೈರನ್‌ ಕೇಳಿದ ತಕ್ಷಣ ಆ ಗಾಡಿ ಹೋಗಲು ಟ್ರಾಫಿಕ್ ಕ್ಲಿಯರ್ ಮಾಡಲಾಗುವುದು, ಗಾಡಿಯಲ್ಲಿರುವ ವ್ಯಕ್ತಿಗೆ ಒಂದೊಂದು ನಿಮಿಷವೂ ಮುಖ್ಯ ಆಗಿರುತ್ತದೆ. ಹೀಗಾಗಿಯೇ ಆಂಬ್ಯೂಲೆನ್ಸ್ ಶಬ್ದ ಕೇಳಿಸಿದ ತಕ್ಷಣ ಸೈಡ್‌ ಕೊಡಬೇಕು.

ಆದರೆ ಕೇರಳ(Kerala)ದಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡ ರೀತಿಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ, ಆಂಬ್ಯೂಲೆನ್ಸ್ ಅಷ್ಟೊಂದು ಸೈರನ್ ಹಾಕಿದರೂ ಆತ ಮಾತ್ರ ಆಂಬ್ಯೂಲೆನ್ಸ್‌ಗೆ ಸೈಡ್‌ ನೀಡಲೇ ಇಲ್ಲ, ಆಂಬ್ಯೂಲೆನ್ಸ್‌ಗೆ ಸೈಡ್‌ ನೀಡದಿರುವುದು ಅಪರಾಧ ಎಂಬ ಕಾನೂನು ಕೂಡ ಇದೆ ಆದರೂ ಆತ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಆ ಆಂಬ್ಯೂಲೆನ್ಸ್ ಸೈರನ್‌ ಮೂಲ ಸೈಡ್‌ ಕೊಡು ಎಂದು ಕೇಳುತ್ತಿದ್ದರೂ ಆತ ಮಾತ್ರ ಸ್ವಲ್ಪವೂ ವಿವೇಚನೆಯಿಲ್ಲದಂತೆ ವರ್ತಿಸಿದ್ದಾನೆ. ಸದ್ಯ ಪುಂಡಾಟಿಕೆಯ ವೀಡಿಯೋ ವೈರಲ್‌ ಆಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು.

ಆತನ ಪುಂಡಾಟಿಕೆಯ ವೀಡಿಯೋ ವೈರಲ್‌ ಆಗುತ್ತಿದೆ. ಈ ರೀತಿ ಕೆಟ್ಟ ವರ್ತನೆ ತೋರಿದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಆತನಿಗೆ 2 ಲಕ್ಷದ 50 ಸಾವಿರ ದಂಡ ಹಾಕಿ ಆತನ ಲೈಸೆನ್ಸ್ ಕೂಡ ಕ್ಯಾನ್ಸಲ್ ಮಾಡಲಾಗಿದೆ.

Leave A Reply

Your email address will not be published.