Waqf: ಬಿಜೆಪಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ ಅಭಿಯಾನ ಆರಂಭಿಸಿದ್ದಾರೆ: ಪ್ರಿಯಾಂಕ್ ಖರ್ಗೆ
Waqf: ಬಿಜೆಪಿಯವರು (BJP) ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಕ್ಫ್ (Waqf) ಅಭಿಯಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ಫ್ ಅಭಿಯಾನ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಕ್ಫ್ ಅಭಿಯಾನ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿ ಅವರು ಹೋರಾಟ ಮಾಡಲಿ ಯಾರು ಬೇಡ ಅನ್ನೋಲ್ಲ. ವಿಪಕ್ಷದಲ್ಲಿ ಇದ್ದವರಿಗೆ ಇದೇ ಕೆಲಸ. ಆದ್ರೆ ಜನರ ಸಮಸ್ಯೆ ಬಗೆಹರಿಸಲು ಅವರಿಂದ ಆಗಲಿಲ್ಲ ಎಂದು ಟೀಕೆ ಮಾಡಿದ್ದಾರೆ.
ಮುಖ್ಯವಾಗಿ ನನ್ನ ಪ್ರಶ್ನೆಗೆ ಮೊದಲು ಬಿಜೆಪಿ ಅವರು ಉತ್ತರ ಕೊಡಲಿ. ಕೇಂದ್ರ ಸರ್ಕಾರ ವಕ್ಫ್ ಆಸ್ತಿಗೆ ಜಿಯೋ ಮ್ಯಾಪಿಂಗ್ಗೆ ಹಣ ಕೊಟ್ಟಿರೋದು ಸುಳ್ಳಾ? ವಕ್ಫ್ ಆಸ್ತಿ ಉಳಿಸುತ್ತೇವೆ ಅಂತ ಹೇಳಿರೋರು ಸುಳ್ಳಾ? ಬಿಜೆಪಿ ಅವರು ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಉಳಿಸುತ್ತೇವೆ ಅಂತ ಹೇಳಿರೋದು ಸುಳ್ಳಾ? ಮೊದಲು ಅವರು ಪ್ರಶ್ನೆಗೆ ಉತ್ತರ ಕೊಡಲಿ.
ಬಿಜೆಪಿ ಅವಧಿಯಲ್ಲಿ ಅವರು ವಕ್ಫ್ ಬೋರ್ಡ್ ಮುಚ್ಚಿದ್ರಾ? ಅವರು ಎಷ್ಟು ದೇವಾಲಯ ರಕ್ಷಣೆ ಮಾಡಿದ್ದಾರೆ ಹೇಳಲಿ. ನಾನು ಬೇಕಾದರೆ ಅಂಕಿ ಅಂಶಗಳನ್ನು ಕೊಡುತ್ತೇನೆ. ಬಿಜೆಪಿ ಅವರಿಗೆ ನಾವು ಕೇಳೋ ಪ್ರಶ್ನೆಗೆ ಬಿಟ್ಟು ಉಳಿದದಕ್ಕೆ ಉತ್ತರ ಕೊಡುತ್ತಾರೆ. ನಾವು ಕೇಳೋ ಪ್ರಶ್ನೆಗೆ ಉತ್ತರ ಕೊಡಲಿ.
ಸಂಸದ ತೇಜಸ್ವಿಸೂರ್ಯ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದರು. ಯಾಕೆಂದರೆ ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಅದಕ್ಕೆ ಡಿಲೀಟ್ ಮಾಡಿದ್ದು. ಬಿಜೆಪಿ ಅವರು ಅಸ್ತಿತ್ವ ಉಳಿಸಿಕೊಳ್ಳೋಕೆ ಇದನ್ನ ಮಾಡುತ್ತಿರುವುದು. ನಾವು ಬಂದ ಮೇಲೆ ಯಾವುದು ಬದಲಾವಣೆ ಇಲ್ಲ. ಇವರ ಕಾಲದಲ್ಲಿ ಇದ್ದ ಕಾನೂನೇ ಇರೋದು ಈಗಲೂ. ಇದೀಗ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಬಿಜೆಪಿ ಯವರು ಅಭಿಯಾನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.