Lawyer Jagadish: ಹಿಂದಿ ಬಿಗ್ ಬಾಸ್ ನತ್ತ ಲಾಯರ್ ಜಗದೀಶ್?!
Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಅವರು ಆಚೆ ಹಾಕಲ್ಪಟ್ಟಾಗಿನಿಂದ ಸಂದರ್ಶನ, ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಅವರ ಖ್ಯಾತಿ ಎಲ್ಲೋ ಹೋದಂತಿದೆ. ಇವನ್ನೆಲ್ಲ ಜಗದೀಶ್ ಅವರು ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅದು ಕೂಡ ಹಿಂದಿ ಬಿಗ್ ಬಾಸ್ ನಲ್ಲಿ ಜಗದೀಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಹೌದು, ಇದಕ್ಕೆಲ್ಲ ಕಾರಣ ಲಾಯರ್ ಜಗದೀಶ್(Lawyer Jagadish) ಅವರೇ ನೀಡಿರುವಂತಹ ಕೆಲವು ಹೇಳಿಕೆಗಳು. ಜಗದೀಶ್ ಅವರು ಕೆಲವು ಡೈಲಾಗ್ಗಳನ್ನು ಹೊಡೆಯುವುದನ್ನು ನಾವು ನೋಡಿದ್ದೇವೆ. ಅವುಗಳಲ್ಲಿ ಕೆಲವು ತುಂಬಾ ಅರ್ಥವನ್ನು ಉಳ್ಳದಾಗಿರುತ್ತದೆ. ಅಂತೀಯ ಇದೀಗ ಜಗದೀಶ್ ಅವರು ಚಂದನವನ ಟು ಬಾಲಿವುಡ್ ಕುರಿತು ಕೆಲವು ಡೈಲಾಗ್ ಹೇಳಿದ್ದು ಹಿಂದಿ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರಾ? ಎಂಬ ಗುಮಾನಿ ಮೂಡಿದೆ. ಹಾಗಿದ್ರೆ ಜಗದೀಶ್ ಏನೆಲ್ಲಾ ಹೇಳಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.
ಯಸ್, ಜಗದೀಶ್ ಅವರು ಕರ್ನಾಟಕದ ಬಾಲಿವುಡ್ ಎಂಟ್ರಿ ನಮ್ಮ ಐಶ್ವರ್ಯ ರೈಯಿಂದ ಆಗಿದ್ದು ನಂತರ ಶಿಲ್ಪಾ ಶೆಟ್ಟಿ, ಪ್ರಕಾಶ್ ರೈ, ಸುದೀಪ್ ಎಂಟ್ರಿ ಕೊಟ್ಟರು. ಈಗ ಅದೃಷ್ಟ ನಮಗೂ ಕೂಡಿ ಬರುತ್ತಿದೆ ಇದು 6 ಕೋಟಿ ಕನ್ನಡಿಗರ ಆಶೀರ್ವಾದ….ಬಾಲಿವುಡ್‌ನಲ್ಲಿ ಮಿಂಚಲು ನಾನು ಸಜ್ಜಾಗಿರುವೆ. ಬಿಗ್ ಬಾಸ್ ಬಾಲಿವುಡ್ ಆಫರ್‌ಗಿಂತ ಮುಂಚೆ ನನಗೆ ಮುಂಬೈನಿಂದ ದೊಡ್ಡ ಜಾಹೀರಾತು ಸಂಸ್ಥೆಯಿಂದ ಆಫರ್ ಬಂದಿತ್ತು…ಇದಕ್ಕೆ ವಂದನೆಗಳನ್ನು ತಿಳಿಸಬೇಕು ನಾನು ನಿಮ್ಮ ಪ್ರೀತಿಯ ಜಗ್ಗುದಾದ. ಎಲ್ಲರೂ ನನ್ನನ್ನು ಜಗ್ಗುದಾದ ಮತ್ತು ಜಗ್ಗಿ ಎಂದು ಕರೆಯುತ್ತಾರೆ ನಿಜಕ್ಕೂ ಇಷ್ಟವಾಗುತ್ತದೆ, ಮಹಾರಾಣಿ ಕಾಲೇಜ್‌ನ BMW ಬೈಕ್‌ನಲ್ಲಿ ಹೋಗುತ್ತಿರುವಾಗ ಫೋನ್ ಬಂತು ಎಂದು ನಿಲ್ಲಿಸಿ ಮಾತನಾಡುತ್ತಿರುವಾಗ ಹೆಣ್ಣು ಮಕ್ಕಳ ಗುಂಪು ಜಗ್ಗಿ ಜಗ್ಗಿ ಎಂದು ಓಡಿ ಬಂದಿತ್ತು, ಇದನ್ನು ಕ್ರಿಯೇಟ್ ಸೃಷ್ಟಿ ಮಾಡಿ ಕೊಟ್ಟಿದ್ದು ಬಿಗ್ ಬಾಸ್. ನನ್ನನ್ನು ಮಾತನಾಡಿಸುವ ಪ್ರತಿಯೊಬ್ಬರು ನಮ್ಮ ಮನೆ ಹೆಣ್ಣುಮಕ್ಕಳು ಅವರನ್ನು ನಾನು ಯಾವತ್ತೂ ಕೆಟ್ಟ ಭಾವನೆಯಲ್ಲಿ ನೋಡಿಲ್ಲ ಅವರೇ ನಮ್ಮ ಆಸ್ತೆ’ ಎಂದು ಮಾತನಾಡಿದ್ದಾರೆ.
ಅಲ್ಲದೆ ‘ಕರ್ನಾಟಕದಿಂದ ಸಾಕಷ್ಟು ಜನ ಬಾಲಿವುಡ್‌ಗೆ ಹೋಗಿದ್ದಾರೆ ಈಗ ನಿಮ್ಮ ಜಗ್ಗು ದಾದ ಎಂಟ್ರಿ ಕೊಡುವ ಸಮಯ ಬಂದಿದೆ. ಇಷ್ಟು ದಿನ ಬಿಗ್ ಬಾಸ್‌ನ ಕಥೆ ಸುದೀಪ್ ದಾದ ಆಂಡ್ ಜಗ್ಗು ದಾದ ಜೊತೆ ಆಗಿತ್ತು…ಇನ್ನು ಮುಂದೆ ಬಾಲಿವುಡ್‌ನ ಕಥೆ ಸಲ್ಮಾನ್ ಖಾನ್ ವಿತ್ ಜಗ್ಗು ದಾದ ಜೊತೆ ಆಗಲಿದೆ. ಕನ್ನಡಿಗರು ಬೆಳೆಯಬೇಕು….ಕ್ರಶ್ ಆಫ್ ಕರ್ನಾಟಕದ ಆಗಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ಇದ್ದಾರೆ. ಪಾಸಿಟಿವ್ ಆಗಿರಲಿ ನೆಗೆಟಿವ್ ಆಗಿರಲಿ ನನ್ನನ್ನು ಸದಾ ನ್ಯೂಸ್ ಟ್ರೆಂಡಿಂಗ್‌ನಲ್ಲಿ ಇಟ್ಟಿದ್ದು ನೀವು ಇದನ್ನು ಆತ್ಮ ತೃಪ್ತಿಯಿಂದ ಹೇಳುತ್ತಿದ್ದೀನಿ. ಲಕ್ಷ ದುಡಿಯಲು ಕಷ್ಟ ಪಡುತ್ತಿದ್ದೆ ಎಣಿಸಲು ಕಷ್ಟ ಪಡುತ್ತಿದ್ದೆ ಆದರೆ ಈಗ ಕೋಟಿಗಳನ್ನು ಎಣಿಸಲು ಆಗದಷ್ಟು ಬ್ಯುಸಿಯಾಗಿರುವೆ ..ಒಳ್ಳೆ ಮಟ್ಟಕ್ಕೆ ಆರ್ಥಿಕತೆ ನನಗೆ ಸಿಕ್ಕಿದೆ’ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.