Banana Phobia: ಸ್ವೀಡನ್ ದೇಶದ ಈ ಸಚಿವೆ ಬಾಳೆಹಣ್ಣು ಕಂಡ್ರೆ ಸಾಕು ಬೆಚ್ಚಿ ಬೀಳ್ತಾರೆ – ಕಾರಣ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!!

Banana Phobia: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು(protection of Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಹೀಗಾಗಿ ಹೆಚ್ಚಿನವರಿಗೆ ಬಾಳೆಹಣ್ಣು ಎಂದರೆ ತುಂಬಾ ಇಷ್ಟ. ಆದರೆ ಸ್ವೀಡನ್ ದೇಶದ ಈ ಸಚಿವೆಗೆ ಬಾಳೆಹಣ್ಣು ಕಂಡ್ರೆ ಆಗುವುದಿಲ್ಲಂತೆ. ಕಾರಣ ಗೊತ್ತಾದ್ರೆ ನೀವು ಕೂಡ ಹುಬ್ಬೇರಿಸುತ್ತೀರಾ.

ಯಸ್, ಬಾಳೆಹಣ್ಣಿಗೆ ಯಾರಾದ್ರೂ ಭಯಪಡುತ್ತಾರಾ ಎಂದು ನೀವು ನಂಬದೇ ಇರಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಬಾಳೆಹಣ್ಣಿಗೆ ಹೆದರುವ ಆ ಮಹಿಳೆ ಬೇರೆ ಯಾರೂ ಅಲ್ಲ ಅವರೇ ಸ್ವೀಡನ್​ನ ಸಚಿವೆ ಫೌಲಿನಾ ಬ್ರಾಂಡ್ ಬರ್ಗ್. ಇವರು ಸ್ವೀಡನ್​ ಸರ್ಕಾರದಲ್ಲಿ ಲಿಂಗ ಸಮಾನತೆಯ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಬಾಳೆಹಣ್ಣಿನ ಭಯ ( Banana Phobia ) ಇದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗಷ್ಟೇ, ಅವರು ಒಂದು ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಹೀಗಾಗಿ ಅವರ ಸಚಿವಾಲಯದ ಸಿಬ್ಬಂದಿ ಬಾಳೆಹಣ್ಣು ಇಡದಂತೆ ಇ-ಮೇಲ್ ಕಳುಹಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಅಂದಹಾಗೆ ಈ ಸಚಿವೆಗೆ ಫೋಬಿಯಾ ಇರುವ ಕಾರಣ ಬಾಳೆಹಣ್ಣು ಅಂದರೆ ದೂರ. ದೂರ ಬಿಡಿ ಆಗುವುದೇ ಇಲ್ಲ. ಇದನ್ನು ಸ್ವತಹ ಈ ಸಚಿವೆಯ ಬಹಿರಂಗಪಡಿಸಿದ್ದರು. ತನಗೆ ಅಪರೂಪದ ಫೋಬಿಯಾ ಇದೆ ಎಂದು ಸ್ವತಃ ಫೌಲಿನಾ ಬ್ರಾಂಡ್ ಬರ್ಗ್ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. ಹೀಗಾಗಿ ಸಚಿವೆ ಬ್ರಾಂಡ್ ಬರ್ಗ್ ಅವರು ಬಾಲ್ಯದಿಂದಲೂ ಬಾಳೆಹಣ್ಣುಗಳನ್ನು ಇಷ್ಟಪಡುವುದಿಲ್ಲ. ಬಾಳೆಹಣ್ಣು ಕಂಡರೆ ಹೆದರುತ್ತಾರೆ.

ಈ ಕಾರಣದಿಂದ ಆಕೆಗಾಗಿ ವ್ಯವಸ್ಥೆ ಮಾಡುವ ಕೊಠಡಿಗಳಲ್ಲಿ ಹಾಗೂ ವೇದಿಕೆಗಳಲ್ಲಿ ಬಾಳೆಹಣ್ಣುಗಳು ಕಾಣಿಸಿಕೊಳ್ಳದಂತೆ ಆಕೆಯ ಇಲಾಖೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಬ್ರಾಂಡ್ ಬರ್ಗ್​ ಅವರು ಎಲ್ಲಿಗಾದರೂ ಹೋದಾಗ, ಊಟದ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವರ ಮುಂದೆ ಬಾಳೆಹಣ್ಣು ಇಡದಂತೆ ಅವರ ಸಿಬ್ಬಂದಿ ಮೊದಲೇ ಮಾಹಿತಿ ನೀಡುತ್ತಾರಂತೆ.

Leave A Reply

Your email address will not be published.