SBI ಗ್ರಾಹಕರಿಗೆ ಬಿಗ್ ಶಾಕ್ – ಸಾಲದ ಬಡ್ಡಿ ದರ ಏರಿಕೆ!!
SBI : ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಇದೀಗ ಎಸ್‌ಬಿಐ ಗ್ರಾಹಕರಿಗೆ ದೊಡ್ಡ ಆಘಾತ ಎದುರಾಗಿದ್ದು ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ(MCLR) ಮೇಲಿನ ಬಡ್ಡಿ ದರವನ್ನು ಶೇಕಡ 0.05 ರಷ್ಟು ಹೆಚ್ಚಳ ಮಾಡಿದೆ.
ಶುಕ್ರವಾರದಿಂದಲೇ ಪರಿಷ್ಕೃತ ಬಡ್ಡಿ ದರದ ಆದೇಶ ಜಾರಿಗೆ ಬರಲಿದೆ. ಒಂದು ವರ್ಷದ ಎಂಸಿಎಲ್‌ಆರ್ ಬಡ್ಡಿ ದರವನ್ನು ಶೇಕಡ 9ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೀರ್ಘಾವಧಿಯ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗುತ್ತದೆ.
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಸಾಲದ ಪ್ರಮಾಣದಲ್ಲಿ ಶೇ. 42ರಷ್ಟು ಎಂಸಿಎಲ್‌ಆರ್ ಬಡ್ಡಿದರದೊಂದಿಗೆ ಸಂಯೋಜಿಸಲ್ಪಟ್ಟ ಸಾಲಗಳಾಗಿದ್ದು ಇದರಿಂದ ಸಾಲಗಾರರಿಗೆ ಹೊರೆಯಾಗಲಿದೆ.