Arecanut: ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ – ದೀಪಾವಳಿ ಬಳಿಕ ರೈತರಿಗೆ ಹೊಡೀತು ಜಾಕ್ಪಾಟ್!!

Arecanut: ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣದ ನಡುವೆಯೇ ಅಡಿಕೆ ಕೊಯ್ಲು ನಡೆಯುತ್ತಿದೆ. ಬಯಲು ಸೀಮೆಯಲ್ಲಿ ಅಡಿಕೆ ಕೊಯ್ಲು ಮುಗಿಸಿದ ರೈತರು ಮಾರುಕಟ್ಟೆಗೆ ಸಾಗಣೆ ಮಾಡುತ್ತಿದ್ದಾರೆ. ಈ ನಡುವೆ ದೀಪಾವಳಿ ಹಬ್ಬದ ಬಳಿಕ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಹೌದು, ಮಾರುಕಟ್ಟೆಗೆ ಹೊಸ ಅಡಿಕೆ(Arecanut) ಬರುತ್ತಿದ್ದಂತೆಯೇ ಬೆಲೆಯಲ್ಲಿಯೂ ಏರಿಕೆಯಾಗಿದೆ. ಇದು ರೈತರ ಸಂತಸಕ್ಕೆ ಕಾರಣವಾಗಿದೆ. ಮಲೆನಾಡು ಭಾಗದಲ್ಲಿ ಶಿವಮೊಗ್ಗ ಅಡಿಕೆಯ ಪ್ರಮುಖ ಮಾರುಕಟ್ಟೆಯಾಗಿದೆ. ವಿವಿಧ ಮಾದರಿಯ ಅಡಿಕೆಯ ಬೆಲೆಗಳಲ್ಲಿ ಏರಿಕೆಯಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಅಡಿಕೆಯೂ ಆಗಮಿಸುತ್ತಿದೆ.

ಸದ್ಯ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆ ನೋಡುವುದಾದರೆ, ಗೊರಬಲು ಅಡಿಜೆಗೆ 17,500-32,089 ಇದೆ. ನ್ಯೂ ವೆರೈಟಿ ಅಡಿಕೆ 39,069-49,299 ಇದೆ. ಬೆಟ್ಟೆ ಅಡಿಕೆ 43,152-57,310 ಇದೆ. ರಾಶಿ ಅಡಿಕೆ 33,899-49,559 ಇದೆ. ಸರಕು ಅಡಿಕೆ 47,000-83,163 ಇದೆ.

ಸಾಗರ ಮಾರುಕಟ್ಟೆಯಲ್ಲಿ ನೋಡುವುದಾದರೆ, ಕೆಂಪುಗೋಟು 26,280-29,089 ಇದೆ. ಕೋಕ 18,114-24,584 ರೂಪಾಯಿ ಇದೆ. ಚಾಲಿ 26,214-32,299 ಇದೆ. ಬಿಳಿ ಗೋಟು 17,421-24,199 ಇದೆ. ಬಿಳಿಗೋಟು ಅಡಿಕೆ 17,421 – 24,199 ಇದೆ. ಇನ್ನು ರಾಶಿ 43,019 – 48,359 ಮಾರಾಟವಾಗುತ್ತಿದೆ.

Leave A Reply

Your email address will not be published.