B.S.Yediyurappa: ಬಿಎಸ್‌ವೈಗೆ ಕಾನೂನು ಉರುಳು ತಪ್ಪಿದ್ದಲ್ಲ! ದಿಡೀರ್ ಶಾಕ್ ಕೊಟ್ಟ ಸರ್ಕಾರ! 300 ಕೋಟಿ ಲೆಕ್ಕಾ ಎಲ್ಲೋಯ್ತು?
B.S.Yediyurappa: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕೋವಿಡ್ ಬಳಿಕ ಕೆಕೆಆರ್‌ಡಿಬಿ ಅಕ್ರಮದ ಕುರಿತು ತನಿಖೆಗೆ ಸರ್ಕಾರ ತಂಡ ರಚಿಸಿದೆ.
2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚನೆ ಮಾಡಲಾಗಿತ್ತು. ಈ ಅವಧಿಯಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷರಾಗಿದ್ದರು. ಆಗ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಆ ಸಂದರ್ಭದಲ್ಲಿ ಪ್ರತಿ ವರ್ಷ 100 ಕೋಟಿಯಂತೆ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಅನುದಾನದಲ್ಲಿ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸಮಿತಿ ರಚನೆ ಮಾಡಿದೆ.
ಆರೋಪದ ಬಗ್ಗೆ ಹೇಳುವುದಾದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ 2020-2023 ರಲ್ಲಿ ಕೆಕೆಆರ್‌ಡಿಬಿಗೆ 300 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಈ ಅನುದಾನ ವೆಚ್ಚ ಮಾಡುವಲ್ಲಿ ವ್ಯಾಪಕ ಅಕ್ರಮ ಆಗಿದೆ ಅನ್ನೋ ಆರೋಪ ಮಾಡಲಾಗಿದೆ.