Home Breaking Entertainment News Kannada Chaitra Kundapura: ತನಗೆ ತಾನೇ ಗಂಟೆ ಬಾರಿಸಿ, ಪೂಜೆ ಮಾಡಿಕೊಂಡ ಚೈತ್ರ ಕುಂದಾಪುರ – ಕೊನೆಗೂ...

Chaitra Kundapura: ತನಗೆ ತಾನೇ ಗಂಟೆ ಬಾರಿಸಿ, ಪೂಜೆ ಮಾಡಿಕೊಂಡ ಚೈತ್ರ ಕುಂದಾಪುರ – ಕೊನೆಗೂ ಕಿಚ್ಚನ ಮುಂದೆ ಕ್ಲಾರಿಟಿ ಕೊಟ್ಟೆ ಬಿಟ್ರು

Hindu neighbor gifts plot of land

Hindu neighbour gifts land to Muslim journalist

Chaitra Kundapura: ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ(Chaitra Kundapura) ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ. ಹೊರಗೆ ಅವರ ಬಗ್ಗೆ ಇದ್ದ ನೆಗೆಟಿವ್ ಟಾಕ್​ ಸ್ವಲ್ಪ ಕಡಿಮೆ ಆಗಿದೆ. ಅವರ ಆಟ ಕೆಲವರಿಗೆ ಇಷ್ಟ ಆಗುತ್ತಿದೆ. ಈ ಮಧ್ಯೆ ಅವರು ಕೆಲವು ವಿಚಿತ್ರ ವರ್ತನೆಗಳಿಂದ ಗಮನ ಸೆಳೆಯುತ್ತಾ ಇದ್ದಾರೆ. ಅಂತದ್ದೇ ವಿಚಿತ್ರ ವರ್ತನೆಯನ್ನು ಮತ್ತೆ ಚೈತ್ರ ತೋರಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದರು.

ಹೌದು, ಸಾಮಾನ್ಯವಾಗಿ ಊದಿನ ಕಡ್ಡಿ ಹಚ್ಚಿ ಗಂಟೆ ತೂಗುತ್ತಾ ದೇವರಿಗೆ ಪೂಜೆ ಮಾಡೋದು ಸಾಮಾನ್ಯ. ಆದರೆ, ಚೈತ್ರಾ ಹಾಗಲ್ಲ. ಊದಿನಕಡ್ಡಿ ಹಚ್ಚಿದ ಅವರು ಗಂಟೆ ತೂಗುತ್ತಾ ತಮಗೆ ತಾವೇ ಪೂಜೆ ಮಾಡಿಕೊಂಡರು. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಇದನ್ನು ನೋಡಿ ಮನೆ ಮಂದಿ ಶಾಕ್​ಗೆ ಒಳಗಾಗಿದ್ದಾರೆ. ಶಿಶಿರ್​ ಅಂತೂ ಚೈತ್ರಾಗೆ ಏನೋ ಆಯಿತು ಎಂಬ ರೀತಿಯಲ್ಲಿ ನೋಡುತ್ತಿದ್ದರು. ಅವರು ದೃಷ್ಟಿ ತೆಗೆದುಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಒಟ್ಟಿನಲ್ಲಿ ಚೈತ್ರಾ ಕುಂದಾಪುರ ಮಾಡಿದ ಈ ವಿಚಿತ್ರ ಪೂಜೆ ಬಿಗ್‌ ಬಾಸ್ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿತ್ತು. ಜನರು ಈ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡಿದ್ದರು.

ನಿನ್ನೆ (ನವೆಂಬರ್ 09) ಬಿಗ್​ಬಾಸ್​(Bigg Boss) ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದ ಸುದೀಪ್, ಚೈತ್ರಾ ಅವರಿಗೆ ನೀವು ಮಾಡಿದ್ದೇನು? ನಿಮಗೆ ನೀವೇ ಏಕೆ ಪೂಜೆ ಮಾಡಿಕೊಂಡಿರಿ ಎಂದು ಪ್ರಶ್ನೆ ಮಾಡಿದರು. ಮಾತ್ರವಲ್ಲದೆ, ಚೈತ್ರಾ ಅವರ ಆ ಪೂಜೆಯ ಕುರಿತಾಗಿ ಹರಿದಾಡುತ್ತಿರುವ ಮೀಮ್​ಗಳನ್ನು ಸಹ ಮನೆಯ ಸದಸ್ಯರಿಗೆ ತೋರಿಸಿದರು. ಮೀಮ್​ಗಳನ್ನು ನೋಡಿ ಚೈತ್ರಾ ಸೇರಿದಂತೆ ಮನೆಯ ಸದಸ್ಯರೆಲ್ಲರೂ ನಕ್ಕು ಸುಸ್ತಾದರು.

ಆ ನಂತರ ತಾವು ಮಾಡಿದ್ದು ಏನೆಂದು ಚೈತ್ರಾ ಕುಂದಾಪುರ ವಿವರಿಸಿದರು. ಅಸಲಿಗೆ ಚೈತ್ರಾ ಅವರು ದೇವರ ಮುಂದೆ ನಿಂತು ತಮಗೆ ತಾವೆ ಪೂಜೆ ಮಾಡಿಕೊಂಡಿರಲಿಲ್ಲ, ದೇವರ ವಿಗ್ರಹದ ಪಕ್ಕ ಕನ್ನಡಿಯೊಂದು ಇದ್ದು, ಕನ್ನಡಿ ಎದುರು ಗಂಟೆ ಭಾರಿಸುತ್ತಾ ತಮಗೆ ತಾವೇ ಊದುಬತ್ತಿ ಬೆಳಗಿ ಪೂಜೆ ಮಾಡಿಕೊಂಡಿದ್ದರು. ಚೈತ್ರಾ ಕುಂದಾಪುರ ನಿನ್ನೆಯ ಎಪಿಸೋಡ್​ನಲ್ಲಿ ಹೇಳಿದಂತೆ, ಅವರು ತಮಗೆ ಪೂಜೆ ಮಾಡಿಕೊಳ್ಳುತ್ತಿರಲಿಲ್ಲವಂತೆ ಬದಲಿಗೆ ಅದನ್ನು ‘ಓರಾ ಕ್ಲೆಂಜಿಂಗ್’ ಎಂದು ಕರೆಯುತ್ತಾರಂತೆ. ಒಂದು ರೀತಿ ದೃಷ್ಟಿ ತೆಗೆಯುವ ಪದ್ಧತಿ ಅದು.
ಮ್ಯಾನಿಫೆಸ್ಟೇಷನ್ ನಲ್ಲಿ ನಂಬಿಕೆ ಇಡುವವರು ಹೀಗೆ ತಮಗೆ ತಾವೇ ಪೂಜಾ ಮಾಡಿಕೊಂಡು ಓರಾ ಕ್ಲೆಂಜಿಂಗ್ ಮಾಡಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿರುವ, ನಮ್ಮ ಸುತ್ತ-ಮುತ್ತಲೂ ಇರುವ ನೆಗೆಟಿವ್ ಎನರ್ಜಿ ದೂರಾಗಿ ಪಾಸಿಟಿವಿಟಿ ಹತ್ತಿರವಾಗುತ್ತದೆ ಎಂಬುದು ನಂಬಿಕೆ ಎಂದು ಹೇಳಿದ್ದಾರೆ.