Belthangady: ಬೆಂಗಳೂರಿನಲ್ಲಿ ಬೈಕ್-ಲಾರಿ ಅಪಘಾತ; ಇಂದಬೆಟ್ಟು ಯುವಕ ಸಾವು

Share the Article

Belthangady: ಬೆಂಗಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ನಡೆದ ಲಾರಿ- ಬೈಕ್‌ ಅಪಘಾತದಲ್ಲಿ ತುಷಾರ್‌ ಗೌಡ (22) ಸಾವಿಗೀಡಾಗಿರುವ ಘಟನೆ ನಡೆದಿದೆ. ನ.8 ರಂದು ಬೆಳಗ್ಗಿನ ಜಾವ ನಡೆದ ಬೈಕ್‌ ಮತ್ತು ಲಾರಿ ಅಪಘಾತದಲ್ಲಿ ಇಂದಬೆಟ್ಟುವಿನ ಸನಾತನಿ ಮನೆಯ ವಸಂತ ಗೌಡರ ಪುತ್ರ ತುಷಾರ್‌ ಗೌಡ ಅವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಯಲಹಂಕ ನ್ಯೂ ಟೌನ್‌ ಟ್ರಾಫಿಕ್‌ ಸ್ಟೇಷನ್‌ನಲ್ಲಿ ದೂರು ದಾಖಲಾಗಿರುವ ಕುರಿತು ವರದಿಯಾಗಿದೆ.

ಸಹ ಸವಾರ ಬೆಳಾಲಿನ ಸರುಳಿ ನಿವಾಸಿ ದಾಮೋದರ ಗೌಡ ಪುತ್ರ ಸೃಜನ್‌ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ.

Leave A Reply