Shabarimlae: ಶಬರಿ ಮಲೆ ಭಕ್ತರ ಗಮನಕ್ಕೆ- ಇನ್ಮುಂದೆ ಇರುಮುಡಿಯಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವಂತ್ತಿಲ್ಲ!!
Shabarimale: ಶಬರಿಮಲೆಗೆ ಬರುವ ಭಕ್ತರು ತಮ್ಮ ಇರುಮುಡಿಕಟ್ಟುವಿನಲ್ಲಿ ಇನ್ಮುಂದೆ ಈ ಯಾವ ವಸ್ತುಗಳನ್ನು ಕೊಂಡೋಯ್ಯುವಂತ್ತಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ವಿನಂತಿಸಿದೆ.
ಹೌದು, ಬರಿಮಲೆಗೆ(Shabarimale) ಅಯ್ಯಪ್ಪ ಭಕ್ತರ ಭೇಟಿ ಶುರುವಾಗಿದ್ದು, ಇದರ ಬೆನ್ನಲ್ಲೇ ಭಕ್ತರು ತಮ್ಮ ಇರುಮುಡಿಕಟ್ಟುವಿನಲ್ಲಿ ಕಸವಾಗಿ ಬದಲಾಗುವ ವಸ್ತುಗಳನ್ನು ತರದಂತೆ ತಿರುವಾಂಕೂರು ದೇವಸ್ವಂ ಮಂಡಳಿ ವಿನಂತಿಸಿದೆ. ಹೀಗಾಗಿ ಇನ್ನು ಮುಂದೆ ಇರುಮುಡಿಕಟ್ಟುವಿನಲ್ಲಿ ಕರ್ಪೂರ, ಧೂಪದ್ರವ್ಯದ ಕಡ್ಡಿಗಳು ಮತ್ತು ರೋಸ್ ವಾಟರ್ಗಳನ್ನು ಇಡದಂತೆ ಸೂಚಿಸಲಾಗಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ ದೇವಾಲಯಗಳಲ್ಲಿ ಕರ್ಪೂರ, ಧೂಪದ್ರವ್ಯ ಮತ್ತು ಗುಲಾಬಿ ನೀರನ್ನು ಬಳಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮತ್ತು ಸದಸ್ಯ ಎ.ಅಜಿಕುಮಾರ್ ತಿಳಿಸಿದ್ದಾರೆ. ಇದಲ್ಲದೆ, ಈ ನಿಟ್ಟಿನಲ್ಲಿ ಕೊಚ್ಚಿ ಮತ್ತು ಮಲಬಾರ್ ದೇವಸ್ವಂ ಮಂಡಳಿಗಳಿಗೆ ಸಹ ಪತ್ರ ಸಹ ನೀಡಲಾಗುವುದು. ರಾಜ್ಯದ ಖಾಸಗಿ ದೇವಾಲಯಗಳ ಆಡಳಿತ ಮಂಡಳಿಗಳಿಗೆ ಮತ್ತು ಇತರ ರಾಜ್ಯಗಳ ಗುರುಸ್ವಾಮಿಗಳಿಗೆ ಕೂಡ ಈ ಬಗ್ಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಯಾಕೆ ಈ ವಸ್ತುಗಳನ್ನು ಇರುಮುಡಿಯಲ್ಲಿ ಇಡುವಂತಿಲ್ಲ?:ಕರ್ಪೂರ ಮತ್ತು ಧೂಪದ್ರವ್ಯದ ಕಡ್ಡಿಗಳು ಪೂಜಾ ವಸ್ತುಗಳಾಗಿದ್ದರೂ ಬೆಂಕಿ ಹೊತ್ತಿಕೊಳ್ಳುವ ಅಪಾಯದ ಕಾರಣದಿಂದ ಅವುಗಳನ್ನು ಸನ್ನಿಧಾನದಲ್ಲಿ ಬಳಸಲು ಅನುಮತಿ ಇಲ್ಲ. ಹೀಗಾಗಿ ಭಕ್ತರು ಇರುಮುಡಿಕಟ್ಟುವಿನಲ್ಲಿ ತರುವ ಹೆಚ್ಚಿನ ವಸ್ತುಗಳು ಸಾಮಾನ್ಯವಾಗಿ ವ್ಯರ್ಥವಾಗಿ ಬಿಸಾಡಲ್ಪಡುತ್ತವೆ. ನಂತರ ದೇವಸ್ಥಾನ ಮಂಡಳಿಯವರು ಇಂಥ ತ್ಯಾಜ್ಯವನ್ನು ಪಂಡಿತಥಾವಲಂನಲ್ಲಿರುವ ಭಸ್ಮಗಾರಕ್ಕೆ ತೆಗೆದುಕೊಂಡು ಹೋಗಿ ಸುಡಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಹೊಸ ನಿಯಮ ಮಾಡಲಾಗಿದೆ ಎಂದು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.
Houzzmagazine I appreciate you sharing this blog post. Thanks Again. Cool.