Gold Suresh: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಅವಘಡ – ದಿಢೀರ್ ಎಂದು ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು, ಅಂತದ್ದೇನಾಯ್ತು ಮನೆಯೊಳಗೆ

Share the Article

Gold Suresh: ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್ ಮಾಡುವ ಸಂದರ್ಭದಲ್ಲಿ ಸ್ಪರ್ಧಿ ಗೋಲ್ಡ್ ಸುರೇಶ್‌ ಪೆಟ್ಟು ಮಾಡಿಕೊಂಡಿದ್ದು ಇದೀಗ ಆಸ್ಪತ್ರೆ ಸೇರಿದ್ದಾರೆ. ಸಧ್ಯ ಬಿಗ್‌ ಬಾಸ್‌ ಸುರೇಶ್‌ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಗಂಭೀರವಾದ ಪೆಟ್ಟಾಗಿಲ್ಲ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದೆ.

ಬಿಗ್‌ ಬಾಸ್‌ನಲ್ಲಿ(Bigg Boss) ಸ್ಪರ್ಧಿಗಳನ್ನು ನಾಲ್ಕು ತಂಡಗಳನ್ನಾಗಿ ಮಾಡಲಾಗಿತ್ತು. ಪ್ರತಿ ತಂಡಕ್ಕೆ ನೀರು ತುಂಬಿದ ಡ್ರಂ ನೀಡಲಾಗಿತ್ತು, ಡ್ರಂ ತುಂಬಾ ನೀರು ತುಂಬಿಸಿ ಅದನ್ನು ಹೊರಹೋಗದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿತ್ತು, ಆಟದ ಸಮಯದಲ್ಲಿ ಗೋಲ್ಡ್ ಸುರೇಶ್ ಮೇಲೆ ಆಕಸ್ಮಿಕವಾಗಿ ನೀರು ತುಂಬಿದ ಡ್ರಂ ಬಿದ್ದು ಅವಘಡ ಸಂಭವಿಸಿದೆ.

ಡ್ರಮ್ ತಮ್ಮ ಕಾಲಿನ ಮೇಲೆ ಬೀಳುತ್ತಿದ್ದಂತೆ ಗೋಲ್ಡ್ ಸುರೇಶ್(Gold Suresh) ನೋವಿನಿಂದ ಕೆಳಗೆ ಬಿದ್ದು ಒದ್ದಾಡಿದರು. ನನ್ನ ಕಾಲು ಮುರಿದು ಹೋಗಿದೆ ಎಂದು ಅವರು ಗೋಳಾಡಿದ್ದರು, ಸುರೇಶ್ ಅವರ ನೋವಿನ ಚೀರಾಟ ಕಂಡು ಒಂದು ಕ್ಷಣ ಬಿಗ್ ಬಾಸ್‌ನ ಉಳಿದ ಸ್ಪರ್ಧಿಗಳು ಗಾಬರಿಯಾಗಿದ್ದಾರೆ.

ಕೆಲವು ಸ್ಪರ್ಧಿಗಳು ಗೋಲ್ಡ್ ಸುರೇಶ್‌ ಕಾಲನ್ನು ಮುಟ್ಟಿ ನೇರವಾಗಿ ಮಾಡಲು ಪ್ರಯತ್ನಿಸಿದರು, ವಿಪರೀತ ನೋವಿನಿಂದ ಬಳಲುತ್ತಿದ್ದ ಸುರೇಶ್ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಬಳಿಕ ಅವರನ್‌ ಕನ್‌ಫೆಷನ್ ಕೊಠಡಿಗೆ ಕರೆದುಕೊಂಡು ಹೋಗಲಾಯಿತು, ಅಲ್ಲಿಂದ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಬಿಗ್‌ ಬಾಸ್‌ ಸುರೇಶ್‌ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಗಂಭೀರವಾದ ಪೆಟ್ಟಾಗಿಲ್ಲ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದು, ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Leave A Reply