US Election Results: ಅಮೆರಿಕಾದ ಮುಂದಿನ ಅಧ್ಯಕ್ಷರು ಯಾರು? ಡೊನಾಲ್ಡ್ ಟ್ರಂಪ್? ಕಮಲಾ ಹ್ಯಾರಿಸ್? ಇಲ್ಲಿದೆ ಫಲಿತಾಂಶ!

US Election Results: ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರದಲ್ಲಿ ಮುಂದೆ ಯಾರ ಸರ್ಕಾರ ರಚನೆಯಾಗಲಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ (US Election Results) . ಇದೀಗ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಮಧ್ಯೆ ಯಾರು ಗೆಲುವಿನ ಹಾದಿ ಹಿಡಿಯಲಿದ್ದಾರೆ ಇಲ್ಲಿ ತಿಳಿಸಲಾಗಿದೆ.

ಹೌದು, ಯುಎಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Elections) ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಮತ್ತು ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಡುವೆ ಭಾರೀ ಪೈಪೋಟಿ ನಡೆಯುತ್ತಿತ್ತು. ಇದೀಗ ಅಮೆರಿಕಾದ ಸಂಪ್ರದಾಯದಂತೆ ಮತದಾನ ಮುಗಿಯುವುದರೊಂದಿಗೆ ಮತ ಎಣಿಕೆ ಕಾರ್ಯವೂ ಆರಂಭವಾಗಿದೆ. ಮತದಾನದ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶವೂ ಹೊರಬಿದ್ದಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಇರುವ ಪೈಪೋಟಿಯಲ್ಲಿ, ಡಿಸಿಷನ್ ಡೆಸ್ಕ್ ಹೆಡ್‌ಕ್ವಾರ್ಟರ್ಸ್‌ನ (ಡಿಡಿಎಚ್‌ಕ್ಯು) ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಟ್ರಂಪ್ ಮತ್ತು ಹ್ಯಾರಿಸ್ ಇಬ್ಬರೂ ಶೇಕಡಾ 48.4 ರಷ್ಟು ಸಮಬಲ ಹೊಂದಿದ್ದಾರೆ. ಮತ್ತೊಂದೆಡೆ ಅರಿಜೋನಾದ ಸಮೀಕ್ಷೆಯು 50% ಮತಗಳನ್ನು ಡೊನಾಲ್ಡ್ ಟ್ರಂಪ್ ಪಡೆದಿದೆ ಎಂದು ಹೇಳಿದೆ. ಮತ್ತು ಕಮಲಾ ಹ್ಯಾರಿಸ್ 47% ಮತಗಳೊಂದಿಗೆ ಸ್ವಲ್ಪ ಹಿಂದುಳಿದಿದ್ದಾರೆ. ಜಾರ್ಜಿಯಾ ಸಮೀಕ್ಷೆಯಲ್ಲಿ ಹ್ಯಾರಿಸ್‌ಗಿಂತ ಟ್ರಂಪ್ ಎರಡು ಶೇಕಡಾ ಮುನ್ನಡೆ ಹೊಂದಿದ್ದಾರೆ. ಅಲ್ಲಿ ಟ್ರಂಪ್ ಶೇಕಡಾ 50 ರಷ್ಟು ಮತಗಳನ್ನು ಪಡೆದಿದ್ದಾರೆ. ಕಮಲಾ ಹ್ಯಾರಿಸ್ ಶೇ.48ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಮಿಚಿಗನ್ ನಡೆಸಿರುವ ಎಕ್ಸಿಟ್ ಪೋಲ್ ಪ್ರಕಾರ ಇದರಲ್ಲಿ ಕಮಲಾ ಹ್ಯಾರಿಸ್ 49 ಶೇಕಡಾ ಮತಗಳನ್ನು ಪಡೆದು ಡೊನಾಲ್ಡ್ ಟ್ರಂಪ್ ಶೇಕಡಾ 48 ರಷ್ಟು ಮತಗಳನ್ನು ಪಡೆದಿದ್ದಾರೆ. ನೆವಾಡಾದಲ್ಲಿ ಟ್ರಂಪ್, ಹ್ಯಾರಿಸ್‌ಗಿಂತ ಶೇಕಡ ಒಂದರಷ್ಟು ಮುಂದಿದ್ದಾರೆ. ಇಲ್ಲಿ ಟ್ರಂಪ್ 49 ಪರ್ಸೆಂಟ್ ಮತಗಳನ್ನು ಮತ್ತು ಹ್ಯಾರಿಸ್ ಸುಮಾರು 48 ಪರ್ಸೆಂಟ್ ಮತಗಳನ್ನು ಪಡೆದಿದ್ದಾರೆ ಎಂದು ಎಕ್ಸಿಟ್ ಪೋಲ್ ತೋರಿಸಿದೆ.

DDHQ ನ ಪೆನ್ಸಿಲ್ವೇನಿಯಾ ಎಕ್ಸಿಟ್ ಪೋಲ್‌ನಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ನಡೆದ ಸಮೀಕ್ಷೆಯಲ್ಲಿ ಕಮಲಾ ಹ್ಯಾರಿಸ್ ಶೇಕಡಾ 48 ಮತ್ತು ಟ್ರಂಪ್ ಶೇಕಡಾ 49 ರಷ್ಟು ಪಡೆದಿದ್ದಾರೆ. ವಿಸ್ಕಾನ್ಸಿನ್‌ನ ಎಕ್ಸಿಟ್ ಪೋಲ್‌ಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತದೆ. ಅತ್ತ ಎಡಿಸನ್ ರಿಸರ್ಚ್‌ನ ಎಕ್ಸಿಟ್ ಪೋಲ್‌ನಲ್ಲಿ ಕಮಲಾ ಹ್ಯಾರಿಸ್ ಮುಂಚೂಣಿಯಲ್ಲಿದ್ದಾರೆ.

ಎಡಿಸನ್ ರಿಸರ್ಚ್ ಎಕ್ಸಿಟ್ ಪೋಲ್ ಡೇಟಾ ಪ್ರಕಾರ, ನೆವಾಡಾದಲ್ಲಿ ಶೇಕಡಾ 47 ರಷ್ಟು ಜನರು ಟ್ರಂಪ್ ಅನ್ನು ಬೆಂಬಲಿಸಿದರೆ, ಶೇಕಡಾ 44 ರಷ್ಟು ಜನರು ಹ್ಯಾರಿಸ್ ಅನ್ನು ಬೆಂಬಲಿಸುತ್ತಾರೆ. ಅದೇ ರೀತಿ, ಅರಿಜೋನಾದಲ್ಲಿ, 46 ಪ್ರತಿಶತ ಜನರು ಟ್ರಂಪ್‌ಗೆ ಬೆಂಬಲ ನೀಡಿದರೆ, 46 ಪ್ರತಿಶತ ಜನರು ಹ್ಯಾರಿಸ್‌ನೊಂದಿಗೆ ನಿಂತಿದ್ದಾರೆ. US ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, 538 ಎಲೆಕ್ಟೋರಲ್ ಕಾಲೇಜ್ ಮತಗಳಲ್ಲಿ 270 ಮತಗಳ ಅಗತ್ಯವಿದೆ.

ಹ್ಯಾರಿಸ್ ಇದುವರೆಗೆ ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು US ರಾಜಧಾನಿ ವಾಷಿಂಗ್ಟನ್ DC ಅನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಕಮಲಾ ಹ್ಯಾರಿಸ್‌ 99 ಚುನಾವಣಾ ಮತಗಳನ್ನು ಪಡೆದ್ರೆ, ಟ್ರಂಪ್‌ಗೆ 178 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಮ್ಯಾಜಿಕ್ ಸಂಖ್ಯೆ 270 ಆಗಿದೆ.

Leave A Reply

Your email address will not be published.