Viagra Overdose: ಬಾಲಕಿ ಜೊತೆ ಲೈಂಗಿಕ ಸಂಬಂಧ; ವಯಾಗ್ರ ಓವರ್‌ಡೋಸ್‌, ಕುಸಿದು ಬಿದ್ದು ಸಾವು!

Share the Article

Viagra Overdose: ನವೆಂಬರ್‌ 2 ರಂದು ಮುಂಬೈನ್‌ ಗ್ರಾಂಟ್‌ ರೋಡ್‌ ಪ್ರದೇಶದ ಹೋಟೆಲ್‌ನಲ್ಲಿ 41 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದ ಘಟನೆಯೊಂದು ನಡೆದಿತ್ತು. ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಸಂಬಂಧ ನಡೆಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದ. ಮೊದಲಿಗೆ ಇದೊಂದು ಹೃದಯಾಘಾತವೆಂದು ಹೇಳಲಾಗಿತ್ತು. ಆದರೆ ವಯಾಗ್ರ ಓವರ್‌ಡೋಸ್‌ನಿಂದ ಸಾವು ಸಂಭವಿಸಿರಬಹದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಅಪ್ರಾಪ್ತ ಬಾಲಕಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದ ಈತ ಲೈಂಗಿಕ ಕ್ರಿಯೆ ಮಾಡುತ್ತಿರುವಾಗಲೇ ಕೆಳಗೆ ಬಿದ್ದಿದ್ದಾನೆ. ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರಂಭಿಕ ತನಿಖೆಯಲ್ಲಿ ಇದೊಂದು ಹೃದಯಾಘಾತ ಎಂದು ಹೇಳಿದ್ದರು. ಆದರೆ ವಯಾಗ್ರ ಹೆಚ್ಚಾಗಿ ತಗೊಂಡದ್ದೇ ಸಾವಿಗೆ ಕಾರಣ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗುಜರಾತಿ ಸೂರತ್‌ ನಿವಾಸಿತಾದ ಸಂಜಯ್‌ ಕುಮಾರ್‌ ತಿವಾರಿ ಮೃತ ವ್ಯಕ್ತಿ. ಈತ ಡೈಮಂಡ್‌ ಪಾಲಿಶ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಂಜಯ್‌ ಜೊತೆ ಸಂಬಂಧದಲ್ಲಿ ಇದ್ದ ಹುಡುಗಿ ಪಕ್ಕದ ಮನೆಯವಳು. ಬಾಲಕಿಯ ತಂದೆಗೆ ಪಾರ್ಶ್ವವಾಯು ಉಂಟಾಗಿದ್ದು, ಈ ಸಂದರ್ಭದಲ್ಲಿ ಬಾಲಕಿಗೆ ಸಹಾಯ ಮಾಡಿದ್ದ ಈ ಸಂಜಯ್‌ ಕುಮಾರ್.‌ ಬಾಲಕಿಯ ಮನೆಯ ಖರ್ಚು ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ಹಣ ಸಹಾಯ ಮಾಡುತ್ತಿದ್ದ. ಈ ಮಧ್ಯೆಯೇ ಇವರಿಬ್ಬರ ಸ್ನೇಹ ಉಂಟಾಗಿದ್ದು, ಸುತ್ತಾಟಕ್ಕೆಂದು ಹುಡುಗಿಯನ್ನು ಕರೆತಂದ ಸಂಜಯ್‌ ಮೂರು ಗಂಟೆ ಸುಮಾರೆ ಮುಂಬೈಗೆ ಬಂದಿದ್ದಾನೆ.

ಅಲ್ಲಿಂದ ನಾಲ್ಕು ಗಂಟೆ ಸುಮಾರಿಗೆ ಹೋಟೆಲ್‌ ರೂಮ್‌ ಬುಕ್‌ ಮಾಡಿದ್ದಾನೆ. ಆದರೆ ಹುಡುಗಿ ಅಪ್ರಾಪ್ತಯಾಗಿದ್ದ ಕಾರಣ ನಕಲಿ ಆಧಾರ್‌ಕಾರ್ಡ್‌ ತಯಾರಿಸಿದ್ದ. ರೂಮ್‌ನಲ್ಲಿ ಬಾಲಕಿ ಮೇಲೆ ಹಲ್ಲೆ ನಡೆದಿದೆ. ಲೈಂಗಿಕ ದೌರ್ಜನ್ಯ ನಡೆದಿದೆ. ನಂತರ ಕುಸಿದು ಬಿದ್ದಿದ್ದಾನೆ. ಬಾಲಕಿ ಹೆದರಿ ಹೋಟೆಲ್‌ ಸಿಬ್ಬಂದಿಯನ್ನು ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸಂಜಯ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜಯ್‌ ಸಾವಿಗೀಡಾಗಿದ್ದಾರೆ.

ಪೊಲೀಸರು ಮೊದಲಿಗೆ ಬಾಲಕಿ ಜೊತೆ ದೈಹಿಕ ಸಂಬಂಧ ಬೆಳೆಸುವ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದಾನೆಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ಹೇಳಿಕೆ ನೀಡಿದ್ದರು. ಆದರೆ ಕೋಣೆಯಲ್ಲಿ ದೈಹಿಕ ಶಖ್ತಿ ಹೆಚ್ಚಿಸುವ ವಯಾಗ್ರ ದೊರಕಿದೆ. ದೈಹಿಕ ಸಂಬಂಧ ಬೆಳೆಸುವ ಮೊದಲ ಸಂಜಯ್‌ ವಯಾಗ್ರ ಸೇವಿಸಿದ್ದಾರೆ. ಅದರ ಓವರ್‌ಡೋಸ್‌ನಿಂದ ಮೃತ ಹೊಂದಿದ್ದಾನೆ.

ಸಂಜಯ್‌ ಕುಮಾರ್‌ ತಿವಾರಿ ಗುಜರಾತಿನಲ್ಲಿ ಸಂಸಾರ ಹೊಂದಿದ್ದಾನೆ. ಇತ್ತ ಬಾಲಕಿಯ ತಾಯಿ ಘಟನೆಯಿಂದ ದಂಗಾಗಿದ್ದಾರೆ. ಸಂಜಯ್‌ ಕುಮಾರ್‌ ತಿವಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

Leave A Reply

Your email address will not be published.