Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ಪಟ್ಟಿ ತಯಾರಿಸಿ ನೋಟಿಸ್‌ ನೀಡೋ ಸಿದ್ಧತೆ

Share the Article

Guruprasad: ನಟ, ನಿರ್ದೇಶಕ ಗುರುಪ್ರಸಾದ್‌ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆಗೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು, ಜಪ್ತಿ ಮಾಡಿದ ಮೊಬೈಲ್‌ಗಳನ್ನು ರಿಟ್ರೈವ್‌ಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇನ್ನೊಂದು ಕಡೆ ಪೊಲೀಸರು ನಿರ್ದೇಶಕ ಗುರುಪ್ರಸಾದ್‌ ಅವರಿಗೆ ಸಾಲ ಕೊಟ್ಟ ಸಾಲಗಾರರ ಪಟ್ಟಿಯನ್ನು ತಯಾರಿಸಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ಇದರ ಜೊತೆ ಅವರ ಮೊಬೈಲ್‌ ರಿಟ್ರೈವ್‌ ಮಾಡಿದ ಬಳಿಕ ಒಂದಷ್ಟು ಮಾಹಿತಿ ದೊರೆಯಲಿದೆ. ಅಲ್ಲದೇ, ಬ್ಯಾಂಕ್‌ನಿಂದ ಹಣಕಾಸಿನ ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುವ ಕೆಲಸ ನಡೆಯುತ್ತಿದೆ.

ಗುರುಪ್ರಸಾದ್‌ ಅವರು ವಾಸವಿದ್ದ ಫ್ಲ್ಯಾಟ್‌ನಲ್ಲಿ ಮೂರು ಮೊಬೈಲ್‌ಗಳು, ಎರಡು ಟ್ಯಾಬ್‌ಗಳು, ಒಂದು ಲ್ಯಾಪ್‌ಟಾಪ್‌ ಪತ್ತೆಯಾಗಿದೆ. ಎಲ್ಲವನ್ನೂ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಇನ್ನೊಂದು ಕಡೆಯಲ್ಲಿ ಗುರುಪ್ರಸಾದ್‌ ಅವರು ಸಂಬಂಧಿಕರ ಹೇಳಿಕೆ ದಾಖಲು ಮಾಡಲಾಗುತ್ತಿದೆ. ಮೊದಲಿಗೆ ಎರಡನೇ ಪತ್ನಿ, ನಂತರ ಮೊದಲ ಪತ್ನಿ, ನಂತರ ಸಂಬಂಧಿಕರ ಹೇಳಿಕೆ ಪಡೆಯಲಾಗುವುದು. ಇದರ ಜೊತೆಗೆ ಗುರುಪ್ರಸಾದ್‌ ಜೊತೆ ಕೆಲಸ ಮಾಡುತ್ತಿದ್ದ ಸಹ ನಿರ್ದೇಶಕರು ಹಾಗೂ ಉಳಿದವರ ಹೇಳಿಕೆಯನ್ನು ಪಡೆಯಲಾಗುವ ನಿಟ್ಟಿನಲ್ಲಿ ಕೆಲಸ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

 

 

Leave A Reply