Home News Vajradehi Shri: ವಕ್ಫ್ ವಿರುದ್ಧ ಸಮರ – ಜಾಗ ಉಳಿಸಿಕೊಳ್ಳಲು ಜನರಿಗೆ ಹೊಸ ಪರಿಹಾರ ಸೂಚಿಸಿದ...

Vajradehi Shri: ವಕ್ಫ್ ವಿರುದ್ಧ ಸಮರ – ಜಾಗ ಉಳಿಸಿಕೊಳ್ಳಲು ಜನರಿಗೆ ಹೊಸ ಪರಿಹಾರ ಸೂಚಿಸಿದ ವಜ್ರದೇಹಿ ಶ್ರೀ!!

Hindu neighbor gifts plot of land

Hindu neighbour gifts land to Muslim journalist

Vajradehi Shri: ರಾಜ್ಯದಲ್ಲಿ ಸದ್ಯ ಎಲ್ಲಾ ಕಡೆ ವಕ್ಫ್ ಎಂಬ ಶಬ್ದವೇ ರಿಂಗಣಿಸುತ್ತಿದೆ. ಇದುವರೆಗೂ ಸುಮ್ಮನಿದ್ದ ಈ ವಕ್ಫ್ ಆಸ್ತಿ ವಿವಾದ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅದು ಕೂಡ ರೈತರ, ಮಠ, ಮಂದಿರಗಳ ಭೂಮಿಯ ದಾಖಲೆಯನ್ನು ಪರಿಶೀಲಿಸುವಾಗ ಅನೇಕ ಕಡೆ ಆ ಭೂಮಿ ಈಗ ವಕ್ಫ್ ಆಸ್ತಿಯಾಗಿ ಬದಲಾಗಿರುವುದು ರೈತರಿಗೆ, ಆಸ್ತಿಕರಿಗೆ ದೊಡ್ಡ ಆಘಾತವನ್ನು ನೀಡಿದೆ. ಈ ಬೆನ್ನಲ್ಲೇ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ವಜ್ರದೇಹಿ ಮಠದ ಶ್ರೀಗಳು(Vajradehi Shri)ಜನರಿಗೆ ತಮ್ಮ ತಮ್ಮ ಜಾಗಗಳನ್ನು ಉಳಿಸಿಕೊಳ್ಳಲು ಹೊಸ ಪರಿಹಾರವನ್ನು ಸೂಚಿಸಿದ್ದಾರೆ

ಹೌದು, ದಿನದಿಂದ ದಿನಕ್ಕೆ ವಕ್ಫ್ ಆಸ್ತಿ ವಿವಾದ ಹೆಚ್ಚಾಗುತ್ತದೆ. ಇದರಿಂದಾಗಿ ಇನ್ಯಾವ ಭೂಮಿಯ ಮೇಲೆ ವಕ್ಫ್ ಕಣ್ಣು ಬಿದ್ದಿರಬಹುದು ಎನ್ನುವ ಆತಂಕ ಎಲ್ಲರಲ್ಲಿಯೂ ಮನೆ ಮಾಡಿದೆ. ಈ ಹಿನ್ನಲೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಇದಕ್ಕೆ ಸೂಕ್ತ ಪರಿಹಾರವನ್ನು ಪರಿಹಾರ ಸೂಚಿಸಿದ್ದಾರೆ. ಅದೇನೆಂದರೆ ವಕ್ಫ್ ವಿರುದ್ಧ ನಿಮ್ಮ ಜಾಗದಲ್ಲಿ ಪಂಜುರ್ಲಿ ದೈವ ಪ್ರತಿಷ್ಠಾಪಿಸಲು ಕರೆ ನೀಡಿದ್ದಾರೆ.