Kerala : ಮಳೆ ನೀರಿನಿಂದ ತುಂಬಿದ್ದ ಬಾವಿ, ಕೆಲವೇ ಹೊತ್ತಲ್ಲಿ ಬಂದು ನೋಡಿದರೆ ಒಂದು ಹನಿ ನೀರಿಲ್ಲ- ಬಾವಿಯೊಳಗೆ ಇಣುಕಿದ ಕುಟುಂಬಸ್ಥರಿಗೆ ಕಾದಿತ್ತು ಬೆಚ್ಚಿಬೀಳುವ ಸಂಗತಿ
Kerala : ಅದೊಂದು ಮನೆಯ ಬಾವಿಯ ನೀರು ಬತ್ತಿ ಹೋಗಿತ್ತು. ಆದರೆ ಈ ಸಲದ ಮಳೆಗಾಲದಲ್ಲಿ ಅದು ತುಂಬಿ ತುಳುಕಿತ್ತು. ನೀರು ಬಾವಿಯ ತುತ್ತ ತುದಿಯ ತನಕ ಬಂದಿತ್ತು. ಹೀಗಿರುವಾಗ ಒಂದು ದಿನ ಆ ಮನೆಯವರಿಗೆ ಬಾವಿಯಿಂದ ಯಾರೋ ಕರೆಯುವ ಮರುಗುವ ಸದ್ದು ಕೇಳಿ ಬರುತ್ತಿತ್ತು. ಆರಂಭದಲ್ಲಿ ಆ ಕಡೆ ಅಷ್ಟು ಗಮನಕೊಡದ ಮನೆಯವರು ಒಂದು ಸಲ ಹೊರಗಡೆ ಬಂದು ಬಾವಿ ಇಣುಕಿ ನೋಡಿದಾಗ ದೊಡ್ಡ ಅಘಾತ ಕಾದಿತ್ತು. ಅದೇನೆಂದರೆ ತುಂಬಿ ತುಳುಕಿದ ಬಾವಿಯಲ್ಲಿ ಒಂದು ಹನಿ ಕೂಡ ನೀರಿರಲಿಲ್ಲ!!
ಹೌದು ಶುಕ್ರವಾರ (ನ.01) ರಾತ್ರಿ ಎಂಟು ಗಂಟೆ ಸುಮಾರಿಗೆ ಕೇರಳದ(Kerala) ಎಜುಕೋನ್ ಮೂಝಿ ಪ್ರದೇಶದ ಕಲ್ಯಾಣಿಯಲ್ಲಿರುವ ಸುನಿಲ್ದತ್ ಅವರ ಮನೆಯ ಹಿತ್ತಲಿನ ಬಾವಿಯಲ್ಲಿ ಈ ವಿಚಿತ್ರ ಘಟನೆ ಕುಟುಂಬಸ್ಥರನ್ನು ಭಾರೀ ಬೆಚ್ಚಿ ಬೀಳಿಸಿದೆ. ಹಿತ್ತಲಿನಲ್ಲಿದ್ದ ಬಾವಿಯಿಂದ ಯಾರೋ ಗೊಣಗುತ್ತಿರುವ ಶಬ್ದ ಕೇಳಿ ಗಾಬರಿಗೊಂಡ ಮನೆಯವರು, ಮೊದ ಮೊದಲು ಕೇಳಿಬಂದ ಶಬ್ದಕ್ಕೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.
ಮಳೆ ಸುರಿಯುತ್ತಿದ್ದ ಕಾರಣ ಕುಟುಂಬ ಸದಸ್ಯರು ಮನೆಯೊಳಗೆ ಇದ್ದರು. ಆರಂಭದಲ್ಲಿ ಹೊರಗಿನಿಂದ ಯಾರೋ ಕೂಗುವ ಸದ್ದು ಕೇಳಿ ಬಂದಿದೆ. ತಕ್ಷಣವೇ ಅನುಮಾನಗೊಂಡ ಮನೆಯವರು, ಹೊರಗೆ ಹೋಗಿ ನೋಡಿದರೆ ಏನೂ ಪತ್ತೆಯಾಗಿಲ್ಲ. ಶಬ್ದ ಹೆಚ್ಚಾದಾಗ ಮತ್ತೆ ಮರು ಪರಿಶೀಲನೆ ಮಾಡಿದಾಗ ಶಬ್ದ ಬಾವಿಯ ಒಳಗಿನಿಂದ ಕೇಳಿಬರುತ್ತಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ಹನಿ ನೀರು ಇಲ್ಲದೆ ಇರುವುದನ್ನು ಕಂಡು ಎಲ್ಲರೂ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ.
ಬೆಚ್ಚಿ ಬಿದ್ದ ಕುಟುಂಬಸ್ಥರು, ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ನೀರು ಇಲ್ಲದೆ ಇರುವುದು ಹೇಗೆ? ಇದಕ್ಕೆ ಕಾರಣವೇನು? ಅಸಲಿಗೆ ನೀರು ಖಾಲಿಯಾಗಿದ್ದೇಗೆ ಹಾಗೂ ಶಬ್ದ ಬರುತ್ತಿರುವುದು ಎಲ್ಲಿಂದ ಎಂಬ ಹತ್ತಾರು ಪ್ರಶ್ನೆಗಳಿಂದ ತಲೆಕಡಿಸಿಕೊಂಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ರಜನಿ, ‘ನಾನು ಸೌಂಡ್ ಕೇಳ್ತಿದ್ದಂತೆ ಹೊರಗೆ ಓಡಿ ಬಂದೆ. ಆಗ ಬಾವಿಯ ತಳವು ಕಾಣಿಸುತ್ತಿತ್ತು. ಅಲ್ಲಿ ನೀರು ಇರಲಿಲ್ಲ, ಶಬ್ದದ ಹಿಂದಿರುವ ಕಾರಣವು ಕಂಡುಬರಲಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಭಯಗೊಂಡು ಅಂತರ್ಜಲ ಇಲಾಖೆಯ ಜಲವಿಜ್ಞಾನಿ ಎಸ್. ಅನುಜಾ ನೇತೃತ್ವದ ತಜ್ಞರ ತಂಡಕ್ಕೆ ಕರೆ ಮಾಡಿದ ವಾರ್ಡಂಗಂ ರಂಜಿನಿ ಅಜಯನ್, ತಕ್ಷಣವೇ ತಮ್ಮ ಮನೆಯ ಬಾವಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಘಟನೆಯನ್ನು ವಿವರಿಸಿದ್ದಾರೆ. ರಂಜಿನಿ ಅವರ ದೂರವಾಣಿ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿ ಬಾವಿಯನ್ನು ಪರಿಶೀಲಿಸಿದ ಅನುಜಾ ತಂಡ, ರಚನಾತ್ಮಕ ದೋಷ ಉಂಟಾಗಿರುವ ಸುಳಿಯಲ್ಲಿ ನೀರು ಹರಿದಿದ್ದರಿಂದ ಬಾವಿಯ ಕೆಳಭಾಗದಲ್ಲಿ ಕೆಸರು ಉಂಟಾಗಿದೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ ಎಂದು ತಿಳಿಸಿದೆ.