Bigg boss: ಐದನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಬಾಯಿ ಬಡುಕಿ ಔಟ್!

Share the Article

Bigg boss kannada 11: ಕನ್ನಡ ಬಿಗ್ ಬಾಸ್​ ಸೀಸನ್ 11 (Bigg boss kannada 11) ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಕಿಚ್ಚು ಹತ್ತಿಕೊಂಡಿದೆ. ಈಗಾಗಲೇ ಕಳೆದ ವಾರ ನಟ, ನಿರೂಪಕ ಸುದೀಪ್​ ಅವರು ಐದನೇ ವಾರಕ್ಕೆ ವೇದಿಕೆಗೆ ಹಾಜರಾಗಿದ್ದಾರೆ. ಕಿಚ್ಚ ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಆಗಮಿಸಿದರು.

ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ಹಾಗೂ ತಂಡದ ಸದಸ್ಯರು ಸುದೀಪ್​ ಅವರ ತಾಯಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ವಿಷಯಕ್ಕೆ ಧನ್ಯವಾದ ತಿಳಿಸಿದ ಸುದೀಪ್​ ಅವರು, ತದನಂತರ ಎಂದಿನಂತೆ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ಮನೆ ಮಂದಿಗೆಲ್ಲಾ ತಮ್ಮ ಖಡಕ್ ಮಾತಿನಿಂದಲೇ ಅವರವರ ತಪ್ಪುಗಳನ್ನು ಎತ್ತಿಹಿಡಿದ ಕಿಚ್ಚ, ಅಲ್ಲಲ್ಲಿ ಕೆಲವರಿಗೆ ಬುದ್ಧಿ ಹೇಳಿ, ಸ್ವಲ್ಪ ನಗಿಸಿ ನಂತರ ಮನೆಯಿಂದ ಹೊರಬಿದ್ದವರು ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಹೌದು, ಹಾಸ್ಯದ ನಡುವೆ ಮಾನಸ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ತಿಳಿಸಿದ್ದಾರೆ.

Leave A Reply

Your email address will not be published.