Home News Patna: ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೀಡುವ ಚುನಾವಣಾ ಸಲಹೆಗೆ ಪಡೆಯುವ ಸಂಭಾವನೆ ಬರೋಬ್ಬರಿ 100...

Patna: ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ನೀಡುವ ಚುನಾವಣಾ ಸಲಹೆಗೆ ಪಡೆಯುವ ಸಂಭಾವನೆ ಬರೋಬ್ಬರಿ 100 ಕೋಟಿ ರೂ

Hindu neighbor gifts plot of land

Hindu neighbour gifts land to Muslim journalist

Patna: ಜನ್‌ ಸೂರಜ್‌ ಸಂಚಾಲಕ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಗಾರರಾಗಿ ರಾಜಕೀಯ ಪಕ್ಷ ಅಥವಾ ನಾಯಕರಿಗೆ (ಯಾವುದೇ) ಸಲಹೆ ನೀಡಲು ಬರೋಬ್ಬರು 100 ಕೋಟಿ ರೂ. ಗಿಂತಲೂ ಅಧಿಕ ಶುಲ್ಕ ಪಡೆಯುತ್ತಾರೆ ಎಂದು ವರದಿಯಾಗಿದೆ.

ಬಿಹಾರದಲ್ಲಿ ಮುಂದೆ ಬರಲಿರುವ ಉಪಚುನಾವಣೆಗಾಗಿ ಪ್ರಚಾರ ಮಾಡುವ ವೇಳೆ ಚುನಾವಣಾ ತಂತ್ರಗಾರರಾಗಿ ತಾವು ಪಡೆಯುವ ಶುಲ್ಕವನ್ನು ಅವರು ಹೇಳಿದ್ದಾರೆ.

ನನ್ನ ಪ್ರಚಾರಕ್ಕೆ ಟೆಂಟ್‌ಗಳು, ಕುರ್ಚಿಗಳನ್ನು ಹಾಕಲು ನನ್ನ ಬಳಿ ಸಾಕಷ್ಟು ಹಣ ಇಲ್ಲ ಎಂದು ನೀವು ಭಾವಿಸಿದ್ದೀರಾ? ನಾನು ದುರ್ಬಲ ಎಂದು ನಿಮ್ಮ ಅನಿಸಿಕೆಯೇ? ಬಿಹಾರದಲ್ಲಿ, ನನ್ನಂತೆ ಯಾರೂ ಶುಲ್ಕವನ್ನು ಕೇಳಿಲ್ಲ. ನಾನು ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ ನನ್ನ ಶುಲ್ಕ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಮುಂದೆ ಎರಡು ವರ್ಷಗಳವರೆಗೆ ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದುವರಿಸಬಹುದು ಎಂದು ಅವರು ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.