WhatsApp Tips: ವಾಟ್ಸ್ಆ್ಯಪ್ ಚಾಟ್ನಲ್ಲಿ 90 ರಷ್ಟು ಜನರಿಗೆ ಈ ಟ್ರಿಕ್ಸ್ ಬಳಕೆ ಗೊತ್ತಿಲ್ಲ!
WhatsApp Tips: ಮೆಟಾ ಒಡೆತನದ ವಾಟ್ಸ್ಆ್ಯಪ್ ಬಳಕೆ ಬಹಳ ಸುಲಭ ಮತ್ತು ಉಪಯೋಗಕಾರಿ ಆದ ಆಪ್ ಆಗಿದೆ. ಅದಕ್ಕಾಗಿಯೇ ಪ್ರಪಂಚದಾದ್ಯಂತ ಹೆಚ್ಚು ಬಳಸಲಾಗುವ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಕೇವಲ ಚಾಟ್ ಮಾತ್ರವಲ್ಲ ಫೋಟೋಗಳು, ವಿಡಿಯೋಗಳು ಮತ್ತು ಇತರ ಪ್ರಮುಖ ಫೈಲ್‌ಗಳನ್ನು ಹಂಚಿಕೊಳ್ಳಬಹುದು. ವಾಟ್ಸ್ಆ್ಯಪ್ ಇತ್ತೀಚಿಗೆ ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ ನೀಡುತ್ತಲೇ ಇದೆ. ಇದರಿಂದ ಬಳಕೆದಾರರಿಗೆ ಯಾವ ಯಾವ ಫೀಚರ್ ಬಂದಿದೆ ಎಂಬ ಮಾಹಿತಿ ಇರುವುದಿಲ್ಲ. ಅದರಂತೆ ವಾಟ್ಸ್ಆ್ಯಪ್ ಚಾಟ್ನಲ್ಲಿ ಒಂದು ಅದ್ಭುತಾದ ಫೀಚರ್ ಇದ್ದು, ಇದನ್ನು ಹೆಚ್ಚಿನವರು ಬಳಸುತ್ತಿಲ್ಲ. ಶೇ. 90 ರಷ್ಟು ಮಂದಿಗೆ ಈ ಫೀಚರ್ ಬಗ್ಗೆಯೂ ತಿಳಿದಿಲ್ಲ. ಈ ಟಿಪ್ಸ್ ( WhatsApp Tips) ನೀವು ಉಪಯೋಗಿಸಿದರೆ ನಿಮ್ಮ ಅರ್ಧ ಕೆಲಸ ಕಡಿಮೆ ಆಗುತ್ತಿದೆ.
ಸಹಜವಾಗಿ ನಿಮ್ಮ ವಾಟ್ಸ್ಆ್ಯಪ್ನಲ್ಲಿ ಲೆಕ್ಕವಿಲ್ಲದಷ್ಟು ಗ್ರೂಪ್ಗಳು ಇರುತ್ತವೆ. ಇದರಲ್ಲಿ ಪ್ರತಿದಿನ ಸಾವಿರಾರು ಮೆಸೇಜ್ಗಳು ಬರುತ್ತವೆ. ಈ ಗ್ರೂಪ್ಗಳ ಮೆಸೇಜ್ ಹೆಚ್ಚು ಇರುವುದರಿಂದ ವೈಯಕ್ತಿಕ ಚಾಟ್ ಕಣ್ಣಿಗೆ ಕಾಣದಂತೆ ಮರೆಮಾಚಿ ಬಿಡುತ್ತದೆ. ಈ ಸಂದರ್ಭ ಯಾವುದಾದರು ಇಂಪಾರ್ಟೆಂಟ್ ಮೆಸೇಜ್ ಇದ್ದರೂ ಕಾಣಿಸುವುದಿಲ್ಲ. ಇದಕ್ಕೆಲ್ಲ ಇನ್‌ಬಾಕ್ಸ್ ಪಟ್ಟಿಯ ಮೇಲಿರುವ ಆಯ್ಕೆ ಯಾವಾಗಲೂ ನಿಮಗೆ ಸಹಾಯ ಮಾಡಬಹುದು.
ನೀವು ಕೆಲವೇ ಸೆಕೆಂಡುಗಳಲ್ಲಿ ನೀವು ಅಗತ್ಯವಿರುವ ಎಲ್ಲ ಚಾಟ್‌ಗಳನ್ನು ಕಂಡುಹಿಡಿಯಬಹುದು. ಚಾಟ್ಸ್ ಟ್ಯಾಬ್‌ನ ಮೇಲ್ಭಾಗದಲ್ಲಿರುವ ಫಿಲ್ಟರ್ ಅನ್ನು ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಓದಬಹುದು. ಇದರಲ್ಲಿ ಗುಂಪು ಫೇವರಿಟ್ಸ್ ಮತ್ತು ಅನ್ರೀಡ್ ಎಂಬ ಮೂರು ಆಯ್ಕೆ ಇರುತ್ತದೆ. ಇದನ್ನು ಉಪಯೋಗಿಸಿದರೆ ತುಂಬಾ ಪ್ರಯೋಜನವಾಗುತ್ತದೆ.
ಪಿನ್ನಿಂಗ್ ಚಾಟ್‌ಗಳು: ನಿಮಗೆ ಮೆಸೇಜ್ ಅನ್ನು ತ್ವರಿತವಾಗಿ ಹುಡುಕಲು ನಿಮ್ಮ ಚಾಟ್‌ಗಳ ಟ್ಯಾಬ್‌ನ ಮೇಲ್ಭಾಗದಲ್ಲಿ 3 ಚಾಟ್‌ಗಳನ್ನು ಪಿನ್ ಮಾಡಿ. ಇದನ್ನು ಚಾಟ್ ಅನ್ನು ಟ್ಯಾಪ್ ಮಾಡಿ, ಹಿಡಿದುಕೊಳ್ಳುವ ಮೂಲಕ ಪಿನ್ ಮಾಡಬಹುದು.
ಕೀವರ್ಡ್ ಹುಡುಕಾಟ: ಗ್ರೂಪ್ನ ಹೆಸರು, ವಿಷಯಗಳು ಅಥವಾ ಗ್ರೂಪ್ನಲ್ಲಿ ಏನೆ ಇದ್ದರು ಸರ್ಚ್ ಬಟನ್ ಆಯ್ಕೆಯ ಮೂಲಕ ಸುಲಭವಾಗಿ ಹುಡುಕಬಹುದು. ಹಾಗೆಯೆ ಫೆವರಿಟ್ ಆಯ್ಕೆಯ ಮೂಲಕ ನಿಮಗೆ ತುಂಬಾ ಅಗತ್ಯ ಇರುವ ಚಾಟ್ ಅನ್ನು ಇದಕ್ಕೆ ಸೇರಿಸಬಹುದು. ಒಂದೇ ಕ್ಲಿಕ್ನಲ್ಲಿ ಈ ಚಾಟ್ ಎಷ್ಟೇ ದಿನದ ಹಿಂದಿನ ಮೆಸೇಜ್ ಆಗಿದ್ದರು ಕಂಡುಹಿಡಿಯಬಹುದು.