Home News IAS Question: ‘ಮಹಿಳೆಯೊಬ್ಬಳು 1936ರಲ್ಲಿ ಹುಟ್ಟಿ, 1936ರಲ್ಲಿ ಸತ್ತಳು, ಆದ್ರೆ ಸಾಯುವಾಗ ಆಕೆಗೆ 70 ವರ್ಷ...

IAS Question: ‘ಮಹಿಳೆಯೊಬ್ಬಳು 1936ರಲ್ಲಿ ಹುಟ್ಟಿ, 1936ರಲ್ಲಿ ಸತ್ತಳು, ಆದ್ರೆ ಸಾಯುವಾಗ ಆಕೆಗೆ 70 ವರ್ಷ ವಯಸ್ಸಾಗಿತ್ತು, ಹೇಗೆ?’ ಐಎಸ್ ಅಭ್ಯರ್ಥಿ ಕೊಟ್ಟ ಉತ್ತರ ಕೇಳಿದ್ರೆ ಚಪ್ಪಾಳೆ ಹೊಡಿತೀರ

Hindu neighbor gifts plot of land

Hindu neighbour gifts land to Muslim journalist

IAS Question: ಇಂದು ಯಾವುದೇ ಉದ್ಯೋಗಗಳಿಗೆ ನಾವು ಸೇರುವಂತ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ. ಅದು ಅಲ್ಲದೆ ಇಂದು ಮುಂದುವರೆದ ಶಾಲಾ ಕಾಲೇಜುಗಳ ಪ್ರವೇಶಾತಿ ಸಂದರ್ಭದಲ್ಲಿ ಕೂಡ ಸಂದರ್ಶನಗಳು ಎದುರಾಗುತ್ತಿವೆ. ಎಲ್ಲರ ನಡುವೆ ನಮ್ಮ ಭಾರತದ ಆಡಳಿತ ಸೇವೆಗಳಿಗೆ ಸೇರುವಂತಹ ಸಂದರ್ಭದಲ್ಲಿ ನಡೆಸುವ ಸಂದರ್ಶನಗಳು ಸದಾ ಹೈಲೈಟ್ ಆಗಿರುತ್ತದೆ. ಯಾಕೆಂದರೆ ಅಲ್ಲಿ ಕೇಳುವಂತಹ ಪ್ರಶ್ನೆಗಳು ಆಗಿರುತ್ತವೆ. ಅದಕ್ಕೆ ಅಭ್ಯರ್ಥಿಗಳು ತಾಳ್ಮೆಯಿಂದ, ಯೋಚಿಸಿ, ಆಲೋಚಿಸಿ ಉತ್ತರವನ್ನು ನೀಡಬೇಕು. ಈ ರೀತಿಯ ಪ್ರಶ್ನೆಗಳು ಕೆಲವೊಮ್ಮೆ ವೈರಲ್ ಆಗಿರುವಂತದ್ದನ್ನು ಕೂಡ ನಾವು ನೋಡುತ್ತೇವೆ. ಅಂತೆಯೇ ಇದೀಗ ನಾವು ನೀವು ಎಲ್ಲರೂ ಸದಾ ಕೇಳುವಂತಹ, ಕೇಳಿಸಿಕೊಂಡ ಉತ್ತರಿಸಲು ಪ್ರಯತ್ನಿಸಿರುವಂತಹ ಪ್ರಶ್ನೆ ಒಂದನ್ನು ಹೊತ್ತು ನಿಮ್ಮ ಮುಂದೆ ಬಂದಿದ್ದೇವೆ.

ಅದೇನೆಂದರೆ ‘ಒಬ್ಬ ಮಹಿಳೆ 1936ರಲ್ಲಿ ಜನಿಸಿದಳು ಮತ್ತು 1936ರಲ್ಲಿ ಸಾವನ್ನಪ್ಪಿದಳು, ಆದರೆ ಆಕೆ ಮರಣದ ಸಮಯದಲ್ಲಿ ಆಕೆಗೆ 70 ವರ್ಷ ವಯಸ್ಸಿನವಳಾಗಿತ್ತು, ನೀವು ನನಗೆ ಹೇಗೆ ಹೇಳಬಲ್ಲಿರಿ?’ ಎಂಬ ಪ್ರಶ್ನೆ ಹಲವು ಸಂದರ್ಭಗಳಲ್ಲಿ ನಾವು ನೋಡಿದ್ದೇವೆ. ಇದು ಐಎಎಸ್ ಸಂದರ್ಶನದಲ್ಲಿ ಕೇಳುವಂತಹ ಪ್ರಶ್ನೆಯಾದರು ಇಂದು ಹಲವು ಉದ್ಯೋಗಗಳಲ್ಲಿ ಕೂಡ ಕೇಳುತ್ತಾರೆ. ಶಾಲಾ- ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಗೆ ಸುಮ್ಮನೆ ಪ್ರಶ್ನಿಸುತ್ತಾರೆ. ಗೆಳೆಯರು ಹರಟುವಾಗಲು ಕೂಡ ಸುಮ್ಮನೆ ಕುತೂಹಲಕ್ಕೆ ಈ ಪ್ರಶ್ನೆಯನ್ನು ಹೇಳೋದನ್ನ ನಾವು ಗಮನಿಸಿದ್ದೇವೆ.

ಒಮ್ಮೊಮ್ಮೆ ನಾವು ಆ ಹೆಂಗಸು 1936ರಲ್ಲಿ ಜನಿಸುತ್ತಾಳೆ ಮತ್ತು 1936ರಲ್ಲಿ ಸಾವನಪುತ್ತಾಳೆ ಯಾಕೆಂದರೆ ಆ ಹೆಂಗಸು ಯಾವುದೇ ರೀತಿಯ ಸಾಧನೆ ಮಾಡದೆ, ಯಾವ ರೀತಿ ಹೆಸರು ಗಳಿಸದೆ, ತನಗೆ ಸಿಕ್ಕ ಅವಕಾಶಗಳನ್ನು ವ್ಯರ್ಥ ಮಾಡಿಕೊಂಡು ಜೀವಿಸಿರುತ್ತಾಳೆ ಒಟ್ಟಿನಲ್ಲಿ ಇಡೀ ಜೀವನವನ್ನೇ ವ್ಯರ್ಥ ಮಾಡಿರುತ್ತಾಳೆ. ಹೀಗಾಗಿ ಯಾಕೆ 1936 ರಲ್ಲಿ ಸಾಯುತ್ತಾಳೆ ಎಂದು ಹೇಳಿರುವುದುಂಟು. ಒಂದು ರೀತಿಯಲ್ಲಿ ಇದು ಕೂಡ ಸರಿಯಾಗುತ್ತದೆ. ಆದರೆ ಐಎಎಸ್ ಅಭ್ಯರ್ಥಿಗಳು ಇದಕ್ಕೆ ಯಾವ ರೀತಿ ಉತ್ತರ ಕೊಡುತ್ತಾರೆ ಗೊತ್ತಾ? ನೋಡೋಣ ಬನ್ನಿ.

ಐಎಎಸ್ ಅಭ್ಯರ್ಥಿಗೆ ಕೇಳಿರುವಂತಹ ಪ್ರಶ್ನೆ ಮತ್ತು ಉತ್ತರ:
ಪ್ರಶ್ನೆ- ಒಬ್ಬ ಮಹಿಳೆ 1936ರಲ್ಲಿ ಜನಿಸಿದಳು ಮತ್ತು 1936ರಲ್ಲಿ ಸಾವನ್ನಪ್ಪಿದಳು, ಆದರೆ ಆಕೆ ಮರಣದ ಸಮಯದಲ್ಲಿ ಆಕೆಗೆ 70 ವರ್ಷ ವಯಸ್ಸಿನವಳಾಗಿತ್ತು, ನೀವು ನನಗೆ ಹೇಗೆ ಹೇಳಬಲ್ಲಿರಿ? ಎಂದು ಸಂದರ್ಶನದಲ್ಲಿ ಅಭ್ಯರ್ಥಿಯೊಬ್ಬರಿಗೆ ಪ್ರಶ್ನೆ ಎದುರಾಗುತ್ತದೆ.. ಇದಕ್ಕೆ ಬಹಳ ಆಲೋಚಿಸಿ ಅಭ್ಯರ್ಥಿಯು ‘ಮಹಿಳೆ 1936ರಲ್ಲಿ ಜನಿಸಿದಳು ಮತ್ತು ಆಕೆ ಮರಣದ ಸಮಯದಲ್ಲಿ ಆಕೆ ದಾಖಲಾದ ಆಸ್ಪತ್ರೆಯ ಕೊಠಡಿ ಸಂಖ್ಯೆ 1936 ಆಗಿತ್ತು. ಇನ್ನು ಆಗ ಆ ಮಹಿಳೆಗೆ 70 ವರ್ಷ ವಯಸ್ಸಾಗಿತ್ತು’ ಎಂದು ಉತ್ತರಿಸುತ್ತಾರೆ.