Rajyotsava Award 2024: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ
Rajyotsava Award 2024: 2024ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಇಂದು(ಅಕ್ಟೋಬರ್ 30) ಬಿಡುಗಡೆ ಮಾಡಿದ್ದು, ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಒಟ್ಟು 69 ರಾಜ್ಯೋತ್ಸವ ಪ್ರಶಸ್ತಿಯನ್ನು (Rajyotsava Award 2024) ಈ ಬಾರಿ ಘೋಷಣೆ ಮಾಡಲಾಗಿದೆ.
ಮುಖ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಘೋಷಣೆ ಮಾಡಿದ್ದು, ಒಟ್ಟು ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಇದರ ಜೊತೆ ವಿವಿಧ ಸಾಧನೆ ಮಾಡಿದ 50 ಪುರಷರ ಹಾಗೂ 59 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ಸಹ ಘೋಷಣೆ ಮಾಡಲಾಗಿದೆ.
ಜಾನಪದ ಕ್ಷೇತ್ರ:
ಇಮಾಮಸಾಬ ಎಂ. ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್.ಜಿ. ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)
ಚಲನಚಿತ್ರ-ಕಿರುತೆರೆ
ಹೇಮಾ ಚೌಧರಿ
ಎಂಎಸ್ ನರಸಿಂಹಮೂರ್ತಿ
ಸಂಗೀತ ಕ್ಷೇತ್ರ
ಪಿ ರಾಜಗೋಪಾಲ
ಎಎನ್ ಸದಾಶಿವಪ್ಪ
ನೃತ್ಯ: ವಿದುಷಿ ಲಲಿತಾ ರಾವ್,
ಆಡಳಿ ಕ್ಷೇತ್ರ: ಎಸ್ವಿ ರಂಗನಾಥ್( ಮಾಜಿ ಮುಖ್ಯ ಕಾರ್ಯದರ್ಶಿ)
ವೈದ್ಯಕೀಯ ಕ್ಷೇತ್ರ: ಡಾ ಜೆಬಿ ಬಿಡನಹಾಳ, ಡಾ ಮೈಸೂರು ಸತ್ಯಾನಾರಾಯಣ. ಡಾ ಲಕ್ಷ್ಮಣ ಹನುಮಂತಪ್ಪ ಬಿದರಿ
ಸಮಾಜ ಸೇವೆ: ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್