Toxic movie: ಟಾಕ್ಸಿಕ್ ಸಿನಿಮಾ ಶೂಟಿಂಗ್ ಗೆ ಮರ ಕಡಿದಿರೋ ಪ್ರಕರಣ: ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಎದುರಾಗುತ್ತಾ ಸಂಕಷ್ಟ.?
Toxic movie: ಟಾಕ್ಸಿಕ್ ಸಿನಿಮಾ ಚಿತ್ರಿಕರಣ(Shooting) ಸಂಬಂಧ ಎಚ್ಎಂಟಿ(HMT) ಜಾಗದಲ್ಲಿ ಮರ ಕಡಿದಿರುವ(Tree cutting) ಸಂಬಂಧ ಬಿಬಿಎಂಪಿ(BBMP) ಅರಣ್ಯ ವಿಭಾಗದಿಂದ(Forest section) ಕಮಿಟಿ ರಚನೆ(committee) ಮಾಡಲಾಗಿದ್ದು, ಈ ಕಮಿಟಿ ಮರ ಕಡಿದಿರುವುದನ್ನ ಪರಿಶೀಲಿಸಲಿದೆ. ಬಿಬಿಎಂಪಿ ಉಪ ಅರಣ್ಯಾಧಿಕಾರಿ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ.
ಮರ ಕಡಿಯಬೇಕು ಅಂದರೆ ಬಿಬಿಎಂಪಿ ಪರ್ಮಿಷನ್ ಪಡೆಯಬೇಕು. ಆದರೆ ಬಿಬಿಎಂಪಿ ಪರ್ಮಿಷನ್ ಪಡೆದಿಲ್ಲ ಎಂಬುದು ಪತ್ತಯಾಗ್ತಿದೆ. ಮರ ಕಡಿಯೋದಕ್ಕೆ ಪರ್ಮಿಷನ್ ಕೊಟ್ಟಿದ್ದು ಯಾರು? ಹೆಚ್ಎಂಟಿ ಜಾಗವನ್ನ ಕೆನರಾ ಬ್ಯಾಂಕ್ ನವರು ಪಡೆದುಕೊಂಡಿದ್ರು. ಕೆನರಾ ಬ್ಯಾಂಕ್ ಶೂಟಿಂಗ್ ಮಾಡೋದಕ್ಕೆ ಪರ್ಮಿಷನ್ ಕೊಟ್ಟಿದ್ದೆ. ಆದರೆ ಅರಣ್ಯವನ್ನ ನಾಶ ಮಾಡಿರೋದು ತಪ್ಪು. ಈಗಾಗಿ ಹಲವು ಅಂಶಗಳನ್ನ ಮುಂದಿಟ್ಟು ಕೊಂಡು ತನಿಖೆ ಮಾಡಲು ಕಮಿಟಿ ರಚನೆ ಮಾಡಲಾಗಿದೆ.
ಎಚ್ಎಂಟಿ ಜಾಗದಲ್ಲಿ ಮರ ಕಡಿದಿರುವ ವಿಚಾರವಾಗಿ, ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಸಂಕಷ್ಟ ಎದುರಾಗುತ್ತಾ ಅನ್ನೋ ಅನುಮಾನ ಮೂಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತೆಗೆದ ಸ್ಯಾಟಲೈಟ್ ಪೋಟೋದಲ್ಲಿ ಮರಗಳಿರುವ ಕುರುಹುಗಳಿವೆ. ಈಗಿನ ಸ್ಯಾಟಲೈಟ್ ಪೋಟೋದಲ್ಲಿ ಮರಗಳಿಲ್ಲದೇ ಮಣ್ಣು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.
ಈಗಾಗಲೇ HMT ಜಾಗದಲ್ಲಿ ಟಾಕ್ಸಿಕ್ ಸಿನಿಮಾಗಾಗಿ ಬರಹತ್ ಸೆಟ್ ನ್ನು ಸಿನಿಮಾ ತಂಡ ಹಾಕಿದೆ. ಟಾಕ್ಸಿಕ್ ಸಿನಿಮಾ ತಂಡವೇ ಈ ಸೆಟ್ ಹಾಕಲು ಮರ ಕಾಡಿದಿತ್ತಾ? ಒಂದು ವೇಳೆ ಸಿನಿಮಾ ತಂಡ ಮರ ಕಡಿದಿದ್ರೆ ಟಾಕ್ಸಿಕ್ ಸಿನಿಮಾಗೆ ಸಂಕಷ್ಟ ಎದುರಾಗೋದು ಪಕ್ಕಾ.