Vijayapura: ವಿಜಯಪುರ ವಕ್ಫ್ ಆಸ್ತಿ ವಿವಾದ – ಬಿಜೆಪಿ ನಾಯಕರ ಎದುರು ಸ್ಪೋಟಕ ಸತ್ಯ ಬಿಚ್ಚಿಟ್ಟ ವಿಜಯಪುರ ಜಿಲ್ಲಾಧಿಕಾರಿ!!

Vijayapura: ವಿಜಯಪುರ ವಕ್ಫ್ ಆಸ್ತಿ ನೋಂದಣಿ ವಿವಾದ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದನ್ನು ಬಿಜೆಪಿ ಕೂಡ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ(BJP) ನಿಯೋಗ ನಿನ್ನೆ ವಿಜಯಪುರಕ್ಕೆ(Vijayapura) ಭೇಟಿ ನೀಡಿ ರೈತರನ್ನು ಭೇಟಿ ಮಾಡಿ ಚರ್ಚಿಸಿದೆ. ನಂತರ ನಂತರ ಜಿಲ್ಲಾಧಿಕಾರಿ ಭೂಬಾಲನ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದೆ. ಈ ವೇಳೆ ಜಿಲ್ಲಾಧಿಕಾರಿಯವರು ಬಿಜೆಪಿ ನಾಯಕರಿಗೆ ಸ್ಪೋಟಕ ಮಾಹಿತಿ ಒಂದನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಜಿಲ್ಲಾಧಿಕಾರಿ ಭೂಬಾಲನ್(DC Bhubaalan) ಅವರು, ವಕ್ಫ್​ ಸಚಿವ ಜಮೀರ್ ಅಹ್ಮದ್ ಖಾನ್(Jameer Ahamad Khan) ಅವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಸಚಿವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ. ಇಂದೀಕರಣ ಅಂದರೆ ಗಣಕೀಕರಣ ಸತತವಾಗಿ ನಡೆಯುತ್ತೆ. ಪ್ರತಿ ವರ್ಷವೂ ಗಣಕೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂದೀಕರಣ ಆದ ಉದಾಹರಣೆ ಇವೆ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ಕಂದಾಯ ನ್ಯಾಯಮಂಡಳಿಗೆ ರೈತರು ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 124 ನೋಟಿಸ್, ಒಟ್ಟು 433 ರೈತರಿಗೆ ನೋಟಿಸ್ ಕೊಟ್ಟಿದ್ದೇವೆ ಅಂತ ಟಿಬೂ ಬಾಲನ್ ಹೇಳಿದ್ದಾರೆ. ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗಲ್ಲ. ಎರಡೂ ಪಾರ್ಟಿಗಳಿಗೆ ಕರೆದು ವಿಚಾರಣೆ ನಡೆಸುತ್ತೇವೆ. ಭೂ ಮಾಲೀಕರಿಗೂ ಹಾಗೂ ವಕ್ಫ್‌ಗೂ ನಾವು ನೋಟಿಸ್ ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ.

ಇದರೊಂದಿಗೆ ಕಾಲಂ ನಂ 9ರಲ್ಲಿ ವಕ್ಫ್ ಹೆಸರು ಹಾಕಿಲ್ಲ. ಮಾಲಿಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ. 44 ಭೂಮಿಗಳಿಗೆ ನೋಟಿಸ್ ಕೊಡದೆ ಇಂಧೀಕರಣ ಮಾಡಿದ್ದೇವೆ, ಆದ್ರೆ ಅವರ ಮಾಲಿಕತ್ವ ಬದಲಾಗಲ್ಲ ಅಂತ ಜಿಲ್ಲಾಧಿಕಾರಿ ಟಿ ಬಾಲನ್ ಸ್ಪಷ್ಟಪಡಿಸಿದ್ದಾರೆ. ಇಂಡಿ ತಹಶಿಲ್ದಾರ್ 41 ನೋಟಿಸ್ ಕೊಡದೆ ಇಂಧೀಕರಣ ಮಾಡಿದ್ದಾರೆ. 41 ಇಂಧೀಕರಣ ಕ್ಯಾನ್ಸಲ್ ಮಾಡಿದ್ದೇವೆ. ನಾಳೆ ಪಹಣಿಯಿಂದ ವಕ್ಫ ಹೆಸರು ಹೋಗಲಿದೆ ಅಂತ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು ವಕ್ಫ್ ಸಚಿವರು ಭವಿಷ್ಯದಲ್ಲಿ ಇಂತಹ ಸಮಸ್ಯೆ ಆಗಬಾರದೆಂದು ಟಾಸ್ಕ್​ಫೋರ್ಸ್ ರಚನೆ ಮಾಡಿದ್ದಾರೆ. 250 ಎಕರೆ ಭೂಮಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಕೊಟ್ಟಿರುವ ನೋಟಿಸ್​ಗಳನ್ನು ವಾಪಸ್ ಪಡೆಯುತ್ತೇವೆ. ಎರಡು ಮೂರು ವರ್ಷಗಳ ಹಾಗೂ ಅದಕ್ಕೂ‌ ಮುಂಚೆ ಆದ ಇಂದೀಕರಣ ಪ್ರಕರಣಗಳ ಕುರಿತು ಸರ್ಕಾರ ನೀಡುವ ಸೂಚನೆ ಪಾಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Leave A Reply

Your email address will not be published.