Bigg boss kannada-11: ಇಂದು ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದು ಮಾನಸ ಅಲ್ಲ? ಫೈನಲ್ ತನಕ ಬರುತ್ತಾರೆ ಎನ್ನಲಾಗಿದ್ದ ಈ ಕಂಟೆಸ್ಟೆಂಟ್ ಅಂತೆ !!

Share the Article

Bigg Boss Kannada-11 ಆಟ ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ನಾಲ್ಕನೇ ವಾರದಲ್ಲಿ ಇಂದು ದೊಡ್ಮನೆಯಿಂದ ಊಹಿಸದ ಒಬ್ಬ ಸ್ಪರ್ಧಿ ಎಲಿಮಿನೇಟ್ ಅಗಿದ್ದಾರೆ. ಇದುವರೆಗೂ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಮಾನಸ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿತ್ತು. ಆದರೀಗ ಮನೆಯಿಂದ ಹೊರ ಹೋಗಿದ್ದು ಮಾನಸ ಅಲ್ಲಂತೆ. ಫೈನಲ್ ತನಕ ಬರುತ್ತಾರೆ ಎನ್ನಲಾದ ಈ ಸ್ಪರ್ದಿಯಂತೆ!!

ಹೌದು, ಈ ವಾರ ದೊಡ್ಮನೆಯಿಂದ ಹೊರ ನಡೆಯಲು ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ನಾಮಿನೇಟ್ ಆಗಿದ್ದರು. ಇವರುಗಳ ಪೈಕಿ ಒಬ್ಬರು ಇವತ್ತು ಬಿಗ್ ಬಾಸ್ ಮನೆಯಿಂದ ಅಚೆ ಬರಲಿದ್ದರು. ಮೂಲಗಳ ಪ್ರಕಾರ ನಾಮಿನೇಟ್ ಆಗಿರುವ ಪೈಕಿ ಮಾನಸ ಅವರಿಗೆ ಅತಿ ಕಡಿಮೆ ವೋಟ್ ಬಿದ್ದಿದ್ದು, ಅವರು ಈ ವಾರ ಮನೆಯಿಂದ ಆಚೆ ಬರಲಿದ್ದಾರೆ ಎನ್ನಲಾಗುತ್ತಿತ್ತು.

ಮಾನಸ(Manasa) ಅವರು ಬಿಗ್ ಬಾಸ್ ಮನೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದಾರೆ. ಅವರು ಮನೆಯಲ್ಲಿ ಯಾವುದರಲ್ಲೂ ಸರಿಯಾಗಿ ಭಾಗಿಯಾಗುತ್ತಿಲ್ಲ. ಇದಕ್ಕಿಂತ ಅವರು ಮನೆಯಿಂದ ಆಚೆ ಬರುವುದೇ ಉತ್ತಮವೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಇದಲ್ಲದೆ ದೊಡ್ಮನೆಯ ಸ್ಪರ್ಧಿಗಳಲ್ಲೂ ಮಾನಸ ಅವರು ದೊಡ್ಡ ಧ್ವನಿಯಲ್ಲಷ್ಟೇ ಮಾತನಾಡುತ್ತಾರೆ. ಯಾವುದರಲ್ಲೂ ಮುಂದೆ ಬರಲ್ಲ ಎನ್ನುವ ಅಭಿಪ್ರಾಯವಿತ್ತು. ಹೀಗಾಗಿ ಮಾನಸ ಅವರು ದೊಡ್ಮನೆಯಿಂದ ಇವತ್ತು ಆಚೆ ಬರಲಿದ್ದಾರೆ ಎನ್ನಲಾಗಿತ್ತು. ಆದರೀಗ ಇದೀಗ ಬಂದಿರುವ ಲೇಟೆಸ್ಟ್‌ ಅಪ್ಡೇಟ್‌ ಪ್ರಕಾರ ಹಂಸ(Hamsa) ಅವರು ಬಿಗ್‌ ಬಾಸ್‌ ಮನೆಯಿಂದ ಈ ವಾರ ಆಚೆ ಬರಲಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ ಮಾನಸ ಹಾಗೂ ಹಂಸಾ ಇಬ್ಬರನ್ನು ಬಿಗ್‌ ಬಾಸ್‌ ಮನೆಗೆ ಬರುವ ಕಾರು ಆಚೆ ಕರ್ಕೊಂಡು ಹೋಗ್ತಾರೆ ಎನ್ನಲಾಗುತ್ತಿದ್ದು, ಈ ಪೈಕಿ ಹಂಸ ಅವರನ್ನು ಮತ್ತೆ ವಾಪಾಸ್‌ ಕರೆದುಕೊಂಡು ಬರಲಾಗುತ್ತದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಇನ್ನು ಕೆಲವೇ ಹೊತ್ತಲ್ಲಿ ಇದಕ್ಕೆ ಉತ್ತರ ಸಿಗಲಿದೆ.

Leave A Reply