Channapattana By Election: ನಿಖಿಲ್‌ ʼಅರ್ಜುನʼ ಎಂಬ ಹೆಚ್ ಡಿಕೆ ಹೇಳಿಕೆ- ಸಿದ್ದರಾಮಯ್ಯ ಹೇಳಿದ್ದೇನು?

Share the Article

Channapattana By election: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ನಿಖಿಲ್‌ ಅವರನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ʼಅರ್ಜುನʼ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ʼಅದ್ಹೇಗೆ ಅಭಿಮನ್ಯು ಆದವನು ಈಗ ಅರ್ಜುನ?ʼ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಟಾಂಗ್‌ ನೀಡಿದ್ದಾರೆ.

ನಿಖಿಲ್‌ ಎರಡು ಬಾರಿ ಸೋತಿದ್ದಾರೆ. ಆಗ ಅಭಿಮನ್ಯು ಆಗಿರಲಿಲ್ವಾ? ಈಗ ಇದ್ದಕ್ಕಿದ್ದಂತೆ ಅದೇನು ಅರ್ಜುನ, ಅಭಿಮನ್ಯು ಆಗಿರುವುದು ಎಂದು ವ್ಯಂಗ್ಯವಾಗಿದ್ದಾರೆ.

Leave A Reply

Your email address will not be published.