Mangaluru: ʼಪುಡಿ ರಾಜಕಾರಣಿʼ ಹೇಳಿಕೆ ನೀಡಿದ ಬಿಕೆ ಹರಿಪ್ರಸಾದ್‌ ವಿರುದ್ಧ ಪೇಜಾವರ ಶ್ರೀ ಹೇಳಿದ್ದೇನು?

Mangaluru: ಪೇಜಾವರ ಶ್ರೀಗಳು ಪರೋಕ್ಷವಾಗಿ ಬಿ.ಕೆ.ಹರಿಪ್ರಸಾದ್‌ ವಿರುದ್ಧ ಹರಿಹಾಯ್ದಿದ್ದಾರೆ. ” ಜಾತಿ ವ್ಯವಸ್ಥೆ ಅನಿಷ್ಠಗಳಿಗೆ ಮೂಲ ಎನ್ನುವವರು ಅವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದು ಕಡೆ ನಾವು ಜಾತ್ಯಾತೀತರು ಎಂದು ಹೇಳುತ್ತಾರೆ. ಇನ್ನೊಂದು ಕಡೆ ಎಲ್ಲಾ ವಲಯದಲ್ಲಿ ಅದನ್ನು ಪೋಷಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಅವರು ಈ ಮಾತನ್ನು ಉಲ್ಲೇಖ ಮಾಡಿದ್ದಾರೆ. ಬಿ.ಕೆ.ಹರಿಪ್ರಸಾದ್‌ ಅವರು ʼಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆʼ ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮಲ್ಲಿ ಅಭಿಪ್ರಾಯ ಕೇಳಿದಾಗ, ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ. ಇದನ್ನು ಹೇಳಿದ್ದಕ್ಕೆ ಪುಡಿ ರಾಜಕಾರಣ ಎಂದು ಹೇಳುವುದಾದರೆ, ನಾವು ಹೇಳಿದರೆ ಅದು ತಪ್ಪು ಅಂತ ಆದರೆ, ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ಲವೋ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಹೌದು ಅಂತಾದರೆ, ಇಲ್ಲಿ ಸಾಮಾನ್ಯ ಪ್ರಜೆ, ಮಠಾಧಿಪತಿಗೆ ಕೂಡಾ ಮಾತನಾಡುವ ಹಕ್ಕಿದೆ. ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಕಾವಿ ತೆಗೆದಿಟ್ಟು ಬಂದು ಉತ್ತರ ಕೊಡ್ತೇನೆ ಅನ್ನೋದರ ಅರ್ಥವೇನು? ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ಕೇವಲ ರಾಜಕಾರಣಿಗಳಿಗಾ? ಪ್ರಜೆಗಳಿಗೆ ಇಲ್ವಾ? ಪ್ರಜಾಪ್ರಭುತ್ವ ಸತ್ತು ಹೋಯ್ತು? ಈಗ ಇರುವುದು ರಾಜಕಾರಣಿಗಳ ರಾಜ್ಯ ಎಂದು ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಈ ರೀತಿಯ ರಾಜಕಾರಣಿಗಳಿಗೆ ಸದ್ಭುದ್ಧಿ ಕೊಡು ಎಂದು ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ.

Leave A Reply

Your email address will not be published.