Satish Sail:ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣ; ಸತೀಶ್‌ ಸೈಲ್‌ಗೆ ಭಾರೀ ಜೈಲು ಶಿಕ್ಷೆ ಪ್ರಕಟ

Share the Article

Satish Krishna: ಬೆಲೇಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರವಾರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಆರೋಪಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಈ ಕೂಡಲೇ ಶಾಸಕ ಸತೀಶ್‌ ಸೈಲ್‌ ಅವರನ್ನು ವಶಕ್ಕೆ ಪಡೆಯಲು ಕೋರ್ಟ್‌ ಸೂಚನೆ ನೀಡಿತ್ತು.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ಆರು ಪ್ರಕರಣಗಳಲ್ಲಿ ಇದು ಅಂತಿಮ ಆದೇಶ ಹೊರಡಿಸಲಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್‌ ಬಿಳೆಯಿ, ಶಾಸಕ ಸತೀಶ್‌ ಸೇರಿ ಎಲ್ಲಾ ಆರೋಪಿಗಳು ದೋಷಿ ಎಂದು ಕೋರ್ಟ್‌ ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಇದೀಗ ಶಿಕ್ಷೆಯ ಪ್ರಮಾಣವನ್ನು ಇಂದು ಶನಿವಾರ (ಅ.26) ಕೋರ್ಟ್‌ ಪ್ರಕಟಸಿದೆ.

ಶಾಸಕ ಸತೀಶ್‌ ಸೈಲ್‌ ಅವರಿಗೆ ಮೊದಲ ಕೇಸ್‌ -ಒಳಸಂಚು ಪ್ರಕರಣದಲ್ಲು ಐದು ವರ್ಷ
ವಂಚನೆ ಪ್ರಕರಣದಲ್ಲಿ -ಏಳು ವರ್ಷ
ಕಳ್ಳತನ ಪ್ರಕರಣದಲ್ಲಿ- ಮೂರು ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್‌ ಆದೇಶ ನೀಡಿದೆ.

ಇವಿಷ್ಟಲ್ಲದೇ, ಒಟ್ಟು 9 ಕೋಟಿ 60 ಲಕ್ಷ ರೂ. ದಂಡ ವಿಧಿಸಿದೆ.

Leave A Reply