Sapthami Gowda and Daali Dhananjay: ಮತ್ತೆ ಮಿಂಚಲಿದ್ದಾರೆ ‘ಪಾಪ್​ಕಾರ್ನ್’ ಜೋಡಿ ಡಾಲಿ ಧನಂಜಯ ಹಾಗೂ ಸಪ್ತಮಿ

Share the Article

Sapthami Gowda and Daali Dhananjay: 2020ರಲ್ಲಿ ಬಿಡುಗಡೆ ಆಗಿರುವ ಡಾಲಿ ಧನಂಜಯ್ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಸಪ್ತಮಿ ಗೌಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಇದೀಗ ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ ನಟಿಸಲಿದ್ದಾರೆ.

ದುನಿಯಾ ಸೂರಿ ನಿರ್ದೇಶಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದ್ದು ಮಾತ್ರವೇ ಅಲ್ಲದೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಸಪ್ತಮಿ ಪರಿಚಯವಾಗಿತ್ತು, ಡಾಲಿ ಧನಂಜಯ್​ರ ಪತ್ನಿಯ ಪಾತ್ರದಲ್ಲಿ ಸಪ್ತಮಿ ನಟಿಸಿದ್ದರು. 

ಮಖ್ಯವಾಗಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಬಳಿಕ ಡಾಲಿ ಧನಂಜಯ್ ಹಾಗೂ ಸಪ್ತಮಿ ಗೌಡ (Sapthami Gowda and Daali Dhananjay)ಒಟ್ಟಿಗೆ ನಟಿಸಿರಲಿಲ್ಲ. ಆದರೆ ಈಗ ಸುಮಾರು ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಒಂದಾಗುತ್ತಿದ್ದಾರೆ. ಹೌದು, ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. 

ಸ್ವಾತಂತ್ರ್ಯಕ್ಕೂ ಮುಂಚಿನ 1857 ರಲ್ಲಿ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಒಂದರಲ್ಲಿ ಡಾಲಿ ಧನಂಜಯ್ ನಾಯಕನಾಗಿ ಮತ್ತು ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ದೇಶದಾದ್ಯಂತ ಹೊತ್ತಿದಾಗ ಬಾಗಲಕೋಟೆ ಜಿಲ್ಲೆ, ಮುಧೋಳದ ಹಲಗಲಿಯ ಬೇಡರು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ‘ಹಲಗಲಿ’ ಎಂದೇ ಹೆಸರಿಡಲಾಗಿದೆ. ಸಿನಿಮಾದಲ್ಲಿ ಹಲಗಲಿ ಬೇಡರ ಯುವಕನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ.

Leave A Reply