Poor Quality of Medicines: 71 ಔಷಧ ಗುಣಮಟ್ಟ ಕಳಪೆ- ಸರಕಾರದಿಂದ ವರದಿ

Poor Quality of Medicines: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ದೇಶವ್ಯಾಪಿ ನಡೆಸುವ ವಿವಿಧ ಕಂಪನಿಗಳ ವಿವಿಧ ಔಷಧಿಗಳ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆದ ಪರೀಕ್ಷೆ ಸಂದರ್ಭದಲ್ಲಿ 71 ಔಷಧಗಳು ಕಳಪೆ ಗುಣಮಟ್ಟ ಹೊಂದಿದೆ ಎಂದು ವರದಿ ಮಾಡಿದೆ.

ಈ ಕಳಪೆ ಗುಣಮಟ್ಟದಲ್ಲಿ ಕೆಮ್ಮಿನ ಸಿರಪ್‌, ಕಣ್ಣಿನ ಡ್ರಾಪ್‌, ಕ್ಯಾಲ್ಸಿಯಂ, ವಿಟಮಿನ್‌ ಡಿ3 ಮಾತ್ರೆ, ಸೋಡಿಯಂ ಮಾತ್ರೆ, ಇಂಜೆಕ್ಷನ್‌ಗಳು ಸೇರಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಯಾವೆಲ್ಲ ಕಂಪನಿಯ ಔಷಧಿಗಳು ಕಳಪೆ ಗುಣಮಟ್ಟ ಹೊಂದಿದೆ?
ಫರೀದಾಬಾದ್‌ನ ಹಿಂದೂಸ್ತಾನ್ ಆ್ಯಂಟಿ ಬಯೋಟಿಕ್ಸ್‌ ಉತ್ಪಾದಿಸಿದ ಮೆಟ್ರೋನಿಡಾಜೋಲ್‌ ಐಪಿ400 ಎಂಜಿ ಮಾತ್ರೆ; ರೈನ್‌ಬೋ ಲೈಫ್ ಸೈನ್ಸ್‌ನ ಡೊಮ್‌ಪೆರಿಡಾನ್ ಸಸ್ಪೆಷನ್ಸ್: ಪುಷ್ಕರ್ ಫಾರ್ಮಾದ ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ. 5 ಐಯು/1ಎಂಎಲ್ ; ಮಾರ್ಟಿನ್ ಆ್ಯಂಡ್ ಬ್ರೌನ್ ಕಂಪನಿಯ ಕ್ಯಾಲ್ಸಿಯಂ ಗ್ಲುಕೋನೇಟ್ ಇಂಜೆಕ್ಷನ್; ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್‌ನ ಕ್ಯಾಲ್ಸಿಯಂ 500 ಎಂಜಿ ಮತ್ತು ವಿಟಮಿನ್ ಡಿ3 250 ಐಯು ಮಾತ್ರೆ ಇವುಗಳು ಸೇರಿಕೊಂಡಿದೆ.

Leave A Reply

Your email address will not be published.