Home Breaking Entertainment News Kannada OTT Release movie: ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ! ಈ ವಾರ ಒಟಿಟಿಗೆ ಬರಲಿದೆ ಹಿಟ್...

OTT Release movie: ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ! ಈ ವಾರ ಒಟಿಟಿಗೆ ಬರಲಿದೆ ಹಿಟ್ ಆಗಿರೋ ಈ ಸಿನಿಮಾಗಳು!

Hindu neighbor gifts plot of land

Hindu neighbour gifts land to Muslim journalist

OTT Release movie: ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ಹೌದು, ಈ ವಾರ ಒಟಿಟಿಗೆ ಹಿಟ್ ಆಗಿರೋ ಸಿನಿಮಾಗಳು ಎಂಟ್ರಿ ಆಗಲಿದೆ. ಚಿತ್ರಮಂದಿರಗಳಲ್ಲಿ ಕೆಲವು ಸಿನಿಮಾ ನೋಡದವರು ಮನೆಯಲ್ಲಿಯೇ ಕುಳಿತು ಹೊಸ ಚಿತ್ರ ನೋಡಲು ಅವಕಾಶ OTT ಫ್ಲಾಟ್ ಫಾರ್ಮ್ ನೀಡುತ್ತೆ. ಅದರಲ್ಲೂ ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದು, ನಿಮ್ಮನ್ನು ಮನರಂಜಿಸಲು OTT ಯಲ್ಲಿ ಹೊಸ ಸಿನಿಮಾಗಳು (OTT New Movies) ರೆಡಿಯಾಗಿದೆ.

ಸದ್ಯ ಈ ವಾರ ಒಟಿಟಿಗೆ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿ (OTT Release movie) ಇಲ್ಲಿದೆ.
ಮೆಯಿಳಾಗನ್:
ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕಾರ್ತಿ ಮತ್ತು ಅರವಿಂದ್ ಸ್ವಾಮಿ ನಟಿಸಿರುವ ‘ಮೆಯಿಳಾಗನ್’ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಯಾವುದೇ ಫೈಟ್, ಕಮರ್ಶಿಯಲ್ ಎಲಿಮೆಂಟ್ ಇಲ್ಲದ ಫೀಲ್ ಗುಡ್ ಸಿನಿಮಾ ಆಗಿದ್ದ ‘ಮೆಯಿಳಾಗನ್’ ಪ್ರೇಕ್ಷಕರನ್ನು ಸೆಳೆದಿತ್ತು. ಈಗ ಒಟಿಟಿ ಮೂಲಕ ಜನರಿಗೆ ತಲುಪಲಿದೆ. ಸಿನಿಮಾ ಅಕ್ಟೋಬರ್ 27ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ.

‘ದೋ ಪತ್ತಿ’:
ಬಾಲಿವುಡ್​ ಸ್ಟಾರ್ ನಟಿಯರಾದ ‘ಕಾಜೊಲ್’, ‘ಕೃತಿ ಸನೋನ್’, ‘ಶಹೀರ್ ಶೇಖ್’ ಒಟ್ಟಿಗೆ ನಟಿಸಿರುವ ಥ್ರಿಲ್ಲರ್ ಸ್ಟೋರಿ ಹೊಂದಿರುವ ‘ದೋ ಪತ್ತಿ’ ಸಿನಿಮಾ ನೇರವಾಗಿ ಒಟಿಟಿಗೆ ಬರುತ್ತಿದೆ. ಈ ಸಿನಿಮಾ ಅಕ್ಟೋಬರ್ 25 ರಿಂದ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಂ ಆಗಲಿದೆ.

ಲಬ್ಬರ್ ಪಂಡು:
ತಮಿಳಿನ ಸಣ್ಣ ಬಜೆಟ್ ಸಿನಿಮಾ ‘ಲಬ್ಬರ್ ಪಂಡು’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಈಗ ಈ ಸಿನಿಮಾ ಒಟಿಟಿಗೆ ಬಿಡುಗಡೆ ಆಗಲಿದೆ. ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ.

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ: ಸೆಪ್ಟೆಂಬರ್ 27ಕ್ಕೆ ಈ ಸಿನಿಮಾ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಗೆಲುವನ್ನೇ ತನ್ನದಾಗಿಸಿಕೊಂಡಿದೆ. ‘ದೇವರ’ ಸಿನಿಮಾ ಈ ವರೆಗೂ ಸುಮಾರು 600 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಸಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳಾಗುವ ಮೊದಲೆ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಹೌದು, ‘ದೇವರ’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ, ನವೆಂಬರ್ 08 ರಂದು ಸ್ಟ್ರೀಂ ಆಗಲಿದೆ.