Girls take monasticism: ಸನ್ಯಾಸತ್ವ ಸ್ವೀಕರಿಸಿದ ʻಸ್ವೀಟ್ 26ʼ ವರ್ಷದ ಬೆಡಗಿಯರು! ಇವರು ಮುಂದೆ ಬಾಳ್ತಾರಂತೆ ಬಿಂದಾಸ್ ಬದುಕು
Girls take monasticism: ಮನುಷ್ಯ ಜನ್ಮ ಅಂತ ಸಿಕ್ಕಿದ ಮೇಲೆ ಮನುಜನಾಗಿ ಲೌಕಿಕ ಜೀವನದ ಭೋಗಗಳನ್ನ ಅನುಭವಿಸಬೇಕು. ಒಂದು ವೇಳೆ ನೀವು ಅನುಭವಿಸಿಲ್ಲಾ ಅಂದ್ರೆ ನರಕ(Heven) ಪ್ರಾಪ್ತಿಯಾಗುತ್ತಂತೆ. ಮನುಷ್ಯ ತಾನು ಸಾಯ್ತೆನೆ ಅಂತ ಗೊತ್ತಿದ್ರು ಅದಕ್ಕೂ ಮುನ್ನ ಎಷ್ಟು ಸಾಧ್ಯವೋ ಅಷ್ಟು ಸುಖ ಭೋಗಗಳನ್ನು(Happiness) ಅನುಭವಿಸಲು ಪ್ರಯತ್ನಿಸುತ್ತಾನೆ. ಆದ್ರೆ ಕೆಲವರು ಒಂದು ವಯಸ್ಸಿಗೆ ಬಂದ ಮೇಲೆ ಈ ಸಂಸಾರಿಕ ಜೀವನ(life) ನಶ್ವರ ಅಂತ ತಿಳಿದು ಪರಿತ್ಯಾಗಿಗಳಾಗಿ ಆಧ್ಯಾತ್ಮ ಜೀವನ(
Spiritual life) ನಡೆಸಲು ನಿರ್ಧರಿಸುತ್ತಾರೆ. ಆದರೆ ಇಲ್ಲಿ ಚಿರ ಯವ್ವನದ ಯುವತಿಯರಿಗೆ(Girls) ಅದೇಕೋ ಈ ಸಂಸಾರ ಜೀವನದಲ್ಲಿ ಏನೂ ಇಲ್ಲ ಅಂತ ತಮ್ಮ 26ನೇ ವಯಸ್ಸಿನಲ್ಲೇ ಅನ್ನಿಸಿದೆಯಂತೆ.
ದಾವಣಗೆರೆಯ ಯುವತಿ ಮಾನಸಿ ಹಾಗೂ ಗೋಕಾಕ ಮೂಲದ ಭಕ್ತಿ ಎಂಬ ಜೈನ ಸಮುದಾಯದ ಯುವತಿಯರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮಾನಸಿ, ಎಂ.ಎ ಸೈಕಾಲಜಿ ಓದಿದ್ರೆ, ಭಕ್ತಿ BA LLB ಮುಗಿ ಸಿದ್ದಾರೆ. ಇವರು ಭೌತಿಕ ಜೀವನ ಅನುಭವಿಸಿದ ಬಳಿಕ ಲೌಖಿಕ ಜೀವನದಲ್ಲಿ ಏನು ಇಲ್ಲ, ಎಲ್ಲಾ ನಶ್ವರ. ಸನ್ಯಾಸತ್ವದಲ್ಲಿ ಪರಮ ಸುಖ ಇದೇ ಅಂತಿದ್ದಾರೆ ಈ ಸನ್ಯಾಸಿನಿಯರು. ಹಾಗಾಗಿ ಇವರಿಬ್ಬರು ದಾವಣಗೆರೆ ರೇಣುಕಾ ಮಂದಿರದಲ್ಲಿ ಮೂರ್ತಿ ಪೂಜೆ ನೆರವೇರಿಸಿ ಸನ್ಯಾಸತ್ವ ಸ್ವೀಕರಿಸಿದರು.
ಸನ್ಯಾಸತ್ವ ಸ್ವೀಕರಿಸುವ ಕ್ರಮವಾಗಿ ಮೂರ್ತಿ ಪೂಜೆಯನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಮಾಡಲಾಗುತ್ತೆ. ಅವರನ್ನೆ ಮೂರ್ತಿಯಂತೆ ಜನ ಕಂಡು ಅವರಿಗೆ ನಮಿಸಲಾಗುತ್ತದೆ. ಈ ಸನ್ಯಾಸತ್ವ ಕಾರ್ಯಕ್ರಮದಲ್ಲಿ ಅವರ ನೆರೆಹೊರೆಯವರು, ಬಳಗದವರು ಅಲ್ಲದೆ ನಾಗರೀಕರೂ ಬಂದಿರುತ್ತಾರೆ. ಇದರಲ್ಲಿ ಬಂಧುಗಳೆಲ್ಲ ಬಂದು ಕೊನೆಯದಾಗಿ ಅವರನ್ನ ನೋಡಿ ಕಣ್ತುಂಬಿಕೊಳ್ಳುತ್ತಾರೆ.
ಸನ್ಯಾಸತ್ವದಲ್ಲೇ ಇದೆ ಅಂತಿಮ ಜೀವನದ ಜೀವನದ ಸುಖ ಅಂತಾರೆ ಈ ಯುವತಿಯರು. ಯಾಕೆಂದರೆ ಜೀವನದ ಎಲ್ಲಾ ಬಂಧಗಳಿಂದ ಮುಕ್ತರಾಗುತ್ತೇವೆ. ಸಮಾಜಸೇವೆ, ಧರ್ಮ ಸೇವೆಯಲ್ಲಿ ಪರಮ ಸತ್ಯವನ್ನು, ಸಂತೋಷವನ್ನ ಕಂಡುಕೊಳ್ಳಬಹುದು. ಆದರೆ ನಾವು ನೀವು ಅನುಭವಿಸುವ ಐಶಾರಾಮಿ ಜೀವನ ಮಾತ್ರ ಅವರಿಗೆ ಸಿಗೋದಿಲ್ಲ.
ಯುವತಿಯರಿಗೆ ನವೆಂಬರ್ 17 ರಂದು ಜಾರ್ಖಂಡದಲ್ಲಿ ಪರಮಪೂಜ್ಯ ಆಚಾರ್ಯ ಶ್ರೀ ಮುಕ್ತಿ ಪ್ರಭು ಸುರೀಶ್ವರ್ ಜೀ ಮಹಾರಾಜರ ನಿಶ್ರೆಯಲ್ಲಿ ಹಾಗೂ ಪರಮ ಪೂಜ್ಯ ಸಾಧವಿ ಶ್ರೀ ಪೂರ್ಣಪ್ರಜ್ಞ ಶ್ರೀ ಜಿ ಮಹಾರಾಜ ಸಾಹೇಬ ಸಮ್ಮುಖದಲ್ಲಿ ರುಜುಬಾಲಿಕಾ ತೀರ್ಥಕ್ಷೇತ್ರದಲ್ಲಿ ಜೈನ ಸನ್ಯಾಸತ್ವ ದೀಕ್ಷೆ ಪ್ರಾಪ್ತವಾಗಲಿದೆ. ಜೈನ ಸನ್ಯಾಸತ್ವದಲ್ಲಿ ಅವರು ತಮ್ಮ ದೈನಂದಿನ ಬಟ್ಟೆಬರೆಗಳನ್ನು ಬಿಟ್ಟು ಶ್ವೇತ ವರ್ಣದ ಉಡುಗೆ ತೊಟ್ಟು ಧರ್ಮ ಪ್ರಚಾರ ನಿರತರಾಗಬೇಕು. ಒಮ್ಮೆ ಸನ್ಯಾಸತ್ವ ದೀಕ್ಷೆ ತೆಗೆದುಕೊಂಡ ಮೇಲೆ ಅವರ ಬೋಗದ, ಐಶಾರಾಮಿ ಜೀವನ ಕೊನೆಗೊಳ್ಳುತ್ತದೆ. ಮಳೆ, ಚಳಿ, ಬಿಸಿಲು ಎನ್ನದೆ, ಪರ್ಯಾಟನೆ ನಡೆಸಿ ಧರ್ಮ ಪ್ರಚಾರ ಮಾಡಬೇಕಾಗುತ್ತದೆ. ಅದರೊಂದಿಗೆ ಸಮಾಜಕ್ಕೆ ಧರ್ಮ ಬೋದನೆ ಮಾಡಿ, ಅದ್ರಲ್ಲಿ ಪರಮ ಸತ್ಯವನ್ನ ಕಂಡಿಕೊಳ್ಳುತ್ತಾರೆ.
ಪಾಲಕರಿಗೂ ಯಾವುದೇ ಬೇಸರವಿಲ್ಲ:
ತಮ್ಮ ಮಕ್ಕಳ ಮದುವೆ, ಮೊಮ್ಮಕ್ಕಳನ್ನು ನೋಡಿ, ತಮ್ಮ ವೃದ್ಯಾಪ್ಯವನ್ನು ಕಳೆಯೋಣ ಅಂತ ಅಂದುಕೊಂಡಿದ್ದ ತಂದೆ ತಾಯಿಗಳಿಗೆ ಇವರೇನು ನಿರಾಸೆ ಮಾಡಿಲ್ಲಂತೆ. ಯುವತಿಯರ ನಿರ್ಧಾರಕ್ಕೆ ಅವರ ತಂದೆ ತಾಯಿಗಳ ವಿರೋಧ ಹಾಗೂ ನೋವು ಪಟ್ಟಿಲ್ಲ. ದೀಕ್ಷೆ ಪಡೆಯಲು ತಮ್ಮ ಮಕ್ಕಳು ಹೋದಾಗ ಖುಷಿಯಿಂದಲೇ ಸ್ವೀಕರಿಸಬೇಕು. ಹಾಗೆ ಅವರನ್ನು ಪೂಷಕರು, ಕುಟುಂಬಸ್ಥರು ಎಲ್ಲಾ ಸಂತೋಷದಿಂದ ಕಳುಹಿಸಿ ಕೊಡಬೇಕು. ಹಾಗಿದ್ದಾಗ ಮಾತ್ರ ಅವರ ಸನ್ಯಾಸತ್ವಕ್ಕೆ ಅರ್ಥ ಬರುತ್ತೆ ಅನ್ನೋದು ಅವರ ನಂಬಿಕೆ.
ಆದರೆ ಇಳಿ ವಯಸ್ಸಿನ ಹುಡುಗಿಯರು ಬೇರೆಯವೃಂತೆ ಸಕಲ ಬೋಗಗಳನ್ನು ಬಿಟ್ಟು, ರಾಜಮನೆತನದಲ್ಲಿ ಹುಟ್ಟಿ ಎಲ್ಲವನ್ನೂ ತ್ಯಜಿಸಿದ ಮಹಾವೀರ ಸನ್ಯಾಸತ್ವ ಸ್ವೀಕರಿಸಿ ಧರ್ಮ ಪ್ರಚಾರಕ್ಕೆ ಇಳಿದಂತೆ ಇವರು ಮಾಡಿದ್ದಾರೆ. ಇದೀಗ ಈ ಹುಡುಗಿಯರ ನಿರ್ಧಾರ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದೆ.