Bigg Boss: ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಗೆ ನುಗ್ಗಿ ಸ್ಪರ್ಧಿಗಳ ವಿರುದ್ಧ ದಿಕ್ಕಾರ ಕೂಗಿದ ಜನರ ದಂಡು – ಮನೆ ಮಂದಿ ಶಾಕ್, ಆಗಿದ್ದೇನು?

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ನೀವು ಯಾವಾಗಲೂ ಇಷ್ಟೊಂದು ಜನರನ್ನು ಕಂಡಿರಲು ಸಾಧ್ಯವಿಲ್ಲ. ಅಷ್ಟು ಜನ ಬಿಗ್‌ ಬಾಸ್‌ ಮನೆಯೊಳಗಡೆ ಈ ಬಾರಿ ಬಂದಿದ್ದಾರೆ. ಇದ್ದಕ್ಕಿದ್ದಂತೆ ಮನೆಗೆ ನುಗ್ಗಿ ದಿಕ್ಕಾರ ಕೂಗಿದ್ದಾರೆ. ಈ ಕುರಿತು ಬಿಗ್ ಬಾಸ್ ಪ್ರೋಮೋ ಹಂಚಿಕೊಂಡಿದೆ.

ಈ ವಾರ ದೊಡ್ಮನೆಯಲ್ಲಿ(Bigg Boss) ಸ್ಪರ್ಧಿಗಳು ರಾಜಕೀಯ ಪಕ್ಷಗಳಾಗಿ ರೂಪುಗೊಂಡಿದ್ದಾರೆ. ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸ್ನೇನಾ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ
ಬಿಗ್ ಬಾಸ್(Bigg Boss Kannada-11) ಕಾರ್ಯಕ್ರಮದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜನ ಸಾಮಾನ್ಯರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಕೆಲವು ಸ್ಪರ್ಧಿಗಳ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಹಾಗಂತ ಇದು ಪ್ರತಿಭಟನೆ ಅಲ್ಲ. ಟಾಸ್ಕ್ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂದು ಬಿಗ್ ಬಾಸ್ ಪ್ರೋಮೋ ತೋರಿಸುತ್ತಿದೆ.

ಬಿಗ್‌ ಬಾಸ್‌ ನೀಡಿದ್ದ ಟಾಸ್ಕ್‌ಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಟಾಸ್ಕ್‌ನ ಕೊನೆಯ ಹಂತ ಓಟಿಂಗ್‌ಗೆ ಬಂದು ನಿಂತಿದೆ. ಆ ಪ್ರಕಾರ ಓಟಿಂಗ್‌ ಮಾಡಲು ಮನೆಯೊಳಗಡೆ ಜನರನ್ನೇ ಕಳಿಸಲಾಗಿದೆ. ರಾಜಕೀಯ ಅಂದ್ಮೇಲೆ ಸಮಾವೇಶಕ್ಕೆ ಜನ ಸಾಮಾನ್ಯರು ಬರಲೇಬೇಕಲ್ವಾ? ಹಾಗಾಗಿ ಬಿಗ್ ಬಾಸ್ ಮನೆಯ ರಾಜಕೀಯ ಸಮಾವೇಶಕ್ಕೆ ಜನ ಸಾಮನ್ಯರ ದಂಡೇ ಹರಿದು ಬಂದಿದೆ. ಜನ ಸಾಮಾನ್ಯರ ದಂಡು ಬಿಗ್ ಬಾಸ್ ಮನೆಗೆ ಲಗ್ಗೆ ಇಟ್ಟಿದ್ದು ಆಯಾ ರಾಜಕೀಯ ಪಕ್ಷಗಳ ಸ್ಪರ್ಧಿಗಳಿಗೆ ಜೈಕಾರ ಹಾಕಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಪ್ರೋಮೋದಲ್ಲಿ ಏನಿದೆ?
ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಪ್ರಶ್ನೆ ಕೇಳುವಾಗ ತುಂಬಾ ದಿನಗಳ ನಂತರ ನನಗೆ ನನ್ನ ಅಮ್ಮ ನೆನಪಾಗ್ತಾ ಇದ್ದಾಳೆ. ನನ್ನ ಅಕ್ಕ ನೆನಪಾಗ್ತಾ ಇದಾಳೆ ಎಂದು ವಿಕ್ರಂ ಹೇಳುತ್ತಾರೆ. ಇನ್ನು ಹನುಮಂತಣ್ಣ ನಿನ್ನ ಪಂಚೆ ಎಲ್ಲೋಯ್ತಣ್ಣೋ? ಎಂದು ಜನರು ಕಾಮಿಡಿಯಾಗಿ ಪ್ರಶ್ನೆ ಮಾಡಿದ್ದಾರೆ. ಅದು ಆ ಕಡೆ ಇದೆ ಈಗೇನು ನಾನು ಆ ಪಂಚೆ ತಗೊಂಡ್‌ ಬಂದೇ ಮಾತಾಡ್ಲಾ? ಎಂದು ಅವರೂ ಕೂಡ ತಮಾಷೆ ಮಾಡುತ್ತಾರೆ.

ಇನ್ನು ತುಕಾಲಿ ಮಾನಸಾ ಅವರಿಗೆ ಜನ ಪ್ರಶ್ನೆ ಮಾಡಿದ್ದೇನೆಂದರೆ ನಿಮ್ಮ ದೊಡ್ಡ ಕಣ್ಣನ್ನು ನೋಡಿ ಇಡೀ ಕರ್ನಾಟಕನೇ ಭಯ ಬಿದ್ದೋಗಿದೆ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಅವರು ನಿನ್ ಸಮಸ್ಯೆ ಏನು ಹೇಳಣ್ಣ ಎಂದು ಹೇಳಿದ್ದಾರೆ. ಅದಾದ ನಂತರದಲ್ಲಿ ಹಲವಾರು ಜನ ದಿಕ್ಕಾರ ಕೂಗಿದ್ದಾರೆ. ಈ ರೀತಿಯಾಗಿ ಮನೆಯ ವಾತಾವರಣ ಬದಲಾಗಿದೆ.

Leave A Reply

Your email address will not be published.