C.P.Yogeshwar: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಆಸ್ತಿ ಮೌಲ್ಯ ಎಷ್ಟಿದೆ?

C P Yogeshwar: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಉಪಚುನಾವಣಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಅವರ ಸ್ಥಿರಾಸ್ತಿ ಮೌಲ್ಯ 27,94,06,412ರೂ, ಚರಾಸ್ತಿ ಮೌಲ್ಯ-7,25,20,470 ರೂ, ಕೃಷಿ ಮೌಲ್ಯ ಯೋಗೇಶ್ವರ್‌ ಹೆಸರಲ್ಲಿ 22,02,47,157ರೂ. ಇದೆ. ಸಿ.ಪಿ.ಯೋಗೇಶ್ವರ್‌ ಹೆಸರಿನಲ್ಲಿ 2,37,62,000 ಕೋಟಿ ರೂ. ಮೌಲ್ಯದ ಮನೆ ಇದೆ.

ಉಳಿದ ಹಾಗೆ ಯೋಗೇಶ್ವರ್‌ ಹೆಸರಲ್ಲಿ 25,86,31,284 ರೂ. ಸಾಲವಿದೆ. ಯೋಗೇಶ್ವರ್‌ ಬಳಿ 250 ಗ್ರಾಂ ಚಿನ್ನಾಭರಣವಿದೆ ಎಂದು ಘೋಷಿಸಿದ್ದಾರೆ.

ಸಿ.ಪಿ.ಯೋಗೇಶ್ವರ್‌ ಅವರು ತಮ್ಮ ಪತ್ನಿ ಶೀಲಾ ಹೆಸರಿನಲ್ಲಿಯೂ ಅಪಾರ ಪ್ರಮಾಣದ ಆಸ್ತಿ ಘೋಷಣೆ ಮಾಡಿದ್ದಾರೆ. ಪತ್ನಿ ಶೀಲಾ ಹೆಸರಿನಲ್ಲಿ 25,35,37,740 ರೂ. ಮೌಲ್ಯದ ಸ್ಥಿರಾಸ್ತಿ, 7,10,80,556 ರೂ. ಮೌಲ್ಯದ ಚರಾಸ್ತಿ ಇದೆ. ಶೇಷಗಿರಿಹಳ್ಳಿ, ಕೋತನಹಳ್ಳಿ, ಕೆಂಜಿಗರಹಳ್ಳಿ, ಕೇತೋಹಳ್ಳಿ, ಹಂಪಾಪುರ ಗ್ರಾಮದಲ್ಲಿ ಸ್ಥಿರಾಸ್ತಿ ಯನ್ನು ಯೋಗೇಶ್ವರ್‌ ಹೊಂದಿದ್ದಾರೆ.

ಪತ್ನಿ ಶೀಲಾ ಹೆಸರಿನಲ್ಲಿ 2,14,52,740 ರೂ ಮೌಲ್ಯದ ಕೃಷಿಭೂಮಿ, 6.65 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, 15.45 ಕೋಟಿ ರೂ. ಮೌಲ್ಯದ ಮನೆ ಶೀಲಾ ಅವರ ಹೆಸರಿನಲ್ಲಿದೆ. 1ಕೆಜಿ 500 ಗ್ರಾಂ ಚಿನ್ನಾಭರಣ, 20 ಕೆಜಿ ಬೆಳ್ಳಿ ಇದೆ ಎಂದು ಪತ್ನಿ ಶೀಲಾ ಹೆಸರಿನಲ್ಲಿ ಘೋಷಣೆ ಮಾಡಿದ್ದಾರೆ. ಇದರಲ್ಲಿ 1ಕೆಜಿ ಚಿನ್ನ, 50 ಕೆಜಿ ಬೆಳ್ಳಿಯನ್ನು ಸಾರ್ವಜನಿಕರಿಂದ ಸ್ವೀಕರಿಸಿದ್ದಾರೆ ಎಂದು ಸಿಪಿ ಯೋಗೇಶ್ವರ್‌ ಹೇಳಿದ್ದಾರೆ.

ಪತ್ನಿ ಶೀಲಾ ಹೆಸರಿನಲ್ಲಿ 3,41,42,184 ರೂ ಸಾಲವಿದೆ ಎಂದು ಘೋಷಣೆ ಮಾಡಿದ್ದಾರೆ.

Leave A Reply

Your email address will not be published.