Nisha Yogeshwar: ಅಪ್ಪ ಸಿ.ಪಿ ಯೋಗೇಶ್ವರ್ ಕುರಿತ ಶಾಕಿಂಗ್ ವಿಷಯ ಬಿಚ್ಚಿಟ್ಟ ಮಗಳು ನಿಶಾ! ಮಗಳಿಂದಲೇ ಯೋಗಿಶ್ವರ್ ಕರ್ಮಕಾಂಡ ಅನಾವರಣ

Nisha Yogeshwar: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸದ್ಯಕ್ಕೆ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಸಿ.ಪಿ. ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಲಾಗಿದೆ. ಆದ್ರೆ ಅವರ ಮಗಳು ನಿಶಾ ಯೋಗೇಶ್ವರ್ (Nisha Yogeshwar) ಅಪ್ಪನ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ತಂದೆ ಬಗೆಗಿನ ಶಾಕಿಂಗ್ ವಿಚಾರವನ್ನು ದಿನಕ್ಕೊಂದು ವಿಡಿಯೋ ಹೇಳಿಕೆ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಅವರು ಅಪ್ಪನ ಗೆಲುವಿಗೆ ಅಡ್ಡಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ವಿಡಿಯೋ ಹೇಳಿಕೆಯನ್ನು ಫೇಸ್​ಬುಕ್​ನಲ್ಲಿ ಬಿಡುಗಡೆ ಮಾಡಿರುವ ನಿಶಾ ಯೋಗೇಶ್ವರ್, ನಮ್ಮ ಕುಟುಂಬದ ಗುಟ್ಟನ್ನು ರಟ್ಟು ಮಾಡುತ್ತೇನೆ. ನನ್ನ ತಂದೆಯಿಂದ ನಾನು ಸಾಕಷ್ಟು ಅವಮಾನ ಅನುಭವಿಸಿದ್ದೇನೆ. ನಾನು 13 ವರ್ಷದವಳಿದ್ದಾಗ ನನ್ನ ತಂದೆ ಬೇರೊಂದು ಸಂಸಾರವನ್ನು ಕಟ್ಟಿಕೊಂಡಿದ್ದನ್ನು ನಾನು ಪತ್ರಿಕೆಗಳ ಮೂಲಕ ತಿಳಿದುಕೊಂಡೆ.

ನಿಶಾ ವೈರಲ್ ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

https://x.com/SivaHarsha_23/status/1810921020770992371

ಆದ್ರೆ ನನ್ನ ಜೀವನವನ್ನು ಮತ್ತೆ ಹೊಸದಾಗಿ ಕಟ್ಟಿಕೊಳ್ಳಲು ಒಬ್ಬಳೇ ಬಾಂಬೆಗೆ ತೆರಳಿ ಬೀದಿ ಬೀದಿ ಕಚೇರಿಗಳಿಗೆ ಅಲೆದೆ. ಆದ್ರೆ ಪ್ರಯತ್ನ ಎಲ್ಲವೂ ವಿಫಲ ಆಗುತ್ತಿದ್ದವು. ಅದೇ ಸಮಯ ಅಲ್ಲಿಂದ ನನ್ನನ್ನು ಅವರ ಸ್ವಾರ್ಥಕ್ಕಾಗಿ ವಾಪಸ್ ಕರೆಸಿಕೊಳ್ಳಲು ಅಪ್ಪ ತುಂಬಾ ಪ್ರಯತ್ನಪಟ್ಟರು. ಕೊನೆಗೂ ಅವರ ಮಾತು ಕೇಳಿ 2016ರಲ್ಲಿ ವಾಪಸ್ ಬಂದೆ. ಅನಂತರ ಅವರ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದೆ. ಇಬ್ಬರೂ ಒಟ್ಟಾಗಿ ಬ್ಯುಸಿನೆಸ್ ಮಾಡೋಣ ಎಂದು ಭರವಸೆ ಕೂಡಾ ನೀಡಿದರು. ಆದರೆ ನನಗೆ ತಿಳಿಯದಂತೆ ನನಗೆ ಬಂದ ಅವಕಾಶ ಎಲ್ಲವನ್ನು ತಂದೆಯೇ ತಪ್ಪಿಸಿದ್ದಾರೆ.

ಅಲ್ಲದೇ ಅಮೆರಿಕಕ್ಕೆ ಹೋಗಿ 4 ವರ್ಷ ವ್ಯಾಸಂಗ ಮುಗಿಸಿ ವಾಪಸ್ ಬಂದಾಗ ಓದಿದ್ದು ಸಾಕು, ಇಲ್ಲೇ ಬದುಕು ಕಟ್ಟಿಕೋ ಎಂದು ಅಪ್ಪ ಹೇಳಿದರು. ಶಿಕ್ಷಣ ನಿಲ್ಲಿಸಬಾರದು ಎಂದು ಮತ್ತೆ ಅಮೆರಿಕಾಗೆ ಹೋಗಿ ಕೊನೆ ಸೆಮಿಸ್ಟರ್ ಮುಗಿಸಿ ಪದವಿ ಪಡೆದುಕೊಂಡೆ. ಇಲ್ಲಿ ಬಂದು ಕೆಲಸ ಕೊಡಿಸಿ ಎಂದಾಗ 3 ವರ್ಷ ಅಲೆಸಿದರು. ನನ್ನ ತಾಯಿ, ತಮ್ಮನ ಭವಿಷ್ಯದ ಬಗ್ಗೆಯೂ ನನಗೆ ಭಯವಿತ್ತು. ಸಿನಿಮಾದಿಂದ ಬಂದ ಅವಕಾಶವನ್ನು ಕೂಡ ಅವರು ತಪ್ಪಿಸಿದರು ಎಂದು ನಿಶಾ ಹೇಳಿದ್ದಾರೆ.

ನನಗೆ ಮದುವೆ ಮಾಡಿಸುವುದಾಗಿ ಹೇಳಿ 2 ವರ್ಷ ಸಮಯ ದೂಡಿದರು. ಈ ನಡುವೆ ನನ್ನ ಮಲತಾಯಿ ಶೀಲ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದರು. ನಂತರ ನಿನ್ನ ಹಣೆಬರಹದಲ್ಲಿ ಭಿಕ್ಷೆ ಬೇಡುವುದು ಬರೆದಿದ್ದರೆ ಭಿಕ್ಷೆಯನ್ನೇ ಬೇಡಬೇಕು ಎಂದು ಅಪ್ಪ ಹೇಳಿದ್ದರು. ಅವರು ಹೇಳಿದಂತೆ ನಾನೀಗ ನೆಲೆಯಿಲ್ಲದೆ ರಸ್ತೆಯಲ್ಲಿದ್ದೇನೆ ಎಂದು ನಿಶಾ ಬೇಸರ ಹೊರಹಾಕಿದ್ದಾರೆ. ಇಷ್ಟು ಮಾತ್ರ ಅಲ್ಲದೇ ನನ್ನ ಅಪ್ಪ ಯಾವ ತಂದೆಯೂ ಮಗಳಿಗೆ ಹೇಳದ ನೀಚ ಪದ ಬಳಸಿ ನನಗೆ ಬೈಯುತ್ತಿದ್ದರು. ಅವಮಾನ ಮಾಡುತ್ತಿದ್ದರು. ರಕ್ತ ಬರುವಂತೆ ಹೊಡೆಯುತ್ತಿದ್ದರು. ಅವರು ನನ್ನ ಜೀವನವನ್ನೇ ಹಾಳು ಮಾಡಿದರು ಎಂದು ನಿಶಾ ಆರೋಪಿಸಿದ್ದಾರೆ.

Leave A Reply

Your email address will not be published.