Contaminated water: ಕಲುಷಿತ ನೀರು ಸೇವನೆ ಪ್ರಕರಣ: ನಿನ್ನೆ ವೃದ್ಧೆ, ಇಂದು ಬಾಲಕಿ ಸಾವು: ಕೆಲವರ ಸ್ಥಿತಿ ಗಂಭೀರ

Contaminated water: ಕಲುಷಿತ ನೀರು ಸೇವನೆ ಮಾಡಿದ್ದ ಹಿನ್ನೆಲೆ ಬಾಲಕಿಯೋರ್ವಳು(Girl) ಸಾವನ್ನಪ್ಪಿದ(Death) ಘಟನೆ ತುಮಕೂರು(Tumakur) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಸೋರಲಮಾವು ಗ್ರಾಮದಲ್ಲಿ ನಡೆದಿದೆ. ಇದರೊಂದಿಗೆ ಮತ್ತಷ್ಟು ಜನರು ಅಸ್ವಸ್ಥಗೊಂಡಿದ್ದು, ಸಾವಿನ ಸಂಖ್ಯೆ(Death toll) ಹೆಚ್ಚಾಗುವ ಭೀತಿ ಎದುರಾಗಿದೆ. ಸಾವನ್ನಪ್ಪಿದ ಬಾಲಕಿ 15 ವರ್ಷದ ಭುವನೇಶ್ವರಿ ಎಂದು ಗುರುತಿಸಲಾಗಿದೆ.

ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಮೂವರು ದಾಖಲು ಮಾಡಲಾಗಿತ್ತು. ಆದರೆ ಅವರ ಸ್ಥಿತಿ ಹೇಗಿದೆ ಎಂದು ತಿಳಿಯುತ್ತಿಲ್ಲ. ಸಾವಿನ ಸಂಖ್ಯೆಯನ್ನ ಜಿಲ್ಲಾಡಳಿತ ಮುಚ್ಚಿಡುತ್ತಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹನುಮಂತಯ್ಯ, ನರಸಿಂಹಯ್ಯ, ಶಿವು ತೀರ ಅಸ್ವಸ್ಥ ರಾಗಿದ್ದು, ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕಂ ಹೋಡಿದ್ದಾರೆ.

ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ಕೊಟ್ಟು ಮೃತರ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ. ನಿನ್ನೆಯಷ್ಟೇ ಗ್ರಾಮದ ವೃದ್ದೆ ಗುಂಡಮ್ಮ 60 ಸಾವನ್ನಪ್ಪಿದ್ದರು. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ.

Leave A Reply

Your email address will not be published.