C P Yogeshwar: ಚನ್ನಪಟ್ಟಣದ ಚದುರಂಗದಾಟದಲ್ಲಿ ʼಸೈನಿಕʼ ನಿಂದ ʼಕೈʼ ಗೆ ಸಾಥ್‌!

Share the Article

C P Yogeshwar: ಚನ್ನಪಟ್ಟಣ ಉಪಚುನಾವಣೆ ಅಖಾಡಕ್ಕೆ ಸ್ಪರ್ಧೆಯಲ್ಲಿ ಸಿಪಿ ಯೋಗೇಶ್ವರ್‌ ಅವರು ಇನ್ನು ಮಹತ್ವದ ನಿರ್ಧಾರ ತೆಗದುಕೊಳ್ಳಬಹುದು. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುವುದರ ಕುರಿತು ಇದೀಗ ಬಿಸಿ ಬಿಸಿ ಚರ್ಚೆಆಗುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ ಸಿಪಿ ಯೋಗೇಶ್ವರ್‌ ಇದೀಗ ದಿಢೀರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ಒಂದು ಮಾತು ನಿಜವಾಗುವ ಲಕ್ಷಣ ಕಾಣುತ್ತಿದೆ. ಅದುವೇ ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ ಖಚಿತ ಎನ್ನುವುದು.

ಬೆಂಗಳೂರಿನ ಸದಾಶಿವ ನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿಯಾದ ಯೋಗೇಶ್ವರ್‌ ನಂತರ ಇಬ್ಬರೂ ಒಂದೇ ಕಾರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಬಂದಿದ್ದಾರೆ. ಸಭೆ ಬಳಿಕ ಚನ್ನಪಟ್ಟಣದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ ಎಂದೇ ಹೇಳಬಹುದು.

 

Leave A Reply