Home Karnataka State Politics Updates Mangaluru: ಮಂಗಳೂರಿನಲ್ಲಿ ಕುಣಿತ ಭಜನೆಗೆ ಧಿಕ್ಕಾರ: ಕುಣಿತ ಭಜನೆ ಬಗ್ಗೆ ಕೊಂಕು ಮಾತನಾಡಿದ ಕಾಂಗ್ರೆಸ್ ನಾಯಕಿ

Mangaluru: ಮಂಗಳೂರಿನಲ್ಲಿ ಕುಣಿತ ಭಜನೆಗೆ ಧಿಕ್ಕಾರ: ಕುಣಿತ ಭಜನೆ ಬಗ್ಗೆ ಕೊಂಕು ಮಾತನಾಡಿದ ಕಾಂಗ್ರೆಸ್ ನಾಯಕಿ

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರಿನಲ್ಲಿ (Mangaluru) ಕುಣಿತ ಭಜನೆಗೆ ಧಿಕ್ಕಾರ ಕೇಳಿಬರುತ್ತಿದೆ. ಸಾಮಾನ್ಯವಾಗಿ ಕರ್ನಾಟಕ ಕರಾವಳಿಯಲ್ಲಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಕುಣಿತ ಭಜನೆ ಸಾಮಾನ್ಯವಾಗಿ ನಡೆಯುತ್ತದೆ. ಆದರೆ, ಈ ಭಜನೆಗಳಲ್ಲಿ ಭಾಗವಹಿಸುವ ಹಿಂದೂ ಹೆಣ್ಮಕ್ಕಳ ಬಗ್ಗೆ ಅರಣ್ಯಾಧಿಕಾರಿಯೊಬ್ಬರು ನೀಡಿದ್ದ ವಿವಾದಾದ್ಮತಕ ಹೇಳಿಕೆ ಬಳಿಕ ಮಂಗಳೂರಿನಲ್ಲಿ ಕುಣಿತ ಭಜನೆಯ ವಾರ್ ಆರಂಭವಾಗಿದೆ. ಈ ಪ್ರಕರಣ ಬೆನ್ನಲ್ಲೇ ಕಾಂಗ್ರೆಸ್ ನಾಯಕಿಯೊಬ್ಬರು ನೀಡಿರುವ ಹೇಳಿಕೆ ದೊಡ್ಡದಾಗಿ ವಿವಾದ ಸೃಷ್ಟಿ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಭಜನೆಯಲ್ಲಿ ಪಾಲ್ಗೊಳ್ಳುವ ಹಿಂದುಳಿದ ವರ್ಗಗಳ ಹಿಂದೂ ಹೆಣ್ಮಕ್ಕಳ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು 1 ಲಕ್ಷ ಹಿಂದುಳಿದ ವರ್ಗದ ಹುಡುಗಿಯರು ಸೂಳೆಯಾಗಿದ್ದಾರೆ’ ಎಂದು ಹೇಳಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳನ್ನ ರಸ್ತೆ ಬೀದಿಯಲ್ಲಿ ಕುಣಿಸಲಾಗುತ್ತಿದೆ. ಕುಣಿತ ಭಜನೆ ತಪ್ಪಲ್ಲ. ಆದರೆ ಎಲ್ಲಿ ಕುಣಿಯಬೇಕೋ ಅಲ್ಲೇ ಕುಣಿಯಬೇಕು. ಹಾದಿ ಬೀದಿಯಲ್ಲಿ ಕುಣಿಯುವುದು ತಪ್ಪು. ಇನ್ನು ಭಜನೆಯಲ್ಲಿ ಯಾವ ಮೇಲ್ವರ್ಗದ ಜನರು ನಮಗೆ ಕಾಣಿಸುತ್ತಿಲ್ಲ. ಮೇಲ್ವರ್ಗದ ಜನ ದೇವಸ್ಥಾನದ ಗೋಪುರದ ಒಳಗೆ ರೇಷ್ಮೆ ಸೀರೆ ಹಾಕಿರುತ್ತಾರೆ. ಒಡವೆ ಹಾಕಿ, ಅಲಂಕಾರ ಮಾಡಿ ದೇವರ ಮುಂದೆ ಕುಣಿಯುತ್ತಾರೆ. ಅದೇ ನಮ್ಮ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಟ್ಯಾಬ್ಲೋ ಮುಂದೆ ಕುಣಿಯುತ್ತಾರೆ. ಮೆರವಣಿಗೆಯಲ್ಲಿ ಕುಣಿಯುತ್ತಾರೆ. ನಮ್ಮ ಮಕ್ಕಳನ್ನು ಕುಣಿತ ಭಜನೆಯ ಟ್ಯಾಗ್‌ನಡಿ ಕುಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಆದ್ರೆ ಕುಣಿತ ಭಜನೆ ಪರ – ವಿರೋಧ ಚರ್ಚೆ ಬಗ್ಗೆ ಹೇಳುವುದಾದ್ರೆ, ಕೆಲವೊಂದಿಷ್ಟು ಮಂದಿ ಕುಣಿತ ಭಜನೆ ಇದು ಸರಿ ಎಂದು ಪ್ರತಿಪಾದಿಸಿದರೆ, ಇನ್ನೊಂದಿಷ್ಟು ಮಂದಿ ತಪ್ಪು ಎಂದು ಚರ್ಚೆಗೆ ಇಳಿದಿದ್ದಾರೆ.

ಇನ್ನು ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತಿದೆ ಎಂಬ ಪ್ರತಿಭಾ ಕುಳಾಯಿ ಹೇಳಿಕೆ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಭಜನೆ ವಿಷಯದಲ್ಲಿ ರಾಜಕೀಯ ಬೇಡ. ಹಿಂದೂ ಪರಂಪರೆಯಲ್ಲಿ ದೇವರನ್ನು ತಲುಪಲು ಭಜನೆಯು ಒಂದು ಉತ್ತಮ ಮಾರ್ಗ ಎಂದು ಹೇಳಿದ್ದಾರೆ. ನೋಡುವ ಮನಸಿನಲ್ಲಿ ಕಲ್ಮಶವಿದ್ದವರು ಭಜನೆಯ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ. ಇದಕ್ಕೆ ಹಿಂದೂ ಸಮಾಜ ಸರಿಯಾದ ಉತ್ತರ ಕೊಡುತ್ತೆ. ಭಕ್ತಿಯಲ್ಲಿ ಬಡವ ಬಲ್ಲಿದ ಮೇಲು ಕೀಳು ಎಂಬುದು ಇರುವುದಿಲ್ಲ. ಕ್ಷುಲಕ ಕಾರಣ ತಂದು ಸಮಾಜದಲ್ಲಿ ಬಿರುಕು ಹುಟ್ಟಿಸುವ ಪ್ರಯತ್ನ ಇದು ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಕುಣಿತ ಭಜನೆಯ ಬಗ್ಗೆ ಈ ರೀತಿಯ ಚರ್ಚೆ ಶುರುವಾಗಿರುವುದು ಕುಣಿತ ಭಜನೆಯಲ್ಲಿ ಭಾಗವಹಿಸುವ ಹೆಣ್ಮಕ್ಕಳಿಗೂ ಮುಜುಗರವನ್ನುಂಟು ಮಾಡಿರುವುದು ಕೂಡಾ ಅಷ್ಟೇ ಸತ್ಯ..