Mangaluru: ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರಪಾಲು

Mangaluru: ಮಂಗಳೂರಿನಲ್ಲಿ (Mangaluru) ತಿಲಕ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾದ ಘಟನೆ ಬೆಳಕಿಗೆ ಬಂದಿದೆ. ಮುಕ್ಕದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ತಿಲಕ್ ಮೂಲತಃ ಶಿವಮೊಗ್ಗ ಮೂಲದವರಾಗಿದ್ದು, ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈತ ಕಾಲೇಜಿನ ಬಿಡುವಿನ ಸಮಯದಲ್ಲಿ ಇತರ ವಿದ್ಯಾರ್ಥಿಗಳ ಜೊತೆ ಸಮುದ್ರದಲ್ಲಿ ಮೋಜು ಮಸ್ತಿಯೊಂದಿಗೆ ಈಜುತ್ತಿದ್ದಾಗ ತಿಲಕ್ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಗೆಳೆಯರಿಗೆ ಆ ಸಮಯದಲ್ಲಿ ಅಲೆಗಳು ಜೋರಾಗಿ ಇದ್ದ ಕಾರಣ ಆತನನ್ನು ರಕ್ಷಣೆ ಮಾಡಲಾಗಲಿಲ್ಲ. ನಂತರ ಸ್ಥಳೀಯರ ನೆರವಿನಿಂದ ಆತನ ಮೃತದೇಹ ಮೇಲಕ್ಕೆತ್ತಲಾಯಿತು. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.