Fishing: ಭರ್ಜರಿ ಮತ್ಸ್ಯ ಬೇಟೆ: ಬರೋಬ್ಬರಿ 250 ಕೆಜಿ ತೊರಕೆ ಮೀನು ಬಲೆಗೆ

Fishing: ಮಲ್ಪೆ (Malpe) ಮೀನುಗಾರರಿಗೆ (fishermen) ಸುದಿನ. ಮೀನುಗಾರರಿಗೆ ಅದೃಷ್ಟ ಅನ್ನೋದು ಬಹಳ ಮುಖ್ಯವಾಗುತ್ತದೆ. ಮೀನುಗಾರಿಕೆಗೆ ಆಳ ಸಮುದ್ರಕ್ಕೆ(Deep sea) ತಿಂಗಳುಗಟ್ಟಲೆ ಹೋಗಿ ಖಾಲಿ ಕೈಯಲ್ಲೂ ವಾಪಾಸ್ ಬರೋದಿದೆ. ಆದರೆ ಎಲ್ಲಾ ದಿನ ಒಂದೇ ರೀತಿ ಇರೋದಿಲ್ಲ. ಮಲ್ಪೆ ಮೀನುಗಾರರಿಗೆ ಭರ್ಜರಿ ಮತ್ಸ್ಯ ಬೇಟೆ ಆಗಿದೆ.

ಸ್ಟಿಂಗ್ ರೇ(Sting ray) ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು, ಇದು ಅಪರೂಪಕ್ಕೆ ಒಮ್ಮೆ ಸಿಗುವ ಭಾರಿ ಗಾತ್ರದ ತೊರಕೆ ಮೀನಾಗಿದೆ.

ಕೆಜಿಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುವ ಈ ಮೀನು, ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದಿದೆ. ಮಲ್ಪೆಯ ಮೀನುಗಾರಿಕಾ ಬೊಟ್ ಗೆ ಸಿಕ್ಕಿದ ಬಂಪರ್ ತೊರಕೆ ಇದಾಗಿದೆ.

Leave A Reply

Your email address will not be published.