BSNL Recharge Plan: ಕೇವಲ 7 ರೂಪಾಯಿನಲ್ಲಿ ಒಂದು ವರ್ಷಕ್ಕೆ ರಿಚಾರ್ಜ್ ಮಾಡಿ! BSNL ಬಿಗ್ ಆಫರ್

BSNL Recharge Plan: ಪ್ರಸ್ತುತ BSNL ತನ್ನ 4G ಸೇವೆಯನ್ನು ದೇಶದ ಅನೇಕ ನಗರಗಳಲ್ಲಿ ಪ್ರಾರಂಭಿಸಿದ್ದು, ಈ ನಡುವೆ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯು ಈಗ 5G ಗೆ ಕೂಡ ರೆಡಿ ಆಗಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಹೆಚ್ಚುತ್ತಿರುವ ಮೊಬೈಲ್ ದರಗಳ ದೃಷ್ಟಿಯಿಂದ, ಲಕ್ಷಗಟ್ಟಲೆ ಬಳಕೆದಾರರು ಇತ್ತೀಚೆಗೆ ತಮ್ಮ ಸಂಖ್ಯೆಯನ್ನು BSNL ಗೆ ಪೋರ್ಟ್ ಮಾಡಿದ್ದಾರೆ. ಅದಕ್ಕಾಗಿ ತನ್ನ ಸೇವಾ ಗುಣಮಟ್ಟವನ್ನು ಸುಧಾರಿಸುವಲ್ಲಿ ನಿರತವಾಗಿದೆ ಮತ್ತು ಸಾವಿರಾರು ಹೊಸ ಮೊಬೈಲ್ ಟವರ್‌ಗಳನ್ನು ಕೂಡ ಸ್ಥಾಪಿಸಿದೆ.

ಅದಲ್ಲದೆ ತನ್ನ ನೆಟ್‌ವರ್ಕ್ ಅನ್ನು ಅಪ್‌ಗ್ರೇಡ್ ಮಾಡುವುದರ ಜೊತೆಗೆ, BSNL ಈಗ ಖಾಸಗಿ ಟೆಲ್ಕೋಸ್ ಏರ್‌ಟೆಲ್, ಜಿಯೋ ಮತ್ತು ವಿಐನ ಪ್ರಿಪೇಯ್ಡ್ ಯೋಜನೆಗಳಿಗೆ ಕಠಿಣ ಸವಾಲನ್ನು ನೀಡಲು 395 ದಿನಗಳ ಮಾನ್ಯತೆಯೊಂದಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ಜಾರಿ ತಂದಿದೆ. ಇಲ್ಲಿ ಬಳಕೆದಾರರಿಗೆ ಉಚಿತ ಕರೆ, ಡೇಟಾ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಹೌದು, ಇತರೆ ಯಾವುದೇ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ BSNL ಬೆಸ್ಟ್ ಅನ್ನಬಹುದು. ಇದು 13 ತಿಂಗಳ ಮಾನ್ಯತೆ ಹೊಂದಿದೆ. BSNL ನ ಈ ಪ್ಲಾನ್‌ನ ವಿಶೇಷವೆಂದರೆ ಬಳಕೆದಾರರು ಇದಕ್ಕಾಗಿ ದಿನಕ್ಕೆ 7 ರೂಪಾಯಿಗಳಿಗಿಂತ ಕಡಿಮೆ ಖರ್ಚು ಮಾಡಿದರೆ ಸಾಕು.

ಈ BSNL ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 2,399 ರೂ. ಗಳಲ್ಲಿ ಬರುತ್ತದೆ, ಅಂದರೆ ನೀವು ದಿನಕ್ಕೆ ಸುಮಾರು 6.57 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಯೋಜನೆಯ ಮಾನ್ಯತೆ 395 ದಿನಗಳು. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಅದ್ಭುತವಾದ ಲಭ್ಯವಿರುವ ಪ್ರಯೋಜನಗಳನ್ನು ನೀಡಲಾಗಿದೆ.

ಈ ಯೋಜನೆಯಲ್ಲಿ ಬಳಕೆದಾರರು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡುವ ಪ್ರಯೋಜನವನ್ನು ಪಡೆಯುತ್ತಾರೆ. ಜೊತೆಗೆ ಈ ಯೋಜನೆಯಲ್ಲಿ, ಬಳಕೆದಾರರಿಗೆ ದಿನಕ್ಕೆ 2GB ಹೈ ಸ್ಪೀಡ್ ಡೇಟಾ ಆಯ್ಕೆ ನೀಡಲಾಗಿದೆ. ನಂತರ, ಬಳಕೆದಾರರು 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಪ್ರಯೋಜನ ಸಿಗಲಿದೆ.

ಈ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 100 ಉಚಿತ SMS ನ ಪ್ರಯೋಜನವನ್ನು ನೀಡುತ್ತದೆ. ಜೊತೆಗೆ ಹಾರ್ಡಿ ಗೇಮ್ಸ್, ಅರೆನಾ ಗೇಮ್ಸ್, ಜಿಂಗ್ ಮ್ಯೂಸಿಕ್, ವಾವ್ ಎಂಟರ್ಟೈನ್ಮೆಂಟ್, ಬಿಎಸ್‌ಎನ್‌ಎಲ್ ಟ್ಯೂನ್ಸ್ ಇತ್ಯಾದಿಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

2 Comments
  1. Xavier says

    40kbps

    1. Xavier 2 says
Leave A Reply

Your email address will not be published.