Ovia viral video: ಕಿರಾತಕ ನಟಿ ಓವಿಯ ಖಾಸಗಿ ವಿಡಿಯೋ ಲೀಕ್! ಇದಕ್ಕೆಲ್ಲಾ ಆತನೇ ಕಾರಣವೆಂದ ಓವಿಯ

Share the Article

ia viral video: ಯಶ್ ಜೊತೆಗೆ ಕಿರಾತಕ ಸಿನಿಮಾದಲ್ಲಿ ನಟಿಸಿದ ಓವಿಯ ಹೆಲೆನ್ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಈಗಾಗಲೇ ಓವಿಯಾದು ಎನ್ನಲಾದ 16 ಸೆಕೆಂಡ್‌ಗಳ ಖಾಸಗಿ ವಿಡಿಯೋ ಹಿಂದಿರೋದು ಮಾಜಿ ಬಾಯ್ ಫ್ರೆಂಡ್ ಅಂತಾ ಕಿರಾತಕ ಬೆಡಗಿ ಆರೋಪಿಸಿದ್ದಾರೆ.

ಹೌದು, ಓವಿಯಾದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡ್ತಿದೆ. ಸದ್ಯ, ಈ ಬಗ್ಗೆ ಕೇರಳದ ತ್ರಿಶೂರ್‌ನ ಪೊಲೀಸ್‌ ಠಾಣೆಯಲ್ಲಿ ಕಂಪ್ಲೆಂಟ್ ನೀಡಿರೋ ನಟಿ, ಮಾಜಿ ಬಾಯ್ ಫ್ರೆಂಡ್ ಈ ವಿಡಿಯೋಗಳ ಹಿಂದಿದ್ದಾನೆ ಅಂತಾ ಆರೋಪಿಸಿದ್ದಾರೆ.

ತ್ರಿಶೂ‌ರ್ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ, ಮಾಜಿ ಗೆಳೆಯ ತಾರಿಖ್ ವಿರುದ್ಧ ನಟಿ ಓವಿಯಾ (Ovia viral video) ಆರೋಪಗಳನ್ನು ಮಾಡಿದ್ದು, ಆತನ ಕೆಟ್ಟ ನಡುವಳಿಕೆಗಳಿಂದ ನಾನು ಇತ್ತೀಚೆಗೆ ಆತನಿಂದ ದೂರವಾಗಿದ್ದೆ. ಹೀಗಾಗಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾನೆ ಅಂತಾ ನಟಿ ಆರೋಪಿಸಿದ್ದಾರೆ. ಅಲ್ಲದೇ ಆತ ಹಲವು ಮಹಿಳೆಯರ ಇಂಥಾ ವಿಡಿಯೋ ಹೊಂದಿದ್ದಾನೆ ಅನ್ನೋ ಆರೋಪವನ್ನೂ ಓವಿಯಾ ಮಾಡಿದ್ದಾರೆ.

ವೈರಲ್ ವಿಡಿಯೋ ಸಂಬಂಧ ಕಿರಾತಕ ಬೆಡಗಿ ಕಾನೂನಿನ ಮೊರೆ ಹೋಗಿದ್ದು, ಈ ಪ್ರಕರಣ ಸಂಬಂಧ ಪೊಲೀಸರ ತನಿಖೆ ಶುರುವಾಗಿದ್ದು, ವಿಡಿಯೋ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ.

Leave A Reply