Bomb Threat: ಬೆಂಗಳೂರು ಸೇರಿ 24ಗಂಟೆಯಲ್ಲಿ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ!

Bomb Threat: ಬೆಂಗಳೂರು ಸೇರಿ 24ಗಂಟೆಯೊಳಗೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threat) ಕರೆಗಳು ಬಂದಿದೆ. ಆ ಮೂಲಕ ಒಂದು ವಾರದಲ್ಲಿ 35ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.

ಹೌದು,ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ಹೊರಡಲು ಸಿದ್ಧವಾಗಿದ್ದ ಆಕಾಶ ಏರ್ (Akash Air) ವಿಮಾನಕ್ಕೆ ಬಾಂಬ್ ಬೆದರಿಕೆಯ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಸಂಪೂರ್ಣ ಪರಿಶೀಲನೆ ನಡೆಸಿದ್ದು,ನೆಟ್‌ವರ್ಕ್ ಆಪರೇಷನ್ ಕಂಟ್ರೋಲ್ (NOC) ಒಪ್ಪಿಗೆ ನೀಡಿದ ಬಳಿಕ ಸಂಜೆ ಮುಂಬೈಗೆ ಹೊರಟಿತು.

ಇನ್ನು ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನ (Vistara Flight) ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಬೆದರಿಕೆಯ ಕರೆ ನಂತರ , ತಕ್ಷಣ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಕಳುಹಿಸುವಂತೆ ನಿರ್ಧರಿಸಲಾಯಿತು. ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಕಳುಹಿಸಿ, ಬಳಿಕ ಅಲ್ಲಿಂದ ಲಂಡನ್‌ಗೆ ಕಳುಹಿಸಲಾಯಿತು.

ಇನ್ನು ಜೈಪುರ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ (Air India) ಎಕ್ಸ್‌ಪ್ರೆಸ್‌ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಸ್ವಲ್ವ ಸಮಯದ ಬಳಿಕ ವಿಮಾನ ಟೇಕ್‌ಆಫ್ ಆಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ ತಡವಾಗಿ 7:45ಕ್ಕೆ ಟೇಕ್ ಆಫ್ ಆಯಿತು.

ಒಟ್ಟು ಒಂದು ವಾರದಲ್ಲಿ ಸುಮಾರು 35 ವಿಮಾನಗಳು ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಅಧಿಕಾರಿಗಳು ಆ ಸಂದರ್ಭದಲ್ಲಿ ಭದ್ರತಾ ಪರಿಶೀಲನೆ ನಡೆಸಿ, ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು.

ಬಾಂಬ್ ಬೆದರಿಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu) ಮಾತನಾಡಿ, ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಮೂರು ಸೇರಿದಂತೆ ಸೋಮವಾರ ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಲಾಗಿದೆ ಎಂದರು. ಈ ಪರಿಣಾಮ 17 ವರ್ಷದ ಹುಡುಗನನ್ನು ಮುಂಬೈ ಪೊಲೀಸರು ಬುಧವಾರ ಕಸ್ಟಡಿಗೆ ತೆಗೆದುಕೊಂಡಿದ್ದು, ಹೆಚ್ಚಿನ ಕರೆಗಳನ್ನು ಅಪ್ರಾಪ್ತರು ಮತ್ತು ಕುಚೇಷ್ಟೆಗಾರರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಆದ್ರೆ ಇಂತಹ ಫೇಕ್ ಕರೆ ಮಾಡಲು ಪ್ರಯತ್ನಿಸುವ ಜನರಿಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ನಮ್ಮ ಇಲಾಖೆಯ ನಿಯಮಗಳು ಮತ್ತು ಶಾಸನಗಳಲ್ಲಿ ಬದಲಾವಣೆ ತರಲು ಸೂಚಿಸಿದ್ದೇವೆ ಎಂದು ತಿಳಿಸಿದರು.

1 Comment
  1. Üsküdar tesisatçı su kaçağı Evinizde su kaçağı varsa Üsküdar Su Kaçak Tespiti ekibi kesinlikle en iyisi. https://fbadult.com/blogs/6401/%C3%9Csk%C3%BCdar-su-ka%C3%A7a%C4%9F%C4%B1-tespiti

Leave A Reply

Your email address will not be published.