D K Shivakumar: ನನ್ನನ್ನು ನೆನಪಿಸಿಕೊಳ್ಳದಿದ್ರೆ ಕುಮಾರಸ್ವಾಮಿಗೆ ನಿದ್ದೆ ಬರಲ್ಲ: ಇಡಿಯವರು ಅವರ ಕೆಲಸ ಮಾಡಲಿ – ಡಿಕೆಶಿ

Share the Article

D K Shivakumar: ಕುಮಾರಸ್ವಾಮಿ(H D Kumaraswami) ವಿರುದ್ಧ ಡಿಸಿಎಂ(dcm) ಡಿ.ಕೆ ಶಿವಕುಮಾರ್(D K Shivakumar) ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ನನ್ನನ್ನ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ನೆನಪಿಸಿಕೊಳ್ಳದಿದ್ರೆ ಅವರಿಗೆ ನಿದ್ದೆಯೇ ಬರೋದಿಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ. ಅವರಿಬ್ಬರ ಮಧ್ಯೆ ಕೂಲ್ಡ್‌ ವಾರ್(Cold war) ದಿನಂಪ್ರತೀ ನಡೆಯುತ್ತಲೇ ಇದೆ. ಈಗಂತೂ ಚೆನ್ನಪಟ್ಟಣ ಉಪ ಚುನಾವಣೆ(By election) ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.

ಅವರು ಹಾಗೂ ಅವರ ಬ್ರದರ್ ರೇವಣ್ಣ(H D Revanna) ಕೆಲ ದಾಖಲೆ ಹುಡುಕುತ್ತಿದ್ದಾರೆ. ನನ್ನ ದಾಖಲೆಗಳೆಲ್ಲಾ ಸಿಬಿಐ, ಇಡಿ ಬಳಿಯೇ ಇದೆ. ನನ್ನನ್ನೇ ಕೇಳಿದ್ರೆ ಅದೆಲ್ಲವನ್ನ ಕಳಿಸಿಕೊಡ್ತಿದ್ದೆ. ರೇವಣ್ಣ ಯಾವುದೋ ಕಮಿಟಿ ಚೇರ್ಮನ್ ಆಗಿದ್ದಾರೆ. ಅದಕ್ಕೆ ಅವರು ಅಧಿಕಾರಿಗಳಿಗೆ ದಾಖಲೆಗಳನ್ನ ತನ್ನಿ ಅಂತಿದ್ದಾರೆ ಎಂದರು.

ಇನ್ನು ಮುಡಾ ಪ್ರಕರಣ ಸಂಬಂಧ ಮುಡಾ ಕಚೇರಿಯಲ್ಲಿ ಇಡಿಯವರು ದಾಖಲೆಗಳ ಪರಿಶೀಲನೆ ನಡೆಸುತ್ತಿರಬಹುದು. ಇದನ್ನ ದಾಳಿ ಮಾಡಿದ್ದಾರೆ ಅಂತಾ ಯಾಕೆ ಹೇಳ್ತೀರಾ ? ಇದರಲ್ಲಿ ಅನ್ಯಾಯ ಏನಿದೆ? ಅವರು ದಾಖಲೆಯನ್ನ ಪಡೆದು ಪರಿಶೀಲನೆ ಮಾಡ್ತಾರೆ. ಹೊಸದಾಗಿ ನಾವು ದಾಖಲೆಗಳನ್ನ ತಿದ್ದಲು ಆಗುತ್ತಾ?
ಈ ಎಲ್ಲಾ ವಿಚಾರಗಳು ಸಾರ್ವಜನಿಕರ ಮುಂದೆ ಇದೆ. ಇಡಿಯವರು ಅವರ ಕರ್ತವ್ಯವನ್ನು ಮಾಡಲಿ. ವಾಸ್ತವಾಂಶವನ್ನ ಅವರು ತಿಳಿದುಕೊಳ್ಳಲಿ ಎಂದು ತಿಳಿಸಿದರು.

Leave A Reply