Dakshina Kannada: ಜಗತ್ತು 5ಜಿಯಲ್ಲಿ ಸಾಗುತ್ತಿದ್ದರೆ, ಅನಾರೋಗ್ಯ ಪೀಡಿತ ವೃದ್ಧ ಕುರ್ಚಿಯಲ್ಲಿ ಸಾಗಾಟ: ಕನಿಷ್ಠ ಮೂಲಸೌಕರ್ಯವಿಲ್ಲದ ಬುದ್ದಿವಂತರ ಜಿಲ್ಲೆ

Share the Article

Dakshina Kannada: ಹೇಳಿಕೊಳ್ಳಲು ಬುದ್ದಿವಂತರ ಜಿಲ್ಲೆ. ಆದರೆ ಈ ಜಿಲ್ಲೆಯ ಕೆಲವು ಹಳ್ಳಿಗಳ ಮೂಲಸೌಕರ್ಯದ ಬಗ್ಗೆ ದೇವರಿಗೇ ಪ್ರೀತಿ. ಅದರಲ್ಲೂ ಸುಳ್ಯ(Sulia) ತಾಲೂಕಿನ ಅದೆಷ್ಟೋ ಗ್ರಾಮ(Village), ಊರು, ಹಳ್ಳಿಗಳಿಗೆ ಇಂದಿಗೂ ಸರಿಯಾದ ರಸ್ತೆ ವ್ಯವಸ್ಥೆ(Road Facility) ಇಲ್ಲ. ಆರಿಸಿ ಬಂದ ಸುಳ್ಯ ವಿಧಾನ ಸಭಾ ಕ್ಷೇತ್ರದ(Sulia Constitution) ಜನಪ್ರತಿನಿಧಿಗಳು ಗಡದ್ದಾಗಿ ನಿದ್ದೆ ಮಾಡಿ ಹೋಗ್ತಾರೆ. ಇತ್ತ ಜನರ ಜೀವನ ಮಾತ್ರ ಸರಿಯಾದ ರಸ್ತೆಗಳ ಸೌಕರ್ಯ ಇಲ್ಲದೆ ದುಸ್ತರವಾಗಿದೆ.

ಸರಿಯಾದ ರಸ್ತೆ ಇಲ್ಲದ ಕಾರಣ ಅನಾರೋಗ್ಯ ಪೀಡಿತ ವೃದ್ದರೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ, ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಸುಳ್ಯದ ಗುತ್ತಿಗಾರು ಗ್ರಾಮದಿಂದ ವರದಿಯಾಗಿದೆ. ಗುತ್ತಿಗಾರಿನ ಮಡಪ್ಪಾಡಿ ಗ್ರಾಮದ ನಡುಬೆಟ್ಟಿನಲ್ಲಿ ಸುಮಾರು ಹದಿನಾಲ್ಕು ಮನೆಗಳಿದ್ದು, ಅದನ್ನು ಸಂಪರ್ಕಿಸಲು ಇರುವ ಕಚ್ಚಾ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಕಾರಣದಿಂದಾಗಿ ಯಾವುದೇ ವಾಹನಗಳ ಚಾಲಕರು ಈ ಊರಿಗೆ ಬರಲು ಒಪ್ಪುವುದಿಲ್ಲ.

ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳಾಗಿರುವ ಕಾರಣ ಬೇಸಗೆಯಲ್ಲಿ ಮಾತ್ರ ಜೀಪು, ಪಿಕಪ್ಗಳು ಸಂಚರಿಸುತ್ತವೆ. ಮಳೆಗಾಲದಲ್ಲಿ ಯಾವ ವಾಹನಗಳೂ ಸಂಚರಿಸಲಾಗದ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲ ರೀತಿಯ ಕೃಷಿ ಉತ್ಪನ್ನ ಮತ್ತು ಮನೆ ಬಳಕೆಯ ಸಾಮಗ್ರಿಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಸ್ಥಿತಿ ಈ ಊರಿನ ಜನರದ್ದು. ಹಾಗೆ ಯಾರಾದರು ಅನಾರೋಗ್ಯ ಪೀಡಿತರಾದರೆ ಹೊತ್ತುಕೊಂಡೇ ಸಾಗಿ ಆಸ್ಪತ್ರೆ ಸೇರಿಸುವ ಅನಿವಾರ್ಯ ಈ ಊರಿನ ಜನರದ್ದು.

ಆದರೆ ಜನ ಪ್ರತಿನಿಧಿಗಳು ಮಾತ್ರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ, ಓಟಿನ ವೇಳೆ ಮಾತ್ರ ಬಂದು ಓಟು ಕೇಳಿ, ಪಳ್ಳೆಂದು ನಗೆಬೀರಿ ಹೋಗುತ್ತಾರೆ. ನಂತರ ಮತದಾರರನ್ನು ಮರೆತು, ತಮ್ಮ ಪಾಡಿಗೆ ತಾವಿರುತ್ತಾರೆ. ಮತ್ತೆ ಈ ಊರು ನೆನಪಿಗೆ ಬರೋದು ಮುಂದಿನ ಚುನಾವಣೆ ವೇಳೆಗೆ. ಇಂಥ ರಾಜಕಾರಣಿಗಳಿಗೆ ಊರ ಜನರೇ ಪಾಠ ಕಲಿಸಬೇಕು.

Leave A Reply