Shiksha Copilot: ಶಾಲೆಗಳಿಗೆ ಕಾಲಿಡಲಿದೆ ‘ಶಿಕ್ಷಾ ಕೊಪೈಲಟ್’: ಸರ್ಕಾರಿ ಶಾಲಾ ಶಿಕ್ಷಕರಿಗೂ ಇನ್ನು ಮುಂದೆ AI ನೆರವು

Shiksha Copilot: ಶಿಕ್ಷಕರಿಗೆ ಬೋಧನೆಯಲ್ಲಿ ಸಹಾಯ ಮಾಡುವ ‘ಶಿಕ್ಷಾ ಕೊಪೈಲಟ್(Shiksha Copilot)’ AI ಚಾಲಿತ ಡಿಜಿಟಲ್ ಸಹಾಯಕವನ್ನು ಶಾಲಾ ಶಿಕ್ಷಣ ಸಚಿವ(Education Minister) ಮಧು ಬಂಗಾರಪ್ಪ(Madhu Bangarappa) ಉದ್ಘಾಟಿಸಿದರು. ಈ AI ಮಕ್ಕಳ(Children) ಕಲಿಕೆಯನ್ನು ಸುಧಾರಿಸಲು ಮತ್ತು ಸಮಗ್ರ ಬೋಧನಾ ಸಂಪನ್ಮೂಲಗಳನ್ನು ರಚಿಸಿಕೊಳ್ಳಲು ಶಿಕ್ಷಕರಿಗೆ(Teachers) ಸಹಾಯ ಮಾಡಲಿದೆ.

‘ಶಿಕ್ಷಾ ಕೊಪೈಲಟ್’ AI ಚಾಲಿತ ಡಿಜಿಟಲ್ ಸಹಾಯಕವು ಸಂಶೋಧನಾ ಯೋಜನೆಯಾಗಿದ್ದು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾ ನಡುವಿನ ಸಹಯೋಗವಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ‘ಸರ್ಕಾರಿ ಶಾಲೆಗಳು ಬೋರ್ಡ್ ಪರೀಕ್ಷೆಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿವೆ ಎಂದು ಟೀಕಿಸಲಾಗುತ್ತದೆ. ಫಲಿತಾಂಶಗಳನ್ನು ಸುಧಾರಿಸಲು, ಶಿಕ್ಷಾ ಕೊಪೈಲಟ್‌ನಂತಹ ಉಪಕ್ರಮಗಳನ್ನು ತರಲಾಗಿದೆ” ಎಂದು ಹೇಳಿದ್ದಾರೆ.

“ಪಾಠ ಯೋಜನೆ ಮತ್ತು ಸಂಪನ್ಮೂಲ ಉತ್ಪಾದನೆಯನ್ನು ಸ್ವಯಂ ಚಾಲಿತವಾಗಿ ನೀಡುವ ಮೂಲಕ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ ಅಗತ್ಯಗಳ ಮೇಲೆ ಕೇಂದ್ರೀಕರಿಸಲು ಹೆಚ್ಚಿನ ಸಮಯವನ್ನು ಕಳೆಯಬಹುದು. ಈ AI ಚಾಲಿತ ವಿಧಾನವು ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ತರಗತಿಗಳನ್ನು ನಿರ್ವಹಿಸುವಲ್ಲಿ ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪರಿಹರಿಸುವಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ” ಎಂದು ಹೇಳಿದ್ದಾರೆ.

‘ಶಿಕ್ಷಾ ಕೊಪೈಲಟ್’ ಎಂದರೇನು?
ಇದು ಚಟುವಟಿಕೆಗಳು, ವೀಡಿಯೊಗಳು ಮತ್ತು ರಸಪ್ರಶ್ನೆಗಳು ಸೇರಿದಂತೆ ಪಾಠದ ಯೋಜನೆಗಳನ್ನು ರೂಪಿಸುವ ಜನರೇಟಿವ್ AI ಡಿಜಿಟಲ್ ಅಸಿಸ್ಟೆಂಟ್ ಆಗಿದ್ದು, ನಿಮಿಷಗಳಲ್ಲಿ ಸ್ಥಳೀಯ ಪಠ್ಯಕ್ರಮದಲ್ಲಿ ಆಧಾರಿತವಾದ ಸಂವಾದಾತ್ಮಕ ಕಲಿಕೆಯ ಅನುಭವಗಳನ್ನು ಸೃಷ್ಟಿಸುತ್ತದೆ.

ಈ ಯೋಜನೆಯು ಆರಂಭದಲ್ಲಿ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿನ ಎಲ್ಲಾ ಶಿಕ್ಷಣ ಜಿಲ್ಲೆಗಳಾದ್ಯಂತ ಸರ್ಕಾರಿ ಶಾಲೆಗಳ 1,000 ಶಿಕ್ಷಕರನ್ನು ಒಳಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯು ರಾಜ್ಯಾದ್ಯಂತ ಹೆಚ್ಚಿನ ಶಿಕ್ಷಕರು ಮತ್ತು ಶಾಲೆಗಳನ್ನು ತಲುಪಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ‘ಶಿಕ್ಷಾ ಕೊಪೈಲಟ್’ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನದಂತಹ ವಿಷಯಗಳನ್ನು ಇದು ಒಳಗೊಂಡಿದೆ.

Leave A Reply

Your email address will not be published.